ನವದೆಹಲಿ: ತೀವ್ರ ಎಡಪಂಥೀಯ ಕಾರ್ಯಕರ್ತರಿಂದ ನಿಯಂತ್ರಿಸಲ್ಪಡುತ್ತಿರುವ ಇಂಟರ್ನೆಟ್ ‘ಎನ್ಸೈಕ್ಲೋಪೀಡಿಯಾ’ ವಿಕಿಪೀಡಿಯಾಕ್ಕೆ ದೇಣಿಗೆ ನೀಡುವುದನ್ನು ನಿಲ್ಲಿಸುವಂತೆ ಸಾರ್ವಜನಿಕರಿಗೆ ಬಿಲಿಯನೇರ್ ಉದ್ಯಮಿ ಎಲೋನ್ ಮಸ್ಕ್ ಮನವಿ ಮಾಡಿದ್ದಾರೆ.
ಎಕ್ಸ್ ಪೋಸ್ಟ್ ಮಾಡಿರುವ ಎಲೋನ್ ಮಸ್ಕ್ ಅವರು, “ವಿಕಿಪೀಡಿಯಾವನ್ನು ಎಡಪಂಥೀಯ ಕಾರ್ಯಕರ್ತರು ನಿಯಂತ್ರಿಸುತ್ತಾರೆ. ಜನರು ಅವರಿಗೆ ದೇಣಿಗೆ ನೀಡುವುದನ್ನು ನಿಲ್ಲಿಸಬೇಕು” ಎಂದಿದ್ದಾರೆ.
ಈ ಹಿಂದೆಯೂ ಮಸ್ಕ್ ಅವರು ವಿಕಿಪೀಡಿಯಾದ ವಿರುದ್ಧ ಹರಿಹಾಯ್ದಿದ್ದರು. “ಸುಮಾರು 40 ವಿಕಿಪೀಡಿಯಾ ಸಂಪಾದಕರ ಗುಂಪು ಇಸ್ರೇಲ್ ವಿಷಯಗಳನ್ನು ತಡೆಹಿಡಿಯಲು ಮತ್ತು ಮೂಲಭೂತವಾದಿ ಇಸ್ಲಾಮಿಕ್ ಗುಂಪುಗಳನ್ನು ಸಾಕಾರತ್ಮ ರೀತಿಯಲ್ಲಿ ಬಿಂಬಿಸಲು ಕೆಲಸ ಮಾಡತ್ತಿದೆ” ಎಂದು ಮಸ್ಕ್ ಹೇಳಿದ್ದರು.
ರಿಪಬ್ಲಿಕನ್ ಅಧ್ಯಕ್ಷೀಯ ಅಭ್ಯರ್ಥಿ ಮತ್ತು ಯುಎಸ್ ಮಾಜಿ ಅಧ್ಯಕ್ಷ ಡೊನಾಲ್ ಟ್ರಂಪ್ ಅವರ ಪ್ರಬಲ ಬೆಂಬಲಿಗರೂ ಆಗಿರುವ ಮಸ್ಕ್, ಎಕ್ಸ್ನಲ್ಲಿನ ಪೋಸ್ಟ್ನಲ್ಲಿ, “ವಿಕಿಪೀಡಿಯವನ್ನು ತೀವ್ರ ಎಡಪಂಥೀಯ ಕಾರ್ಯಕರ್ತರು ನಿಯಂತ್ರಿಸುತ್ತಾರೆ” ಎಂಬುದನ್ನು ಬಲವಾಗಿ ಪ್ರತಿಪಾಸಿದ್ದಾರೆ.
Wikipedia is controlled by far-left activists.
People should stop donating to them. https://t.co/Cjq2diadFY
— Elon Musk (@elonmusk) October 25, 2024
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.