ನವದೆಹಲಿ: ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಆಪರೇಷನ್ ಸಿಂಧೂರ್ ನಿಲ್ಲಿಸಲು ಆದೇಶಿಸಿದ್ದರು ಎಂಬ ಪ್ರತಿಪಕ್ಷಗಳ ಆರೋಪವನ್ನು ವಿದೇಶಾಂಗ ಸಚಿವ ಎಸ್.ಜೈಶಂಕರ್ ಅವರು ಅಲ್ಲಗೆಳೆದಿದ್ದಾರೆ.
ರಾಜ್ಯಸಭೆಯಲ್ಲಿ ಸಚಿವ ಡಾ. ಎಸ್. ಜೈಶಂಕರ್ ಅವರು ಪ್ರತಿಪಕ್ಷಗಳ ಆರೋಪಕ್ಕೆ ಪ್ರಬಲ ಖಂಡನೆ ವ್ಯಕ್ತಪಡಿಸಿದ್ದು, “ಕಿವಿಗೊಟ್ಟು ಕೇಳಿ ಏಪ್ರಿಲ್ 22 ರಿಂದ ಜೂನ್ 16 ರವರೆಗೆ, ಅಧ್ಯಕ್ಷ ಟ್ರಂಪ್ ಮತ್ತು ಪ್ರಧಾನಿ ಮೋದಿ ನಡುವೆ ಒಂದೇ ಒಂದು ಫೋನ್ ಕರೆ ಕೂಡ ನಡೆದಿಲ್ಲ” ಎಂದಿದ್ದಾರೆ.
ಈ ಮೂಲಕ ಅವರು ನಕಲಿ ನಿರೂಪಣೆಗಳನ್ನು ಪುಡಿಮಾಡಿಮಾಡಿದ್ದಾರೆ. ದೇಶದ ಮಾನ ಹರಾಜು ಹಾಕಲು ಮುಂದಾಗಿದ್ದ ಪ್ರತಿಪಕ್ಷಗಳಿಗೆ ಛಿಮಾರಿ ಹಾಕಿದ್ದಾರೆ.
ಭಾರತವು ಸೌದಿ ಅರೇಬಿಯಾ ಸೇರಿದಂತೆ ವಿವಿಧ ರಾಷ್ಟ್ರಗಳೊಂದಿಗೆ ರಾಜತಾಂತ್ರಿಕ ಸಂಪರ್ಕದಲ್ಲಿದ್ದರೂ ಯಾವುದೇ ರೀತಿಯ ಮಧ್ಯಸ್ಥಿಕೆಯನ್ನು ಸ್ವೀಕರಿಸುವುದಿಲ್ಲ ಎಂದು ನಿರಂತರವಾಗಿ ಹೇಳುತ್ತಲೇ ಬಂದಿದೆ. “ಹೋರಾಟ ನಿಲ್ಲಬೇಕಾದರೆ, ಪಾಕಿಸ್ತಾನದ ಡಿಜಿಎಂಒ ವಿನಂತಿಸಬೇಕು ಎಂದು ನಾವು avrige ತಿಳಿಸಿದ್ದೇವೆ ಮತ್ತು ಅದು ನಿಖರವಾಗಿ ಅದುವೇ ಸಂಭವಿಸಿತು” ಎಂದು ಅವರು ಹೇಳಿದ್ದಾರೆ.
“ಭಾರತದ ಮಾರ್ಗ ಸ್ಪಷ್ಟವಾಗಿತ್ತು, ಯಾವುದೇ ಬ್ಯಾಕ್ಚಾನೆಲ್ ರಾಜತಾಂತ್ರಿಕತೆ ಮತ್ತು ಮಧ್ಯವರ್ತಿಗಳಿರಲಿಲ್ಲ, ಮಿಲಿಟರಿಗಳ ಮೂಲಕ ನೇರ ಮತ್ತು ಅಧಿಕೃತ ಸಂವಹನ ಮಾತ್ರ ಇತ್ತು. ಆದಾಗ್ಯೂ, ಭಾರತ ಪಾಕಿಸ್ತಾನದೊಂದಿಗೆ ಕದನ ವಿರಾಮ ಘೋಷಿಸುವ ಮೊದಲೇ, ಟ್ರಂಪ್ ತಮ್ಮ ಸಾಮಾಜಿಕ ಮಾಧ್ಯಮ ವೇದಿಕೆ ಟ್ರುತ್ಸ್ ಸೋಶಿಯಲ್ನಲ್ಲಿ, ಯುನೈಟೆಡ್ ಸ್ಟೇಟ್ಸ್ ಎರಡೂ ದೇಶಗಳ ನಡುವೆ “ಸುದೀರ್ಘ ರಾತ್ರಿಯ ಮಾತುಕತೆಗೆ ಮಧ್ಯಸ್ಥಿಕೆ ವಹಿಸಿದೆ ಎಂದು ಹೇಳಿಕೊಂಡರು” ಎಂದು ಜೈಶಂಕರ್ ಹೇಳಿದ್ದಾರೆ.
EAM Dr S. Jaishankar’s Strong rebuttal in Rajya Sabha 🔥
“Kaan kholke sun lo”“From April 22 to June 16, there was not a single phone call between President Trump and PM Modi.”
Fake narratives crushed. Facts spoken with spine. pic.twitter.com/ZljHwjbQvj
— Megh Updates 🚨™ (@MeghUpdates) July 30, 2025
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.