ಮುಂಬಯಿ: ಈಗಾಗಲೇ ಫಿಕ್ಸಿಂಗ್, ಬೆಟ್ಟಿಂಗ್ನಿಂದ ತೀವ್ರ ಮುಜುಗರವನ್ನು ಅನುಭವಿಸಿರುವ ಐಪಿಎಲ್ಗೆ ಮತ್ತೊಂದು ಆಘಾತ ಎದುರಾಗಿದೆ. ಪ್ರಮುಖ ಟೈಟಲ್ ಪ್ರಾಯೋಜಕತ್ವ ಹೊಂದಿದ್ದ ಪೆಪ್ಸಿಕೋ ಇದೀಗ ಐಪಿಎಲ್ನಿಂದ ಹೊರಬರಲು ಮುಂದಾಗಿದೆ.
ಐಪಿಎಲ್ ಫಿಕ್ಸಿಂಗ್ ಮತ್ತು ಬೆಟ್ಟಿಂಗ್ನಿಂದ ತನ್ನ ಘನತೆಯನ್ನು ಕುಗ್ಗಿಸಿಕೊಂಡಿರುವ ಹಿನ್ನಲೆಯಲ್ಲಿ ಟೈಟಲ್ ಪ್ರಾಯೋಜಕತ್ವದಿಂದ ಹಿಂದೆ ಸರಿಯಲು ಪೆಪ್ಸಿಕೋ ನಿರ್ಧರಿಸಿದೆ ಎನ್ನಲಾಗಿದ್ದು, ಈ ಬಗ್ಗೆ ಈಗಾಗಲೇ ಐಪಿಎಲ್ ಮುಖ್ಯ ಕಾರ್ಯನಿರ್ವಹಣಾ ಅಧಿಕಾರಿ ಸುಂದರ್ ರಾಮನ್ ಅವರಿಗೆ ಪತ್ರ ಮುಖೇನ ವಿಷಯವನ್ನು ತಿಳಿಸಿದೆ. ಅವರು ಬಿಸಿಸಿಐ ಅಧ್ಯಕ್ಷ ಶಶಾಂಕ್ ಮನೋಹರ್ ಅವರಿಗೆ ಈ ಬೆಳವಣಿಗೆಯನ್ನು ತಿಳಿಸಿದ್ದಾರೆ ಎನ್ನಲಾಗಿದೆ.
2013ರಿಂದ 2017ರ ಅವಧಿಗೆ ಬರೋಬ್ಬರಿ ರೂ.396 ಕೋಟಿ ರೂಪಾಯಿಯನ್ನು ಪಾವತಿಸಿ ಪೆಪ್ಸಿಕೋ ಟೈಟಲ್ ಪ್ರಾಯೋಜಕತ್ವವನ್ನು ಪಡೆದಿತ್ತು, ಇದೀಗ ಹಣವನ್ನು ವಾಪಾಸ್ ನೀಡುವಂತೆ ಅದು ನೋಟಿಸ್ ನೀಡಿದೆ ಎನ್ನಲಾಗಿದೆ.
ಅ.18ರಂದು ಮುಂಬಯಿಯಲ್ಲಿ ನಡೆಯಲಿರುವ ಬಿಸಿಸಿಐ ಕಾರ್ಯಕಾರಿಣಿ ಸಮಿತಿ ಸಭೆಯಲ್ಲಿ ಪೆಪ್ಸಿಕೋ ವಿಷಯ ಪ್ರಸ್ತಾಪವಾಗುವ ಸಾಧ್ಯತೆ ಇದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.