ಮುಂಬಯಿ: ಉಗ್ರರ ನಿಜವಾದ ಗುರುತನ್ನು ಮರೆಮಾಡಿ ಕೇವಲ ಅವರ ಕೋಡ್ ವರ್ಡ್ ಬಳಸಿ ಜನರ ಆಕ್ರೋಶಕ್ಕೆ ತುತ್ತಾಗಿದ್ದ ʼIC 814: ದಿ ಕಂದಹಾರ್ ಹೈಜಾಕ್ʼ ಸಿನಿಮಾ ತಯಾರಕರು ಕೊನೆಗೂ ತಮ್ಮ ತಪ್ಪನ್ನು ತಿದ್ದಿಕೊಳ್ಳಲು ಮುಂದಾಗಿದ್ದಾರೆ. ಸಿನಿಮಾದ ಆರಂಭದಲ್ಲಿ ಉಗ್ರರ ನಿಜವಾದ ಹೆಸರನ್ನು ಹಾಕುವುದಾಗಿ ನೆಟ್ಫ್ಲಿಕ್ಸ್ ಅಧಿಕೃತ ಹೇಳಿಕೆ ನೀಡಿದೆ.
“ಇಂಡಿಯನ್ ಏರ್ಲೈನ್ಸ್ ವಿಮಾನ 814 ಅನ್ನು 1999 ರಲ್ಲಿ ಅಪಹರಣ ಮಾಡಲಾದ ಘಟನೆಯ ಬಗ್ಗ ಪರಿಚಯವಿಲ್ಲದ ಪ್ರೇಕ್ಷಕರ ಅನುಕೂಲಕ್ಕಾಗಿ ಅಪಹರಣಕಾರರ ಕೋಡ್ ಹೆಸರುಗಳ ಜೊತೆಗೆ ಅವರ ನಿಜವಾದ ಹೆಸರನ್ನು ಆರಂಭದಲ್ಲಿ ಪ್ರದರ್ಶಿಸುತ್ತೇವೆ. ಸಿನಿಮಾದಲ್ಲಿ ಘಟನೆಯ ಸಮಯದಲ್ಲಿ ಬಳಸಲಾದ ಕೋಡ್ ಹೆಸರುಗಳನ್ನು ಬಳಸಲಾಗಿದೆ” ನೆಟ್ಫ್ಲಿಕ್ಸ್ ಇಂಡಿಯಾ ಸ್ಪಷ್ಟಪಡಿಸಿದೆ.
ಅನುಭವ್ ಸಿನ್ಹಾ ಅವರು ನಿರ್ದೇಶಿಸಿದ ಈ ಚಲನಚಿತ್ರವು 1999 ರಲ್ಲಿ ಭಯೋತ್ಪಾದಕರು ಇಂಡಿಯನ್ ಏರ್ಲೈನ್ಸ್ ಅನ್ನು ಹೈಜಾಕ್ ಮಾಡಿದ ನೈಜ ಘಟನೆಗಳನ್ನು ಆಧರಿಸಿದೆ.
ಈ ಚಿತ್ರವು ವಿಮರ್ಶಕರಿಂದ ಸಕಾರಾತ್ಮಕ ವಿಮರ್ಶೆಗಳನ್ನು ಗಳಿಸುತ್ತಿದೆ, ಆದರೆ ಇದರಲ್ಲಿ ಭಯೋತ್ಪಾದಕರ ನೈಜ ಹೆಸರನ್ನು ಮರೆಮಾಡಿ ಹಿಂದೂ ಹೆಸರುಗಳನ್ನು ಇಟ್ಟಿರುವುದು ಜನರ ಆಕ್ರೋಶಕ್ಕೆ ಕಾರಣವಾಗಿದೆ, ನೈಜ ತಪ್ಪಿತಸ್ಥರ ಕೃತ್ಯವನ್ನು “ವೈಟ್ವಾಶ್” ಮಾಡುವ ಪ್ರಯತ್ನ ಇದೆಂದು ಆರೋಪಗಳು ಕೇಳಿ ಬಂದಿದ್ದವು.
ಇಬ್ರಾಹಿಂ ಅಥರ್, ಶಾಹಿದ್ ಅಖ್ತರ್ ಸಯೀದ್, ಸನ್ನಿ, ಅಹ್ಮದ್ ಖಾಜಿ, ಜಹೂರ್ ಮಿಸ್ತ್ರಿ ಮತ್ತು ಶಾಕಿರ್ ಎಂಬ ಹೆಸರಿನ ಉಗ್ರರು ವಿಮಾನವನ್ನು ಹೈಜಾಕ್ ಮಾಡಿದ್ದರು. ಆದರೆ ಸಿನಿಮಾದಲ್ಲಿ ಹೆಸರನ್ನು ಭೋಲಾ, ಶಂಕರ್, ಡಾಕ್ಟರ್, ಬರ್ಗರ್ ಮತ್ತು ಚೀಫ್ ಎಂದು ಬದಲಾಯಿಸಲಾಗಿದೆ. ಅಂದರೆ ಇಲ್ಲಿ ಉಗ್ರರ ನಿಜ ಹೆಸರು ಹೇಳದೆ ಕೇವಲ ಕೋಡ್ ಹೆಸರುಗಳನ್ನು ಇಡಲಾಗಿತ್ತು.
#WATCH | Mumbai, Maharashtra | Netflix India issues an official statement addressing the controversy around its original, IC814- The Kandahar Attack- "… For the benefit of audiences unfamiliar with the 1999 hijacking of the Indian Airlines flight 814, the opening disclaimer has… pic.twitter.com/KpfFuWJXtB
— ANI (@ANI) September 3, 2024
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.