ನವದೆಹಲಿ: ಪದ್ಮ ಪ್ರಶಸ್ತಿಗಳಿಗೆ ಸ್ಪೂರ್ತಿದಾಯಕ ವ್ಯಕ್ತಿಗಳನ್ನು ನಾಮನಿರ್ದೇಶನ ಮಾಡುವಂತೆ ಪ್ರಧಾನಿ ನರೇಂದ್ರ ಮೋದಿ ಜನತೆಯನ್ನು ಒತ್ತಾಯಿಸಿದ್ದಾರೆ. ನಾಮಪತ್ರ ಸಲ್ಲಿಸಲು ಇದೇ ತಿಂಗಳ 15 ಕೊನೆಯ ದಿನವಾಗಿದೆ.
ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್ ಮಾಡಿರುವ ಮೋದಿ, ಈಗಾಗಲೇ ಹಲವಾರು ನಾಮನಿರ್ದೇಶನಗಳು ಬಂದಿವೆ ಎಂದು ಹೇಳಲು ಸಂತೋಷವಾಗುತ್ತಿದೆ. ಕಳೆದ ಒಂದು ದಶಕದಲ್ಲಿ ಸರ್ಕಾರವು ಅಸಂಖ್ಯಾತ ತಳಮಟ್ಟದ ಸಾಧಕರಿಗೆ ಜನಪದ ಪದ್ಮ ಪ್ರಶಸ್ತಿ ನೀಡಿ ಗೌರವಿಸಿದೆ ಎಂದು ತಿಳಿಸಿದರು.
ಪ್ರಶಸ್ತಿ ಪುರಸ್ಕೃತರ ಜೀವನ ಪಯಣಗಳು ಅಸಂಖ್ಯಾತ ಜನರನ್ನು ಪ್ರೇರೇಪಿಸಿವೆ ಮತ್ತು ಅವರ ದೃಢತೆ ಮತ್ತು ಸಮರ್ಪಣೆ ಅವರ ಗಮನಾರ್ಹ ಕೆಲಸದಲ್ಲಿ ಗೋಚರಿಸುತ್ತದೆ ಎಂದಿರುವ ಮೋದಿ, ವ್ಯವಸ್ಥೆಯನ್ನು ಹೆಚ್ಚು ಪಾರದರ್ಶಕ ಮತ್ತು ಜನಭಾಗಿದಾರಿಯಾಗಿ ಮಾಡುವ ಉತ್ಸಾಹದಲ್ಲಿ, ವಿವಿಧ ಪದ್ಮ ಪ್ರಶಸ್ತಿಗಳಿಗೆ ಇತರರನ್ನು ನಾಮನಿರ್ದೇಶನ ಮಾಡಲು ಸರ್ಕಾರ ಜನರನ್ನು ಆಹ್ವಾನಿಸುತ್ತಿದೆ ಎಂದಿದ್ದಾರೆ.
ನಾಮನಿರ್ದೇಶನಗಳನ್ನು https://awards.gov.in. ಇಲ್ಲಿ ಸಲ್ಲಿಸಬಹುದಾಗಿದೆ.
Over the last decade, we have honoured countless grassroots level heroes with the #PeoplesPadma. The life journeys of the awardees have motivated countless people. Their grit and tenacity are clearly visible in their rich work. In the spirit of making the system more transparent…
— Narendra Modi (@narendramodi) September 9, 2024
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.