ಭೋಪಾಲ್: ಮನೆಯಲ್ಲಿ ಶೌಚಾಲಯ ನಿರ್ಮಿಸಬೇಕೆಂಬ ಆಕೆಯ ಕೋರಿಕೆಯನ್ನು ಮನೆಯವರು ಯಾರೂ ಕೇಳಲೇ ಇಲ್ಲ. ಹೀಗಾಗಿ ಆಕೆ ಏಕಾಂಗಿಯಾಗಿಯೇ ಶೌಚಾಲಯ ನಿರ್ಮಿಸುವ ಕಾರ್ಯಕ್ಕೆ ಧುಮುಕಬೇಕಾಯಿತು. ಆಕೆಯ ಬೆಂಬಲಕ್ಕೆ ಮನೆಯವರು ನಿಲ್ಲಲೇ ಇಲ್ಲ. ಅದಕ್ಕಾಗಿ ಆಕೆ ತನ್ನ ಸ್ಕಾಲರ್ಶಿಪ್ ಹಣವನ್ನು ಬಳಕೆ ಮಾಡಬೇಕಾಯಿತು. ಕೊನೆಗೂ ಶತಪ್ರಯತ್ನದಿಂದ ಅತಿ ಅವಶ್ಯಕ ಶೌಚಾಲಯವನ್ನು ನಿರ್ಮಿಸಿ ಬಯಲು ಶೌಚಾಲಯವನ್ನು ಆಶ್ರಯಿಸುವುದರಿಂದ ಆಕೆ ಮುಕ್ತಿಯನ್ನು ಪಡೆದಳು.
ಇದು ಮಧ್ಯಪ್ರದೇಶದ ಸಹೋರ್ ಜಿಲ್ಲೆಯ ಗುರದಿಯ ವರ್ಮಾ ಗ್ರಾಮದ ಅನಿತಾ ಎಂಬ 21 ವರ್ಷದ ಯುವತಿಯ ಕಥೆ. ಆಕೆ ಶೌಚಾಲಯವನ್ನು ಕಟ್ಟಲು ಪಟ್ಟ ಶ್ರಮ ನಿಜಕ್ಕೂ ಇತರರಿಗ ಮಾದರಿ. ಆಕೆಯ ಕಾರ್ಯ ದೇಶದಲ್ಲಿ ಬದಲಾವಣೆಯಲ್ಲಿ ತರುವ ನಿಟ್ಟಿನಲ್ಲಿ ಇಟ್ಟ ಮಹತ್ವದ ಹೆಜ್ಜೆ.
ದೇಶದಲ್ಲಿ ಸ್ವಚ್ಛಭಾರತ ಆಂದೋಲನ ಆರಂಭವಾದ ಬಳಿಕ ಆಕೆಯ ಗ್ರಾಮಕ್ಕೆ ಆಗಮಿಸಿದ ಎನ್ಜಿಓವೊಂದು ಶೌಚಾಲಯದ ಮಹತ್ವ ಮತ್ತು ಬಯಲು ಶೌಚಾಲಯದಿಮದ ಆಗುವ ದುಷ್ಪರಿಣಾಮಗಳ ಬಗ್ಗೆ ಅರಿವು ಮೂಡಿಸಿತ್ತು. ಅದನ್ನು ಆಕೆಯ ಗ್ರಾಮಸ್ಥರು ಒಂದು ಕಿವಿಯಿಂದ ಕೇಳಿ ಮತ್ತೊಂದು ಕಿವಿಯಲ್ಲಿ ಬಿಟ್ಟಿದ್ದಾರೆ. ಆದರೆ ಅನಿತಾಳ ಮನಸ್ಸಲ್ಲಿ ಅದು ಆಳವಾಗಿ ಬೇರೂರಿ ಬಿಟ್ಟಿತ್ತು.
ಕಿತ್ತು ತಿನ್ನುವ ಬಡತನ, ಆದಾಯದ ಕೊರತೆಯಿಂದ ಮನೆಯವರು ಶೌಚಾಲಯ ನಿರ್ಮಿಸಲು ಒಪ್ಪದೇ ಹೋದರೂ ಅನಿತಾ ಮಾತ್ರ ಸುಮ್ಮನೇ ಕುಳಿತುಕೊಳ್ಳಲಿಲ್ಲ. ಎನ್ಜಿಓ ಸಲಹೆಯಂತೆ ಟ್ವಿನ್ ಪಿಟ್ ಶೌಚಾಲಯ ನಿರ್ಮಾಣಕ್ಕೆ ಮುಂದಾದಳು, ತನ್ನ ಮನೆಯ ಹಿಂಬದಿಯಲ್ಲಿ ತಾನೇ ಸ್ವತಃ ಗುಂಡಿಯನ್ನು ತೋಡಳು ಆರಂಭಿಸಿದಳು, ಬಳಿಕ ತನ್ನ ಅಕೌಂಟ್ಗೆ ೪4 ಸಾವಿರ ಸ್ಕಾಲರ್ಶಿಪ್ ಹಣ ಬಂದಿದೆ ಎಂದು ತಿಳಿದ ಆಕೆ ತಕ್ಷಣವೇ 3 ಸಾವಿರ ರೂಪಾಯಿಯನ್ನು ಟಾಯ್ಲೆಟ್ ನಿರ್ಮಾಣಕ್ಕೆ ಬಳಸಿದ್ದಾಳೆ. ಈ ಮೂಲಕ ಎಲ್ಲರಿಗೂ ಸ್ಫೂರ್ತಿಯಾಗಿದ್ದಾಳೆ.
ಇದೀಗ ಅವಳಿಂದ ಪ್ರೇರಣೆಯನ್ನು ಪಡೆದು ಅವಳ ಗ್ರಾಮದಲ್ಲಿ 70 ಶೌಚಾಲಯಗಳನ್ನು ನಿರ್ಮಿಸಲಾಗಿದೆ. ಸಮಾಜದಲ್ಲಿ ಬದಲಾವಣೆ ತಂದು ಇತರರಿಗೆ ಮಾದರಿಯಾಗುವುದು ಎಂದರೆ ಇದೇ ಅಲ್ಲವೇ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.