ನವದೆಹಲಿ: ಕಾಮನ್ವೆಲ್ತ್ ಆಫ್ ಡೊಮಿನಿಕಾ ತನ್ನ ಅತ್ಯುನ್ನತ ರಾಷ್ಟ್ರೀಯ ಗೌರವ “ದಿ ಡೊಮಿನಿಕಾ ಅವಾರ್ಡ್ ಆಫ್ ಹಾನರ್ʼ ಅನ್ನು ಪ್ರಧಾನ ಮಂತ್ರಿ ನರೇಂದ್ರ ಮೋದಿಯವರಿಗೆ ನೀಡಿ ಗೌರವಿಸಿದೆ.
ಕೋವಿಡ್-19 ಸಾಂಕ್ರಾಮಿಕ ಸಮಯದಲ್ಲಿ ಡೊಮಿನಿಕಾಕ್ಕೆ ಪ್ರಧಾನಿ ಮೋದಿಯವರು ನೀಡಿದ ಕೊಡುಗೆಗಳು ಮತ್ತು ಉಭಯ ದೇಶಗಳ ನಡುವಿನ ಪಾಲುದಾರಿಕೆಯನ್ನು ಬಲಪಡಿಸುವ ಅವರ ಸಮರ್ಪಣೆಯನ್ನು ಗುರುತಿಸಿ ಡೊಮಿನಿಕಾ ಅಧ್ಯಕ್ಷ ಸಿಲ್ವಾನಿ ಬರ್ಟನ್ ಅವರು ಪ್ರಶಸ್ತಿಯನ್ನು ನೀಡಿದರು.
ಡೊಮಿನಿಕಾದಿಂದ ಅತ್ಯುನ್ನತ ರಾಷ್ಟ್ರೀಯ ಪ್ರಶಸ್ತಿಯನ್ನು ನೀಡಿ ಗೌರವಿಸಿರುವುದಕ್ಕೆ ಮೋದಿ ಕೃತಜ್ಞತೆಯನ್ನು ಸಲ್ಲಿಸಿದರು. ಗೌರವವನ್ನು ಭಾರತದ 140 ಕೋಟಿ ಜನರಿಗೆ ಅರ್ಪಿಸಿದರು. “ಈ ಗೌರವ ತನಗೆ ಮಾತ್ರವಲ್ಲ, ಭಾರತದ 140 ಕೋಟಿ ಜನರಿಗೆ, ಅವರ ಪ್ರಯತ್ನಗಳು, ಅವರ ಮೌಲ್ಯಗಳು ಮತ್ತು ಅವರ ಸಂಪ್ರದಾಯಗಳಿಗೆ ಸಮರ್ಪಿಸುತ್ತೇನೆ” ಎಂದು ಪ್ರಧಾನಿ ಹೇಳಿದರು.
ಭಾರತ ಮತ್ತು ಡೊಮಿನಿಕಾ ಎರಡು ಪ್ರಜಾಪ್ರಭುತ್ವಗಳಾಗಿದ್ದು, ವಿಶ್ವಕ್ಕೆ ಮಹಿಳಾ ಸಬಲೀಕರಣದ ಮಾದರಿಗಳಾಗಿವೆ ಎಂದು ಅವರು ಹೇಳಿದರು. ಕೋವಿಡ್ -19 ನಂತಹ ಸಾಂಕ್ರಾಮಿಕ ಸಮಯದಲ್ಲಿ ಡೊಮಿನಿಕಾದ ಜನರಿಗೆ ಸಹಾಯ ಮಾಡಲು ಭಾರತಕ್ಕೆ ಸಾಧ್ಯವಾಯಿತು ಎಂಬುದು ಆಳವಾದ ತೃಪ್ತಿಯ ವಿಷಯ ಎಂದು ಮೋದಿ ಹೇಳಿದರು.
Gratitude to President Sylvanie Burton of Dominica for conferring the 'Dominica Award of Honour' upon me. This honour is dedicated to my sisters and brothers of India. It is also indicative of the unbreakable bond between our nations. pic.twitter.com/Ro27fpSyr3
— Narendra Modi (@narendramodi) November 20, 2024
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.