ಬೈರುತ್: ಬೈರುತ್ನಲ್ಲಿ ನಡೆದ ದಾಳಿಯಲ್ಲಿ ಹಿಜ್ಬುಲ್ಲಾ ಮುಖ್ಯಸ್ಥ ಹಸನ್ ನಸ್ರಲ್ಲಾ ಅವರು ಸಾವನ್ನಪ್ಪಿದ್ದಾರೆ ಎಂದು ಇಸ್ರೇಲಿ ಮಿಲಿಟರಿ ಶನಿವಾರ ಘೋಷಿಸಿದೆ. ಇರಾನ್ ಬೆಂಬಲಿತ ಉಗ್ರಗಾಮಿ ಗುಂಪು ಹಿಜ್ಬುಲ್ಲಾ ಈ ಬಗ್ಗೆ ಇನ್ನೂ ಪ್ರತಿಕ್ರಿಯಿಸಿಲ್ಲ.
“ಹಸನ್ ನಸ್ರಲ್ಲಾಹ್ ಇನ್ನು ಮುಂದೆ ಜಗತ್ತನ್ನು ಭಯಭೀತಗೊಳಿಸಲು ಸಾಧ್ಯವಾಗುವುದಿಲ್ಲ. ಆತ ಸತ್ತಿದ್ದಾನೆ” ಎಂದು ಎಕ್ಸ್ ಪೋಸ್ಟ್ನಲ್ಲಿ ಇಸ್ರೇಲ್ ರಕ್ಷಣಾ ಪಡೆ ತಿಳಿಸಿದೆ.
ಲೆಬನಾನ್ನ ಮೂಲಗಳು ಕೂಡ ಆತ ಸತ್ತಿರುವ ಸುಳಿವು ನೀಡಿದೆ. ಹಿಜ್ಬುಲ್ಲಾ ದಕ್ಷಿಣ ಬೈರುತ್ ಭದ್ರಕೋಟೆಯ ಮೇಲಿನ ಇಸ್ರೇಲ್ ದಾಳಿಯ ನಂತರ ನಿನ್ನೆ ಸಂಜೆಯಿಂದ ಮುಖ್ಯಸ್ಥ ಹಸನ್ ನಸ್ರಲ್ಲಾ ಅವರೊಂದಿಗೆ ಸಂಪರ್ಕವು ಕಳೆದುಹೋಗಿದೆ ಎಂದು ತಿಳಿಸಿವೆ. ಆದರೆ ನಸ್ರಲ್ಲಾನನ್ನು ಕೊಲ್ಲಲಾಗಿದೆಯೇ ಎಂದು ಖಚಿತಪಡಿಸಿಲ್ಲ.
ಇಸ್ರೇಲಿ ಸೇನೆಯು ತಾನು ಗುರಿಯಾಗಿಸಿಕೊಂಡಿರುವ ಮೂರು ಕಟ್ಟಡಗಳಿಂದ ಸ್ಥಳಾಂತರಗೊಳ್ಳುವಂತೆ ಅಲ್ಲಿನ ನಿವಾಸಿಗಳಿಗೆ ಹೇಳಿದ ನಂತರ ಶುಕ್ರವಾರದಂದು ಫೈಟರ್ ಜೆಟ್ಗಳಿಂದ ಹೆಜ್ಬುಲ್ಲಾ ಗುರಿಗಳ ಮೇಲೆ ದಾಳಿಗಳನ್ನು ನಡೆಸಿತು.
ದಾಳಿಗಳಿಗೆ ಗಂಟೆಗಳ ಮೊದಲು, ಪ್ರಧಾನ ಮಂತ್ರಿ ಬೆಂಜಮಿನ್ ನೆತನ್ಯಾಹು ವಿಶ್ವಸಂಸ್ಥೆಯನ್ನು ಉದ್ದೇಶಿಸಿ, ಹೆಜ್ಬುಲ್ಲಾ ವಿರುದ್ಧ ಇಸ್ರೇಲ್ನ ದಾಳಿ ಮುಂದುವರಿಯುತ್ತದೆ ಎಂದು ಪ್ರತಿಜ್ಞೆ ಮಾಡಿದರು. ಕದನ ವಿರಾಮದ ಸಾಧ್ಯತೆಯನ್ನು ಸಂಪೂರ್ಣ ತಳ್ಳಿಹಾಕಿದರು.
ಇಸ್ರೇಲ್-ಹಮಾಸ್ ಯುದ್ಧ ಆರಂಭವಾದ ನಂತರ ಹಮಾಸ್ಗೆ ಬೆಂಬಲವಾಗಿ ಉತ್ತರ ಇಸ್ರೇಲ್ ಮೇಲೆ ಹಿಜ್ಬುಲ್ಲಾ ರಾಕೆಟ್ದಾಳಿಗಳನ್ನು ನಡೆಸುತ್ತಲೇ ಬಂದಿದೆ.
The Operation to Eliminate Nasrallah:
The Chief of the General Staff commands the operation to eliminate the leader of Hezbollah, Hassan Nasrallah, in the Israeli Air Force command center with the members of the General Staff Forum. pic.twitter.com/EQo40eJjbU
— Israeli Air Force (@IAFsite) September 28, 2024
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.