ಚೆನ್ನೈ: 13 ವರ್ಷದ ತಮಿಳುನಾಡಿನ ಶಾಲೆಯ ವಿದ್ಯಾರ್ಥಿನಿಯೊಬ್ಬಳು 800 ಕೆಜಿ ತೂಕದ ಸಿರಿಧಾನ್ಯವನ್ನು ಬಳಸಿ ಪ್ರಧಾನಿ ನರೇಂದ್ರ ಮೋದಿ ಅವರ ಭಾವಚಿತ್ರವನ್ನು ರಚಿಸಿದ್ದಾರೆ. ಬರೋಬ್ಬರಿ 12 ಗಂಟೆಗಳ ಕಾಲ ಬಿಡುವಿಲ್ಲದಂತೆ ಮೋದಿ ಚಿತ್ರವನ್ನು ರಚಿಸುವ ಮೂಲಕ ವಿಶ್ವದಾಖಲೆ ನಿರ್ಮಿಸಿದ್ದಾಳೆ.
ಸೆಪ್ಟೆಂಬರ್ 17 ರಂದು ಪ್ರಧಾನಿ ನರೇಂದ್ರ ಮೋದಿ ಅವರುವ ಜನ್ಮದಿನವನ್ನು ಆಚರಿಸುತ್ತಿದ್ದಾರೆ. ಇದಕ್ಕಾಗಿ ಅವರಿಗೆ ಗೌರವ ಸಲ್ಲಿಸುವ ಸಲುವಾಗಿ ಪ್ರೀಸ್ಲಿ ಶೆಕಿನಾ ಎಂಬ ವಿದ್ಯಾರ್ಥಿನಿ ವಿಶ್ವದ ಅತಿದೊಡ್ಡ ಮಿಲ್ಲೆಟ್ ಪೇಂಟಿಂಗ್ ಅನ್ನು ಅನಾವರಣಗೊಳಿಸಿದ್ದಾಳೆ.
ಪ್ರೀಸ್ಲಿ ಶೆಕಿನಾ ಚೆನ್ನೈನ ಕೋಲ್ಪಾಕ್ಕಂ ಪ್ರದೇಶದಲ್ಲಿ ವಾಸಿಸುತ್ತಿರುವ ಪ್ರತಾಪ್ ಸೆಲ್ವಂ ಮತ್ತು ಸಂಕೀರಾಣಿ ದಂಪತಿಗಳ ಪುತ್ರಿ. ಪ್ರೀಸ್ಲಿ ಶೆಕಿನಾ ಚೆನ್ನೈನ ವೆಲ್ಲಮ್ಮಲ್ ಶಾಲೆಯಲ್ಲಿ 8 ನೇ ತರಗತಿಯಲ್ಲಿ ಓದುತ್ತಿದ್ದಾಳೆ.
ಶೇಕಿನಾ 800 ಕೆಜಿ ರಾಗಿಯನ್ನು ಬಳಸಿ 600 ಚದರ ಅಡಿಗಳಲ್ಲಿ ಪ್ರಧಾನಿ ಮೋದಿಯವರ ಬೃಹತ್ ಭಾವಚಿತ್ರವನ್ನು ಚಿತ್ರಿಸಿದ್ದಾಳೆ. 12 ಗಂಟೆಗಳ ಕಠಿಣ ಪರಿಶ್ರಮದ ನಂತರ ತನ್ನ ಪ್ರಯತ್ನವನ್ನು ಪೂರ್ಣಗೊಳಿಸಿದ್ದಾಳೆ. ಬೆಳಿಗ್ಗೆ 8.30 ಕ್ಕೆ ಪ್ರಾರಂಭಿಸಿ ರಾತ್ರಿ 8.30 ಕ್ಕೆ ಚಿತ್ರ ರಚನೆಯನ್ನು ಪೂರ್ಣಗೊಳಿಸಿದ್ದಾಳೆ.
#WATCH | Chennai, Tamil Nadu | A 13-years-old school student, Presley Shekinah creates a portrait of PM Narendra Modi using grains and lentils in a 12-hour-long effort, ahead of the PM's 74th birthday on September 17. (15/09) pic.twitter.com/ubQE4hxq5D
— ANI (@ANI) September 16, 2024
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.