ಶ್ರೀನಗರ: ಜಮ್ಮು ಮತ್ತು ಕಾಶ್ಮೀರದಲ್ಲಿ ನಡೆದ ವಿಧಾನಸಭಾ ಚುನಾವಣೆಯ ಮೊದಲ ದಿನದ ಮತದಾನದ ಅಂಕಿಅಂಶಗಳನ್ನು ಶ್ಲಾಘಿಸಿದ ಪ್ರಧಾನಿ ನರೇಂದ್ರ ಮೋದಿ, ಇದು ಪ್ರಜಾಪ್ರಭುತ್ವದ ಮೇಲೆ ಅಪಾರ ವಿಶ್ವಾಸವನ್ನು ತೋರಿಸುತ್ತದೆ. ಯುವಜನರು ತಮ್ಮ ಮತ ಬದಲಾವಣೆಯನ್ನು ತರಬಹುದು ಎಂದು ಭಾವಿಸುತ್ತಿದ್ದಾರೆ, ಇದು ಅವರ ಸಬಲೀಕರಣದ ಮೊದಲ ಹೆಜ್ಜೆಯಾಗಿದೆ ಎಂದಿದ್ದಾರೆ.
ಶ್ರೀನಗರದ ಶೇರ್-ಎ-ಕಾಶ್ಮೀರ ಸ್ಟೇಡಿಯಂನಲ್ಲಿ ಬಿಜೆಪಿ ಅಭ್ಯರ್ಥಿಗಳನ್ನು ಬೆಂಬಲಿಸಿ ಸಮಾವೇಶ ನಡೆಸಿದ ಪ್ರಧಾನಿ ಮೋದಿ, ಜಮ್ಮು ಮತ್ತು ಕಾಶ್ಮೀರದ ರಾಜ್ಯತ್ವವನ್ನು ಪುನಃಸ್ಥಾಪಿಸುವ ಭರವಸೆಯನ್ನು ಬಿಜೆಪಿ ಈಡೇರಿಸಲಿದೆ. ಕಾಶ್ಮೀರ ಕಣಿವೆಯ ಎರಡು ದೊಡ್ಡ ಪಕ್ಷಗಳಾದ ನ್ಯಾಷನಲ್ ಕಾನ್ಫರೆನ್ಸ್ ಮತ್ತು ಪೀಪಲ್ಸ್ ಡೆಮಾಕ್ರಟಿಕ್ ಪಾರ್ಟಿ ದಶಕಗಳ ಕಾಲ ಭಯೋತ್ಪಾದನೆ ಮತ್ತು ಕಾಶ್ಮೀರಿ ಪಂಡಿತರು ಮತ್ತು ಸಿಖ್ಖರು ಸೇರಿದಂತೆ ಅಲ್ಪಸಂಖ್ಯಾತರಿಗೆ ಅನ್ಯಾಯ ಮಾಡುತ್ತೇ ಬಂದಿದೆ ಎಂದರು.
“ನಾವು ಜಮ್ಮು-ಕಾಶ್ಮೀರದ ರಾಜ್ಯತ್ವವನ್ನು ಮರುಸ್ಥಾಪಿಸುತ್ತೇವೆ ಎಂದು ನಾವು ಸಂಸತ್ತಿನಲ್ಲಿ ಭರವಸೆ ನೀಡಿದ್ದೇವೆ. ಬಿಜೆಪಿ ಈ ಬದ್ಧತೆಯನ್ನು ಪೂರೈಸುತ್ತದೆ” ಎಂದು ಅವರು ಹೇಳಿದರು.
ರೈತರಿಗೆ ವಾರ್ಷಿಕ ರೂ 10,000 ನೆರವು, ಪ್ರತಿ ಕುಟುಂಬದ ಮಹಿಳಾ ಮುಖ್ಯಸ್ಥಗೆ ರೂ 18,000 ವಾರ್ಷಿಕ ನೆರವು ಮತ್ತು ಆರೋಗ್ಯ ವಿಮೆಯನ್ನು ಈಗಿರುವ ರೂ 5 ಲಕ್ಷದಿಂದ ರೂ 7 ಲಕ್ಷಕ್ಕೆ ಹೆಚ್ಚಿಸುವುದು ಬಿಜೆಪಿ ಭರವಸೆಯಾಗಿದೆ ಎಂದರು.
ಕಾಂಗ್ರೆಸ್, ನ್ಯಾಷನಲ್ ಕಾನ್ಫರೆನ್ಸ್ ಮತ್ತು ಪಿಡಿಪಿ ತಮ್ಮ ಲಾಭಕ್ಕಾಗಿ ಪ್ರಜಾಪ್ರಭುತ್ವ ಮತ್ತು ಕಾಶ್ಮೀರವನ್ನು ತುಳಿದು ಹಾಕಿವೆ ಎಂದು ಪ್ರಧಾನಿ ಮೋದಿ ಹೇಳಿದರು.
“ತಮ್ಮ ಕುಟುಂಬವನ್ನು ಹೊರತುಪಡಿಸಿ ಯಾರನ್ನೂ ಮುಂದೆ ಬರಲು ಅವರು ಬಯಸಲಿಲ್ಲ, ಇಲ್ಲದಿದ್ದರೆ ಅವರು ಪಂಚಾಯಿತಿ, ಡಿಡಿಸಿ ಮತ್ತು ಬಿಡಿಸಿ ಚುನಾವಣೆಗಳನ್ನು ಏಕೆ ನಿಲ್ಲಿಸಿದರು? ಆ ಚುನಾವಣೆಗಳು ತಮ್ಮ ಕುಟುಂಬ ಆಡಳಿತಕ್ಕೆ ಸವಾಲು ಹಾಕುವ ಹೊಸ ಮುಖಗಳನ್ನು ಮುಂದೆ ತರುತ್ತದೆ ಎಂದು ಪಕ್ಷಗಳಿಗೆ ತಿಳಿದಿತ್ತು” ಎಂದು ಅವರು ಹೇಳಿದರು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.