ಒಟ್ಟಾವ: ಖಾಲಿಸ್ತಾನಿ ಉಗ್ರಗಾಮಿಗಳು ಕೆನಡಾದ ಬ್ರಾಂಪ್ಟನ್ನಲ್ಲಿರುವ ಹಿಂದೂ ದೇವಾಲಯದ ಮೇಲೆ ದಾಳಿ ಮಾಡುವ ಮೂಲಕ ರೆಡ್ ಲೈನ್ ಅನ್ನು ದಾಟಿದ್ದಾರೆ ಎಂದು ಕೆನಡಾದ ಸಂಸತ್ ಸದಸ್ಯ ಚಂದ್ರ ಆರ್ಯ ಅವರು ಆರೋಪಿಸಿದ್ದಾರೆ.
ಹಿಂದೂ ಸಭಾ ಮಂದಿರ ಆವರಣದಲ್ಲಿ ಖಲಿಸ್ತಾನ್ ಬೆಂಬಲಿಗರು ಧ್ವಜವನ್ನು ಬೀಸುತ್ತಾ ದೇಗುಲದ ಆವರಣದಲ್ಲಿ ದಾಂಧಲೆ ಸೃಷ್ಟಿಸುತ್ತಿರುವ ದೃಶ್ಯಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.
ಬ್ರಾಂಪ್ಟನ್ನಲ್ಲಿರುವ ಹಿಂದೂ ಸಭಾ ಮಂದಿರದ ಆವರಣದಲ್ಲಿ ಹಿಂದೂ ಭಕ್ತರ ಮೇಲೆ ಖಲಿಸ್ತಾನಿಗಳು ನಡೆಸಿದ ದಾಳಿಯು ಕೆನಡಾದಲ್ಲಿ ಖಲಿಸ್ತಾನಿ ಹಿಂಸಾತ್ಮಕ ಉಗ್ರಗಾಮಿತ್ವವು ಎಷ್ಟು ಆಳ ಮತ್ತು ಲಜ್ಜೆಗೆಟ್ಟದ್ದಾಗಿದೆ ಎಂಬುದನ್ನು ತೋರಿಸುತ್ತದೆ ಎಂದು ಆರ್ಯ ಹೇಳಿದ್ದಾರೆ.
‘ಅಭಿವ್ಯಕ್ತಿ ಸ್ವಾತಂತ್ರ್ಯ’ದ ಅಡಿಯಲ್ಲಿ ಖಲಿಸ್ತಾನಿ ಉಗ್ರಗಾಮಿಗಳು ಕೆನಡಾದಲ್ಲಿ ಉಚಿತ ಪಾಸ್ ಪಡೆಯುತ್ತಿದ್ದಾರೆ ಎಂದು ಆರ್ಯ ಆರೋಪಿಸಿದ್ದು, ಹಿಂದೂ-ಕೆನಡಿಯನ್ನರು ತಮ್ಮ ಹಕ್ಕುಗಳನ್ನು ಪ್ರತಿಪಾದಿಸಲು ಮತ್ತು ಭದ್ರತೆಯ ವಿಷಯದಲ್ಲಿ ರಾಜಕಾರಣಿಗಳನ್ನು ಹೊಣೆಗಾರರನ್ನಾಗಿ ಮಾಡಬೇಕು ಎಂದು ಒತ್ತಾಯಿಸಿದ್ದಾರೆ.
ಈ ನಡುವೆ, ಹಿಂದೂ ಸಭಾ ಮಂದಿರದ ಪ್ರತಿ ಕೆಲಸಕ್ಕೂ ಭಾರತ ವಿರೋಧಿ ಅಂಶಗಳು ಹಿಂಸಾತ್ಮಕವಾಗಿ ಅಡ್ಡಿಪಡಿಸುತ್ತಾ ಬರುತ್ತಿವೆ. ಇದು ನಿರಾಶಾದಾಯಕ ಎಂದು ಭಾರತೀಯ ದೂತವಾಸ ಹೇಳಿಕೆ.
ಖಲಿಸ್ಥಾನಿಗಳ ಈ ಕೃತ್ಯ ಕೆನಡಾದ ಪ್ರಧಾನಿ ಜಸ್ಟಿನ್ ಟ್ರುಡೊ, ವಿರೋಧ ಪಕ್ಷದ ನಾಯಕ ಪಿಯರೆ ಪೊಲಿಯೆವ್ರೆ ಮತ್ತು ಟೊರೊಂಟೊ ಸಂಸದ ಕೆವಿನ್ ವುಂಗ್ ಸೇರಿದಂತೆ ವಿವಿಧ ರಾಜಕೀಯ ವ್ಯಕ್ತಿಗಳಿಂದ ವ್ಯಾಪಕ ಖಂಡನೆಗೆ ಒಳಗಾಗಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.