ನವದೆಹಲಿ: ವಕ್ಫ್ ತಿದ್ದುಪಡಿ ಮಸೂದೆಯನ್ನು ತಿರಸ್ಕರಿಸುವಂತೆ ಭಾರತೀಯ ಮುಸ್ಲಿಮರಿಗೆ ಮನವಿ ಮಾಡಿರುವ ವಿವಾದಾತ್ಮಕ ಇಸ್ಲಾಮಿಕ್ ಬೋಧಕ ಝಾಕಿರ್ ನಾಯ್ಕ್ ವಿರುದ್ಧ ಕೇಂದ್ರ ಸಚಿವ ಕಿರಣ್ ರಿಜಿಜು ವಾಗ್ದಾಳಿ ನಡೆಸಿದ್ದು, ದೇಶದ ಹೊರಗಿನಿಂದ ಮುಸ್ಲಿಮರನ್ನು ದಾರಿ ತಪ್ಪಿಸುವ ಪ್ರಯತ್ನಗಳನ್ನು ಮಾಡದಿರುವಂತೆ ಎಚ್ಚರಿಕೆ ನೀಡಿದ್ದಾರೆ.
‘ಭಾರತೀಯ ವಕ್ಫ್ ಆಸ್ತಿಗಳನ್ನು ಉಳಿಸಿ, ವಕ್ಫ್ ತಿದ್ದುಪಡಿ ಮಸೂದೆಯನ್ನು ತಿರಸ್ಕರಿಸಿ’ ಎಂದು ಸಾಮಾಜಿಕ ಮಾಧ್ಯಮದಲ್ಲಿ ಪ್ರಚೋದನಕಾರಿ ಪೋಸ್ಟ್ ಮಾಡಿ ಮುಸ್ಲಿಮರಿಗೆ ಮನವಿ ಮಾಡಿದ ಜಾಕಿರ್ ನಾಯ್ಕ್ ಧೋರಣೆಯನ್ನು ಸಚಿವರು ತೀವ್ರವಾಗಿ ಖಂಡಿಸಿದ್ದಾರೆ.
“ವಕ್ಫ್ನ ಸ್ಥಾನಮಾನವನ್ನು ಉಲ್ಲಂಘಿಸುವ ಮತ್ತು ಇಸ್ಲಾಮಿಕ್ ಸಂಸ್ಥೆಗಳ ಭವಿಷ್ಯದ ಮೇಲೆ ದುಷ್ಪರಿಣಾಮ ಬೀರುವ ಈ ದುಷ್ಟತನವನ್ನು ತಡೆಯಲು ಇದು ಭಾರತದ ಮುಸ್ಲಿಮರಿಗೆ ತುರ್ತು ಕರೆಯಾಗಿದೆ” ಎಂದು ಝಾಕೀರ್ ಪೋಸ್ಟರ್ ಮೂಲಕ ಹೇಳಿಕೊಂಡಿದ್ದಾರೆ. QR ಕೋಡ್ ಸ್ಕ್ಯಾನ್ನ ಲಿಂಕ್ ಅನ್ನು ಹಂಚಿಕೊಂಡಿದ್ದಾನೆ ಮತ್ತು ಜಂಟಿ ಸಂಸದೀಯ ಸಮಿತಿಗೆ ಆಕ್ಷೇಪಣೆಗಳನ್ನು ನೋಂದಾಯಿಸಲು ಸಾಮೂಹಿಕವಾಗಿ ಬೆಂಬಲಿಸುವಂತೆ ಮುಸ್ಲಿಂ ಸಮುದಾಯವನ್ನು ಉತ್ತೇಜಿಸಿದ್ದಾನೆ.
ಈತನ ಕುಕೃತ್ಯಕ್ಕೆ ಪ್ರತಿಕ್ರಿಯಿಸಿರುವ ರಿಜಿಜು, “ದಯವಿಟ್ಟು ನಮ್ಮ ದೇಶದ ಹೊರಗಿನಿಂದ ಅಮಾಯಕ ಮುಸ್ಲಿಮರನ್ನು ದಾರಿ ತಪ್ಪಿಸಬೇಡಿ. ಭಾರತವು ಪ್ರಜಾಪ್ರಭುತ್ವ ರಾಷ್ಟ್ರವಾಗಿದೆ ಮತ್ತು ಜನರು ತಮ್ಮದೇ ಆದ ಅಭಿಪ್ರಾಯವನ್ನು ಹೊಂದುವ ಹಕ್ಕನ್ನು ಹೊಂದಿದ್ದಾರೆ ”ಎಂದಿದ್ದಾರೆ.
“ಸುಳ್ಳು ಪ್ರಚಾರವು ತಪ್ಪು ನಿರೂಪಣೆಗಳಿಗೆ ಕಾರಣವಾಗುತ್ತದೆ” ಎಂದು ಆತನಿಗೆ ಎಚ್ಚರಿಕೆ ನೀಡಿದ್ದಾರೆ.
Please do not mislead the innocent Muslims from outside our country. India is a democratic country and people have the right to their own opinion. False propaganda will lead to wrong narratives. https://t.co/3W3YwtyJjI pic.twitter.com/LwV9Jh1YTg
— Kiren Rijiju (@KirenRijiju) September 10, 2024
Save Indian Waqf Properties, Reject The Waqf Amendment Bill!
Let’s stand together to defend the sanctity of Waqf and ensure its preservation for future generations.
Abu Bakr narrated that he heard the messenger of Allah (pbuh) say, “If people see some evil but do not change it,… pic.twitter.com/D5wGui7rl9
— Dr Zakir Naik (@drzakiranaik) September 8, 2024
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.