ಬೆರ್ನ್: ಸ್ವಿಟ್ಜರ್ಲೆಂಡ್ ಸರ್ಕಾರವು ಸಾರ್ವಜನಿಕ ಸ್ಥಳಗಳಲ್ಲಿ ಮುಖ ಮುಚ್ಚುವ ಉಡುಪು ಧರಿಸುವುದನ್ನು ನಿಷೇಧಿಸಿದೆ. “ಬುರ್ಖಾ ನಿಷೇಧ” ಎಂದೇ ಇದನ್ನು ಕರೆಯಲಾಗುತ್ತಿದ್ದು, ಮುಂದಿನ ವರ್ಷದ ಜನವರಿ 1 ರಂದು ಜಾರಿಗೆ ಬರಲಿದೆ.
ಫೆಡರಲ್ ಕೌನ್ಸಿಲ್ ಪ್ರಕಾರ, ನಿಷೇಧವು ಜನವರಿ 1ರ ನಿಗದಿತ ದಿನಾಂಕದಿಂದ ಜಾರಿಗೆ ಬರಲಿದೆ ಮತ್ತು ಅದನ್ನು ಉಲ್ಲಂಘಿಸುವವರಿಗೆ 1,000 ಸ್ವಿಸ್ ಫ್ರಾಂಕ್ ಅಥವಾ ರೂ 96,525 ದಂಡ ವಿಧಿಸಲಾಗುತ್ತದೆ. 2021 ರಲ್ಲಿ ಸ್ವಿಸ್ ಜನಾಭಿಪ್ರಾಯ ಸಂಗ್ರಹವು ಈ ನೀತಿಯನ್ನು ಅನುಮೋದಿಸಿತ್ತು, ಆದರೆ ಇದಕ್ಕೆ ಮುಸ್ಲಿಂ ಸಂಘಟನೆಗಳು ವಿರೋಧ ವ್ಯಕ್ತಪಡಿಸಿದ್ದವು.
51.2% ಸ್ವಿಸ್ ಮತದಾರರು ನಿಷೇಧದ ಪರವಾಗಿ ಮತ ಹಾಕಿದ್ದಾರೆ.
ಫೆಡರಲ್ ಆಕ್ಟ್ ಮೂಲಕ ʼಬುರ್ಖಾ ಬ್ಯಾನ್ʼ ನಿಬಂಧನೆಯನ್ನು ಜಾರಿಗೆ ತರಲಾಗುತ್ತದೆ. ಕಾಯಿದೆಯನ್ನು ಉಲ್ಲಂಘಿಸುವವರಿಗೆ ಆಡಳಿತಾತ್ಮಕವಾಗಿ ದಂಡ ವಿಧಿಸಲಾಗುತ್ತದೆ. ಒಂದು ವೇಳೆ, ದಂಡವನ್ನು ವಿರೋಧಿಸಿದರೆ ಗರಿಷ್ಠ ದಂಡವನ್ನು ತೆರಬೇಕಾಗುತ್ತದೆ.
ವಿಮಾನ ಅಥವಾ ರಾಜತಾಂತ್ರಿಕ ಮತ್ತು ದೂತಾವಾಸ ಕಟ್ಟಡಗಳಲ್ಲಿ ಮುಖಗವಸು ಮೇಲಿನ ನಿಷೇಧವನ್ನು ಜಾರಿಗೊಳಿಸುವುದಿಲ್ಲ ಎಂದು ಸ್ವಿಸ್ ಸರ್ಕಾರ ಸ್ಪಷ್ಟಪಡಿಸಿದೆ. ಇದಲ್ಲದೆ, ಆರಾಧನಾ ಸ್ಥಳಗಳು ಮತ್ತು ಇತರ ಪೂಜಾ ಸ್ಥಳಗಳಲ್ಲಿ ಮುಖವನ್ನು ಮರೆಮಾಡಲು ಅನುಮತಿಸಲಾಗಿದೆ. ಆಡಳಿತದ ಪ್ರಕಾರ, ಸಾಂಪ್ರದಾಯಿಕ ಕಾರಣಗಳು, ಆರೋಗ್ಯ ಮತ್ತು ಸುರಕ್ಷತೆ ಅಥವಾ ಹವಾಮಾನ ಸಂಬಂಧಿತ ಕಾರಣಗಳಿಗಾಗಿ ಮುಖ ಮುಚ್ಚುವ ಬಟ್ಟೆಯನ್ನು ಅನುಮತಿಸಲಾಗುತ್ತದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.