ಕಛ್: ಗುಜರಾತ್ ಭಾರತದ ಪ್ರಮುಖ ವ್ಯಾಪಾರ ತಾಣಗಳಲ್ಲಿ ಒಂದಾಗಿದ್ದು, ದೇಶದ ಕೆಲವು ಉನ್ನತ ಕೈಗಾರಿಕೋದ್ಯಮಿಗಳ ತವರಾಗಿದೆ. ಇಲ್ಲಿನ ಸಮೃದ್ಧಿ ಕೇವಲ ನಗರಗಳಿಗೆ ಸೀಮಿತವಾಗಿಲ್ಲ. ಕಛ್ನಲ್ಲಿರುವ ಮಾಧಾಪರ್ ಅನ್ನು ‘ಇಡೀ ಏಷ್ಯಾದ ಅತ್ಯಂತ ಶ್ರೀಮಂತ ಗ್ರಾಮ’ ಎಂದು ಕರೆಯಲಾಗುತ್ತದೆ, ಅಲ್ಲಿನ ಜನರ ಆರ್ಥಿಕ ಸಮೃದ್ಧಿ ಎಲ್ಲರ ಕಣ್ಣು ಚುಚ್ಚುವಂತಿದೆ.
ಭುಜ್ನ ಹೊರವಲಯದಲ್ಲಿರುವ ಈ ಗ್ರಾಮದ ನಿವಾಸಿಗಳು ರೂ 7,000 ಕೋಟಿ ಮೌಲ್ಯದ ಸ್ಥಿರ ಠೇವಣಿಗಳನ್ನು ಹೊಂದಿದ್ದಾರೆ, ಇದು ಅವರು ಎಷ್ಟು ಶ್ರೀಮಂತರು ಎಂಬುದಕ್ಕೆ ಒಂದು ಸಾಕ್ಷಿ ಅಷ್ಟೇ.ಮಾಧಾಪರ್ ನಲ್ಲಿ ಪಟೇಲ್ ಸಮುದಾಯದವರು ಹೆಚ್ಚಾಗಿ ವಾಸಿಸುತ್ತಿದ್ದಾರೆ. ಇದರ ಜನಸಂಖ್ಯೆಯು ಸುಮಾರು 32,000 ಎಂದು ಅಂದಾಜಿಸಲಾಗಿದೆ, 2011 ರಲ್ಲಿ ಜನಸಂಖ್ಯೆ 17,000 ಆಗಿತ್ತು.ಹಳ್ಳಿಯು HDFC ಬ್ಯಾಂಕ್, SBI, PNB, Axis ಬ್ಯಾಂಕ್, ICICI ಬ್ಯಾಂಕ್ ಮತ್ತು ಯೂನಿಯನ್ ಬ್ಯಾಂಕ್ ಮುಂತಾದ ಪ್ರಮುಖ ಸಾರ್ವಜನಿಕ ಮತ್ತು ಖಾಸಗಿ ಬ್ಯಾಂಕ್ಗಳನ್ನು ಒಳಗೊಂಡಂತೆ 17 ಬ್ಯಾಂಕ್ಗಳನ್ನು ಹೊಂದಿದೆ, ಒಂದು ಹಳ್ಳಿ ಇಷ್ಟೊಂದು ಬ್ಯಾಂಕ್ ಹೊಂದಿರುವುದು ಅಸಾಮಾನ್ಯ ಎಂದೇ ಹೇಳಬಹುದು. ಅದರ ಹೊರತಾಗಿಯೂ, ಹೆಚ್ಚಿನ ಬ್ಯಾಂಕ್ಗಳು ಇಲ್ಲಿ ತಮ್ಮ ಶಾಖೆಗಳನ್ನು ತೆರೆಯಲು ಆಸಕ್ತಿಯನ್ನು ತೋರುತ್ತಿವೆ.
ಈ ಗ್ರಾಮದ ಏಳಿಗೆಯ ಹಿಂದಿನ ಕಾರಣವೆಂದರೆ ಅದರ ಅನಿವಾಸಿ ಭಾರತೀಯ ಕುಟುಂಬಗಳು, ಅವರುಗಳು ಸ್ಥಳೀಯ ಬ್ಯಾಂಕುಗಳು ಮತ್ತು ಅಂಚೆ ಕಚೇರಿಗಳಲ್ಲಿ ಪ್ರತಿ ವರ್ಷ ಕೋಟ್ಯಾಂತರ ಹಣಗಳನ್ನು ಠೇವಣಿ ಮಾಡುತ್ತಾರೆ. ಗ್ರಾಮವು ಸುಮಾರು 20,000 ಮನೆಗಳನ್ನು ಹೊಂದಿದ್ದು, ಸುಮಾರು 1,200 ಕುಟುಂಬಗಳು ವಿದೇಶದಲ್ಲಿ ವಾಸಿಸುತ್ತಿವೆ, ಹೆಚ್ಚಾಗಿ ಆಫ್ರಿಕನ್ ದೇಶಗಳಲ್ಲಿ ನೆಲೆಸಿದ್ದಾರೆ.
ಮಧ್ಯ ಆಫ್ರಿಕಾದಲ್ಲಿನ ನಿರ್ಮಾಣ ವ್ಯವಹಾರಗಳಲ್ಲಿ ಇಲ್ಲಿನ ಗುಜರಾತಿಗಳು ಹೆಚ್ಚು ಪ್ರಾಬಲ್ಯ ಹೊಂದಿದ್ದಾರೆ, ಈ ಪ್ರದೇಶದ ದೊಡ್ಡ ವಲಸಿಗ ಜನಸಂಖ್ಯೆಯ ಭಾಗವಾಗಿದೆ. ಅನೇಕರು ಯುಕೆ, ಆಸ್ಟ್ರೇಲಿಯಾ, ಅಮೇರಿಕಾ ಮತ್ತು ನ್ಯೂಜಿಲೆಂಡ್ನಲ್ಲಿಯೂ ವಾಸಿಸುತ್ತಿದ್ದಾರೆ.
ಅನೇಕ ಗ್ರಾಮಸ್ಥರು ವಿದೇಶದಲ್ಲಿ ವಾಸಿಸುತ್ತಿದ್ದರೂ ಮತ್ತು ಅಲ್ಲಿಯೇ ಕೆಲಸ ಮಾಡುತ್ತಿದ್ದರೂ, ಅವರು ತಮ್ಮ ಗ್ರಾಮಕ್ಕೆ ಅಂಟಿಕೊಂಡಿದ್ದಾರೆ ಮತ್ತು ತಾವು ವಾಸಿಸುವ ಸ್ಥಳಕ್ಕಿಂತ ಹೆಚ್ಚಾಗಿ ತಮ್ಮ ಹಣವನ್ನು ತಮ್ಮ ಗ್ರಾಮದ ಬ್ಯಾಂಕ್ಗಳಲ್ಲಿ ಇಡಲು ಬಯಸುತ್ತಾರೆ ಎಂದು ಜಿಲ್ಲಾ ಪಂಚಾಯಿತಿ ಮಾಜಿ ಅಧ್ಯಕ್ಷೆ ಪಾರುಲ್ಬೆನ್ ಕಾರ ಹೇಳಿದ್ದಾರೆ.
ಅಪಾರ ಠೇವಣಿ ಇಡುವುದರಿಂದ ಈ ಗ್ರಾನ ಸಮೃದ್ಧಿಯಾಗಿದೆ. ನೀರು, ನೈರ್ಮಲ್ಯ ಮತ್ತು ರಸ್ತೆಯಂತಹ ಎಲ್ಲಾ ಮೂಲಭೂತ ಸೌಕರ್ಯಗಳನ್ನು ಇದು ಹೊಂದಿದೆ. ಸಾರ್ವಜನಿಕ ಮತ್ತು ಖಾಸಗಿ ಶಾಲೆಗಳು, ಕೆರೆಗಳು ಮತ್ತು ದೇವಾಲಯಗಳು, ಬಂಗಲೆಗಳು ಇಲ್ಲಿವೆ ಎಂದು ಗ್ರಾಮದಲ್ಲಿ ರಾಷ್ಟ್ರೀಕೃತ ಬ್ಯಾಂಕ್ನ ಸ್ಥಳೀಯ ಶಾಖಾ ವ್ಯವಸ್ಥಾಪಕರು ಹೇಳಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.