ಅಮರಾವತಿ: ಆಂಧ್ರದ ರಾಜಧಾನಿ ಅಮರಾವತಿಯನ್ನು ತಮ್ಮ ಭಾಗದಲ್ಲಿ ನಿರ್ಮಿಸಲು ನಿರ್ಧರಿಸಿರುವ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಅವರಿಗೆ ಗುಂಟೂರು ಜಿಲ್ಲೆಯ ಜನ ವಿಶೇಷ ರೀತಿಯಲ್ಲಿ ಧನ್ಯವಾದಗಳು ಅರ್ಪಿಸಲು ಮುಂದಾಗಿದ್ದಾರೆ.
ಗುಂಟೂರಿನ ತುಲ್ಲುರ್ ಮಂಡಲ್ನಲ್ಲಿ ಬಾಬು ಅವರಿಗಾಗಿ ದೇಗುಲವೊಂದನ್ನು ನಿರ್ಮಿಸಲು ಒಂದು ತಂಡ ಮುಂದಾಗಿದೆ, ಇದರಲ್ಲಿ ಬಾಬು ಅವರ ಮೂರ್ತಿಯನ್ನು ಪ್ರತಿಷ್ಠಾಪಿಸಲಾಗುತ್ತದೆ.
ಇನ್ನೊಂದು ಗುಂಪು ಬಾಭು ಅವರ ಕಂಚು ಮತ್ತು ಕಲ್ಲಿನ ಪ್ರತಿಮೆಯನ್ನು ನಿರ್ಮಿಸಲು ಆರ್ಡರ್ ಕೊಟ್ಟಿದ್ದು, ಅದನ್ನು ಗುಂಟೂರಿನಲ್ಲಿ ಸ್ಥಾಪನೆ ಮಾಡಲು ಉದ್ದೇಶಿಸಿದೆ.
ಗುಂಟೂರಿನಲ್ಲಿ ರಾಜಧಾನಿ ಅಮರಾವತಿ ನಿರ್ಮಾಣವಾಗಲಿದೆ, ಇದರಿಂದಾಗಿ ಇದೀಗ ಅಲ್ಲಿನ ಭೂಮಿಯ ಬೆಲೆ ಗಗನಕ್ಕೇರಿದೆ. ಇದರಿಂದ ರೈತರು ಸಂತುಷ್ಟಗೊಂಡಿದ್ದಾರೆ. ಹೀಗಾಗಿ ಬಾಬು ಅವರಿಗೆ ನಮ್ಮ ಧನ್ಯವಾದವನ್ನು ತಿಳಿಸಲು ಅವರ ದೇಗುಲವನ್ನು ನಿರ್ಮಿಸುತ್ತಿದ್ದೇವೆ ಎಂದು ಕೆಲವರು ಹೇಳಿಕೊಂಡಿದ್ದಾರೆ.
ದಸರಾ ಶುಭದಿನವಾದ ಅ.22ರಂದು ಅಮರಾವತಿಗೆ ಶಂಕುಸ್ಥಾಪನೆ ಮಾಡಲು ಚಂದ್ರಬಾಬು ನಾಯ್ಡು ಉದ್ದೇಶಿಸಿದ್ದು, ಇದರಲ್ಲಿ ಪ್ರಧಾನಿ ನರೇಂದ್ರ ಮೋದಿ ಭಾಗಿಯಾಗುವ ಸಾಧಯತೆ ಇದೆ.
ವ್ಯಕ್ತಿಗಳಿಗೆ ದೇಗುಲ ನಿರ್ಮಿಸುವ ಕಾರ್ಯ ಆಂಧ್ರದಲ್ಲಿ ಹೊಸದೇನಲ್ಲ, ಈಗಾಗಲೇ ತೆಲಂಗಾಣ ಮುಖ್ಯಮಂತ್ರಿ ಕೆ.ಚಂದ್ರಶೇಖರ್ ಅವರ ದೇಗುಲ ಹೈದರಾಬಾದ್ನಲ್ಲಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.