
ನವದೆಹಲಿ: ಹೈದರಾಬಾದ್ ವಿಮೋಚನಾ ದಿನವಾದ ಇಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಹೈದರಾಬಾದ್-ಕರ್ನಾಟಕದ ಜನರಿಗೆ ಶುಭಾಶಯಗಳನ್ನು ಕೋರಿದ್ದಾರೆ.
ಕನ್ನಡದಲ್ಲೇ ಟ್ವೀಟ್ ಮಾಡಿರುವ ಅಮಿತ್ ಶಾ, ” ಹೈದರಾಬಾದ್ ವಿಮೋಚನಾ ದಿನದಂದು ಹೈದರಾಬಾದ್ ಕರ್ನಾಟಕದ ಜನತೆಗೆ ಶುಭಾಶಯಗಳು. ಹೈದರಾಬಾದ್ ಮುಕ್ತಿ ಸಂಗ್ರಾಮ ದೇಶಪ್ರೇಮದ ಅದ್ಭುತ ಅಭಿವ್ಯಕ್ತಿ ಎಂದೇ ಪರಿಗಣಿಸಲ್ಪಟ್ಟಿದೆ, ನಿರಂಕುಶ ನಿಜಾಮನ ವಿರುದ್ಧ ದಂಗೆಯೆದ್ದು ಭಾರತದೊಂದಿಗೆ ಒಂದಾಗುವುದಕ್ಕಾಗಿ ಜನರು ಅಪಾರ ನೋವುಗಳನ್ನು ಸಹಿಸಿಕೊಂಡರು. ಈ ಚಳುವಳಿಯ ಹುತಾತ್ಮರಿಗೆ ನನ್ನ ಗೌರವಾರ್ಪಣೆ” ಎಂದಿದ್ದಾರೆ.
ಸೆಪ್ಟೆಂಬರ್ 17, 1948 ರಂದು, ಆಗಿನ ಗೃಹ ಸಚಿವ ಸರ್ದಾರ್ ವಲ್ಲಭಭಾಯಿ ಪಟೇಲ್ ಅವರ ನೇತೃತ್ವದಲ್ಲಿ ಮಿಲಿಟರಿ ಕಾರ್ಯಾಚರಣೆಯ ನಂತರ ನಿಜಾಮರ ಆಳ್ವಿಕೆಯಲ್ಲಿದ್ದ ಅಂದಿನ ಹೈದರಾಬಾದ್ ರಾಜ್ಯವನ್ನು ಭಾರತದ ಒಕ್ಕೂಟಕ್ಕೆ ಸೇರಿಸಲಾಯಿತು.
ಹೈದರಾಬಾದ್ ವಿಮೋಚನಾ ದಿನದಂದು, ತೆಲಂಗಾಣ, ಕರ್ನಾಟಕ ಮತ್ತು ಮರಾಠವಾಡವನ್ನು ಒಳಗೊಂಡಿರುವ ಹಿಂದಿನ ಹೈದರಾಬಾದ್ ಪ್ರದೇಶದ ಜನರಿಗೆ ನಾನು ನನ್ನ ಶುಭಾಶಯಗಳನ್ನು ಸಲ್ಲಿಸುತ್ತೇನೆ ಎಂದೂ ಅಮಿತ್ ಮತ್ತೊಂದು ಟ್ವಿಟ್ನಲ್ಲಿ ಹೇಳಿದ್ದಾರೆ.
On #HyderabadLiberationDay, I extend my greetings to the people of the erstwhile Hyderabad region, comprising Telangana, Karnataka, and Marathwada.
The Hyderabad Mukti Sangram will always be cited as a glorious manifestation of patriotism, where people led an uprising against… pic.twitter.com/XoRal8jWrj
— Amit Shah (@AmitShah) September 17, 2024
ಹೈದರಾಬಾದ್ ವಿಮೋಚನಾ ದಿನದಂದು ಹೈದರಾಬಾದ್ ಕರ್ನಾಟಕದ ಜನತೆಗೆ ಶುಭಾಶಯಗಳು.
ಹೈದರಾಬಾದ್ ಮುಕ್ತಿ ಸಂಗ್ರಾಮ ದೇಶಪ್ರೇಮದ ಅದ್ಭುತ ಅಭಿವ್ಯಕ್ತಿ ಎಂದೇ ಪರಿಗಣಿಸಲ್ಪಟ್ಟಿದೆ, ನಿರಂಕುಶ ನಿಜಾಮನ ವಿರುದ್ಧ ದಂಗೆಯೆದ್ದು ಭಾರತದೊಂದಿಗೆ ಒಂದಾಗುವುದಕ್ಕಾಗಿ ಜನರು ಅಪಾರ ನೋವುಗಳನ್ನು ಸಹಿಸಿಕೊಂಡರು.
ಈ ಚಳುವಳಿಯ ಹುತಾತ್ಮರಿಗೆ ನನ್ನ ಗೌರವಾರ್ಪಣೆ.
— Amit Shah (@AmitShah) September 17, 2024
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.


