ನವದೆಹಲಿ: ʼಟೈಫೂನ್ ಯಾಗಿʼ ಅನ್ನು ಎದುರಿಸಲು ಆಗ್ನೇಯ ಏಷ್ಯಾದ ದೇಶಗಳಿಗೆ ಸಹಾಯ ಮಾಡಲು ಎರಡು ದಿನಗಳ ಹಿಂದೆ ಭಾರತ ʼಆಪರೇಷನ್ ಸದ್ಭಾವ್ʼ ಆರಂಭಿಸಿದ್ದು, ಅದರಡಿಯಲ್ಲಿ ಭಾರತವು ಮ್ಯಾನ್ಮಾರ್ಗೆ ಎರಡನೇ ಹಂತದ ಪರಿಹಾರ ಸಾಮಗ್ರಿಗಳನ್ನು ಕಳುಹಿಸಿದೆ.
ಈ ವರ್ಷ ಏಷ್ಯಾದ ಅತ್ಯಂತ ಶಕ್ತಿಶಾಲಿ ಚಂಡಮಾರುತ ಎಂದು ಹೇಳಲಾದ ʼಯಾಗಿ ಟೈಫೂನ್ʼ ನಂತರ ಮ್ಯಾನ್ಮಾರ್, ಲಾವೋಸ್ ಮತ್ತು ವಿಯೆಟ್ನಾಂನ ವಿವಿಧ ಭಾಗಗಳಲ್ಲಿ ಭಾರಿ ಪ್ರವಾಹ ಅಪ್ಪಳಿಸಿ ವಿನಾಶವನ್ನುಂಟುಮಾಡಿದೆ, ಮೂರು ದೇಶಗಳನ್ನು ಅಕ್ಷರಶಃ ನಲುಗಿ ಹೋಗುವಂತೆ ಮಾಡಿದೆ.
ʼಟೈಫೂನ್ ಯಾಗಿʼಗೆ ಜಪಾನೀಸ್ ಹೆಸರನ್ನು ಇಡಲಾಗಿದೆ.
ಮ್ಯಾನ್ಮಾರ್ನಲ್ಲಿ, ಚಂಡಮಾರುತವು ನೂರಾರು ಜೀವಗಳನ್ನು ಬಲಿ ಪಡೆದುಕೊಂಡಿದೆ, ಅಪಾರ ಪ್ರಮಾಣದ ಆಸ್ತಿಯನ್ನು ನಾಶಪಡಿಸಿದೆ ಮತ್ತು ಲಕ್ಷಾಂತರ ಜನರನ್ನು ಬಾಧಿಸಿದೆ.
ಭಾರತವು ಇಂದು ಭಾರತೀಯ ವಾಯುಪಡೆಯ IL-76 ಸಾರಿಗೆ ವಿಮಾನದಲ್ಲಿ 32 ಟನ್ ಪರಿಹಾರ ಸಾಮಗ್ರಿಗಳನ್ನು ಮ್ಯಾನ್ಮಾರ್ಗೆ ಕಳುಹಿಸಿದೆ ಎಂದು ವಿದೇಶಾಂಗ ವ್ಯವಹಾರಗಳ ಸಚಿವಾಲಯ ತಿಳಿಸಿದೆ.
ಸೋಮವಾರ ಮ್ಯಾನ್ಮಾರ್ ಕಡೆಯಿಂದ ಮನವಿ ಸ್ವೀಕರಿಸಿದ ಕೆಲವೇ ಗಂಟೆಗಳಲ್ಲಿ ಭಾರತ ಸರ್ಕಾರವು 21 ಟನ್ ಪರಿಹಾರ ಸಾಮಗ್ರಿಗಳನ್ನು ರವಾನಿಸಿದೆ ಎಂದು MEA ಹೇಳಿಕೆಯಲ್ಲಿ ತಿಳಿಸಿದೆ. ಭಾರತೀಯ ನೌಕಾಪಡೆಯ ನೌಕೆ ಐಎನ್ಎಸ್ ಸತ್ಪುರದಲ್ಲಿ ಸೋಮವಾರ ಯಾಂಗೋನ್ಗೆ ಸಿದ್ಧ ಆಹಾರ, ಅಡುಗೆ ಸೆಟ್ಗಳು, ಸೌರ ದೀಪಗಳು, ವೈದ್ಯಕೀಯ ಸರಬರಾಜುಗಳು, ಸೊಳ್ಳೆ ಪರದೆಗಳು, ನೀರು ಶುದ್ಧೀಕರಣ ಮಾತ್ರೆಗಳು ಮತ್ತು ಸೋಂಕುನಿವಾರಕಗಳಂತಹ ಪರಿಹಾರ ಸಾಮಗ್ರಿಗಳನ್ನು ಕಳುಹಿಸಲಾಗಿದೆ.
ಅಲ್ಲದೇ ಭಾರತವು 10 ಟನ್ ತುರ್ತು ಪ್ರವಾಹ ಪರಿಹಾರ ನೆರವನ್ನು ಲಾವೋಸ್ಗೆ IAF ವಿಮಾನದಲ್ಲಿ ಕಳುಹಿಸಿದೆ. ಮತ್ತೊಂದು ವಿಮಾನವು ವಿಯೆಟ್ನಾಂಗೆ ನೀರು ಶುದ್ಧೀಕರಣದ ವಸ್ತುಗಳು, ನೀರಿನ ಪಾತ್ರೆಗಳು, ಹೊದಿಕೆಗಳು, ಅಡಿಗೆ ಪಾತ್ರೆಗಳು, ಸೌರ ಲ್ಯಾಂಟರ್ನ್ಗಳನ್ನು ಒಳಗೊಂಡಿರುವ 35 ಟನ್ಗಳ ನೆರವನ್ನು ಸಾಗಿಸಿದೆ.
#OperationSadbhav continues: 🇮🇳 dispatches a second tranche of aid to Myanmar.
➡️ @IAF_mcc aircraft is carrying 32 tons of relief material including genset, hygiene kits, temporary shelter, water purification supplies and medicines for the people of 🇲🇲.
➡️ Indian Navy… pic.twitter.com/AawX1DIQGT
— Randhir Jaiswal (@MEAIndia) September 17, 2024
India launches #OperationSadbhav.
Demonstrating our solidarity with the people affected by Typhoon Yagi, India is dispatching aid to Myanmar, Vietnam and Laos.
➡️ 10 tons of aid including dry ration, clothing and medicines left for 🇲🇲 onboard @indiannavy INS Satpura today.… pic.twitter.com/ooR0ipnxqI
— Dr. S. Jaishankar (@DrSJaishankar) September 15, 2024
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.