ನವದೆಹಲಿ: ಬಿಜೆಪಿ ಸಂಸದ ತೇಜಸ್ವಿ ಸೂರ್ಯ ಐರನ್ಮ್ಯಾನ್ 70.3 ಸವಾಲನ್ನು ಪೂರ್ಣಗೊಳಿಸಿದ್ದಾರೆ. ಗೋವಾದಲ್ಲಿ ನಡೆದ ಟ್ರಯಥ್ಲಾನ್ ಚಾಲೆಂಜ್ 1.9 ಕಿಮೀ ಈಜು, 90 ಕಿಮೀ ಸೈಕ್ಲಿಂಗ್ ಮತ್ತು 21.1 ಕಿಮೀ ಓಟವನ್ನು ಒಳಗೊಂಡಿತ್ತು, ಇಡೀ ಈವೆಂಟ್ನಲ್ಲಿ ಭಾಗವಹಿಸುವವರಿಗೆ 113 ಕಿಲೋಮೀಟರ್ (ಅಥವಾ 70.3 ಮೈಲುಗಳು) ವರೆಗೆ ಪ್ರಯಾಣಿಸುವ ಚಾಲೆಂಜ್ ನೀಡಲಾಗಿತ್ತು. 33 ವರ್ಷದ ಸಂಸದ ಈ ಚಾಲೆಂಜ್ ಅನ್ನು ಪೂರ್ಣಗೊಳಿಸಿದ್ದಾರೆ. ಅಲ್ಲದೇ ಈ ಚಾಲೆಂಜ್ ಪೂರೈಸಿದ ಮೊದಲ ಸಂಸದ ಎಂಬ ಕೀರ್ತಿಗೂ ಪಾತ್ರರಾಗಿದ್ದಾರೆ.
ಪ್ರಧಾನಿ ನರೇಂದ್ರ ಮೋದಿಯವರ ‘ಫಿಟ್ ಇಂಡಿಯಾ’ ಆಂದೋಲನವು ಸವಾಲನ್ನು ಸ್ವೀಕರಿಸಲು ನನಗೆ ಪ್ರೇರೇಪಿಸಿತು ಎಂದು ತೇಜಸ್ವಿ ಸೂರ್ಯ ಹೇಳಿದ್ದಾರೆ. ಇದಕ್ಕೆ ಪ್ರತಿಕ್ರಿಯೆ ನೀಡಿರುವ ಮೋದಿ, “ಶ್ಲಾಘನೀಯ ಸಾಧನೆ! ಇದು ಫಿಟ್ನೆಸ್-ಸಂಬಂಧಿತ ಚಟುವಟಿಕೆಗಳನ್ನು ಮುಂದುವರಿಸಲು ಹೆಚ್ಚಿನ ಯುವಕರನ್ನು ಪ್ರೇರೇಪಿಸುತ್ತದೆ ಎಂದು ನನಗೆ ಖಾತ್ರಿಯಿದೆ” ಎಂದು ಎಕ್ಸ್ ಪೋಸ್ಟ್ ಮಾಡಿದ್ದಾರೆ.
ಫಿಟ್ನೆಸ್ ಅನ್ನು ಸುಧಾರಿಸಲು ಕಳೆದ ನಾಲ್ಕು ತಿಂಗಳಿನಿಂದ ಕಠಿಣ ತರಬೇತಿ ಪಡೆದುಕೊಂಡಿರುವುದಾಗಿ ತೇಜಸ್ವಿ ಸೂರ್ಯ ಹೇಳಿಕೊಂಡಿದ್ದಾರೆ.
2022 ರಲ್ಲಿ, ತೇಜಸ್ವಿ ಸೂರ್ಯ ರಿಲೇ ತಂಡದ ಭಾಗವಾಗಿ ಐರನ್ಮ್ಯಾನ್ 70.3 ಗೋವಾದಲ್ಲಿ ಭಾಗವಹಿಸಿ, 90 ಕಿಮೀ ಸೈಕ್ಲಿಂಗ್ ವಿಭಾಗವನ್ನು ಪೂರ್ಣಗೊಳಿಸಿದ್ದರು.
Commendable feat!
I am sure this will inspire many more youngsters to pursue fitness related activities. https://t.co/zDTC0RtHL7
— Narendra Modi (@narendramodi) October 27, 2024
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.