ಕೋಲ್ಕತ್ತಾ: ಸಮಾಜದಿಂದ ತುಳಿತಕ್ಕೊಳಪಟ್ಟು ಹಿಂದುಳಿದಿರುವ ತೃತೀಯ ಲಿಂಗಿಗಳ ಸಮುದಾಯವನ್ನು ಮೇಲೆತ್ತುವ ಮಹತ್ವದ ಕಾರ್ಯವನ್ನು ಪಶ್ಚಿಮಬಂಗಾಳ ಸರ್ಕಾರ ಮಾಡುತ್ತಿದೆ.
ತೃತೀಯ ಲಿಂಗಿಗಳನ್ನು ಸಿವಿಕ್ ಪೊಲೀಸ್ ವಾಲ್ಯುಂಟೀರ್ ಫೋರ್ಸ್(ಸಿಪಿವಿಸಿ)ಗೆ ಸೇರ್ಪಡೆಗೊಳಿಸುವಂತೆ ಸರ್ಕಾರ ಪೊಲೀಸ್ ಇಲಾಖೆಯನ್ನು ಕೇಳಿಕೊಂಡಿದೆ. ಹೀಗಾಗಿ ಈ ಸಮುದಾಯಕ್ಕೆ ಸೇರಿದ ಜನರು ಶೀಘ್ರದಲ್ಲೇ ಕೋಲ್ಕತ್ತಾ ಪೊಲೀಸರ ಜೊತೆಗೂಡಿ ಕಾರ್ಯನಿರ್ವಹಿಸಲಿದ್ದು, ಅವರಿಗೆ ವಿವಿಧ ಕಾರ್ಯಗಳ ಬಗ್ಗೆ ಸಲಹೆ ಸೂಚನೆ ನೀಡಲಿದ್ದಾರೆ.
ಸಿಪಿವಿಸಿಯನ್ನು 2008ರಲ್ಲಿ ಕೋಲ್ಕತ್ತಾ ಮುನ್ಸಿಪಾಲಿಟಿ ಪರಿಚಯಿಸಿತು. ಟ್ರಾಫಿಕ್ ನಿರ್ವಹಣೆಯಲ್ಲಿ ಪೊಲೀಸರಿಗೆ ಸಲಹೆ ನೀಡುವುದು ಇದರ ಪ್ರಮುಖ ಜವಾಬ್ದಾರಿಯಾಗಿದೆ. ಅನಧಿಕೃತ ಪಾರ್ಕಿಂಗ್ ಬಗ್ಗೆ ಮಾಹಿತಿ ನೀಡುವುದು, ಪಾದಾಚಾರ ಜನಸಂದಣಿ ನಿಯಂತ್ರಣ ಮುಂತಾದ ಕರ್ತವ್ಯಗಳನ್ನು ಇವರು ಮಾಡಲಿದ್ದಾರೆ.
ಪೊಲೀಸ್ ಇಲಾಖೆ ತೃತೀಯ ಲಿಂಗಿಗಳನ್ನು ಈ ಕಾರ್ಯಕ್ಕೆ ನೇಮಿಸಿಕೊಳ್ಳುತ್ತಿರುವ ಶ್ಲಾಘನೀಯ ಮತ್ತು ಸಮಾಜದಲ್ಲಿ ಮಹತ್ವದದ ಬದಲಾವಣೆಯನ್ನು ಉಂಟುಮಾಡುವ ಕಾರ್ಯವಾಗಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.