ನವದೆಹಲಿ: ಕೇಂದ್ರ ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಸಚಿವ ಹರ್ದೀಪ್ ಸಿಂಗ್ ಪುರಿ ಅವರು ಯುಎಇ ಕೈಗಾರಿಕೆ ಮತ್ತು ಸುಧಾರಿತ ತಂತ್ರಜ್ಞಾನ ಸಚಿವ ಸುಲ್ತಾನ್ ಅಹ್ಮದ್ ಅಲ್ ಜಾಬರ್ ಅವರನ್ನು ನಿನ್ನೆ ದೆಹಲಿಯಲ್ಲಿ ಭೇಟಿಯಾದರು.
ಈ ಬಗ್ಗೆ ಎಕ್ಸ್ ಪೋಸ್ಟ್ ಮಾಡಿರುವ ಪುರಿ ಅವರು, ಸಂಪೂರ್ಣ ಹೈಡ್ರೋಕಾರ್ಬನ್ ಮೌಲ್ಯ ಸರಪಳಿಯಲ್ಲಿ ವ್ಯಾಪಿಸಿರುವ ಸಮಗ್ರ ಪಾಲುದಾರಿಕೆಯನ್ನು ಮತ್ತಷ್ಟು ಉತ್ತೇಜಿಸುವ ಮಾರ್ಗಗಳ ಬಗ್ಗೆ ಚರ್ಚಿಸಲಾಗಿದೆ ಎಂದು ಹೇಳಿದರು. ಡಾ.ಜಾಬರ್ ಅವರೊಂದಿಗೆ ಬಹಳ ವಿಸ್ತಾರವಾದ ಮತ್ತು ಫಲಪ್ರದ ಮಾತುಕತೆ ನಡೆಸಲಾಗಿದೆ ಎಂದಿದ್ದಾರೆ.
ಯುಎಇಯಲ್ಲಿರುವ ಭಾರತೀಯ ರಾಯಭಾರಿ ಕಚೇರಿಯು ಸಾಮಾಜಿಕ ಮಾಧ್ಯಮದ ಪೋಸ್ಟ್ನಲ್ಲಿ ಈ ಬಗ್ಗೆ ಮಾಹಿತಿಯನ್ನು ನೀಡಿದ್ದು, ನಿರಂತರವಾಗಿ ಬೆಳೆಯುತ್ತಿರುವ ಭಾರತ-ಯುಎಇ ಇಂಧನ ಪಾಲುದಾರಿಕೆ ಕುರಿತು ನಾಯಕರು ಚರ್ಚಿಸಿದರು ಮತ್ತು ಪ್ರಮುಖ ಒಪ್ಪಂದಗಳಿಗೆ ಸಹಿ ಹಾಕಿದರು ಎಂದಿದ್ದಾರೆ.
ಭಾರತ ಮತ್ತು ಯುಎಇ ನಡುವಿನ ಪಾಲುದಾರಿಕೆಯು ಬಲವಾಗಿ ಬೆಳೆದಿದೆ ಮತ್ತು ವಿಶೇಷವಾಗಿ ಕಳೆದ ದಶಕದಲ್ಲಿ ವೇಗವನ್ನು ಪಡೆದುಕೊಂಡಿದೆ. ಯುಎಇ ಈಗ ಕಚ್ಚಾ ತೈಲ ಆಮದುಗಳ ಭಾರತದ ಎರಡನೇ ಅತಿದೊಡ್ಡ ಮೂಲವಾಗಿದೆ ಮತ್ತು ಪೆಟ್ರೋಲಿಯಂ ಉತ್ಪನ್ನಗಳ ಭಾರತದ ರಫ್ತುಗಳ ಮೂರನೇ ಅತಿದೊಡ್ಡ ತಾಣವಾಗಿದೆ. ಎರಡೂ ದೇಶಗಳು ಇತರ ದೇಶಗಳಲ್ಲಿ ವಿಶ್ವಾಸಾರ್ಹ ಪಾಲುದಾರರು ಮತ್ತು ಸಹಯೋಗಿಗಳು ಎಂದಿದೆ.
Delighted to receive my friend HE Dr Sultan Ahmed Al Jaber, UAE Minister of Industry and Advanced Technology and @ADNOCGroup Managing Director and Group CEO in New Delhi today.
Held a very extensive & fruitful meeting with my dear friend, Dr Jaber. The partnership between India &… pic.twitter.com/tSoCLYtoVI— Hardeep Singh Puri (@HardeepSPuri) September 9, 2024
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.