ಬಾರಾಮುಲ್ಲಾ: ದೇಶಾದ್ಯಂತ ಇಂದು ರಕ್ಷಣಾ ಬಂಧನ ಹಬ್ಬ ಮನೆ ಮಾಡಿದೆ. ಸಹೋದರಿಯರು ತಮ್ಮ ಸಹೋದರರಿಗೆ ರಾಖಿ ಕಟ್ಟಿ ತಮ್ಮ ಬಾಂಧವ್ಯವನ್ನು ಗಟ್ಟಿಗೊಳಿಸುತ್ತಿದ್ದಾರೆ. ಅದೇ ರೀತಿ ಗಡಿ ಕಾಯುವ ಯೋಧರಿಗೂ ರಾಖಿಯನ್ನು ಕಟ್ಟಿ ಮಹಿಳೆಯರು ಕೃತಜ್ಞತೆ ಸಮರ್ಪಿಸುತ್ತಿದ್ದಾರೆ.
ಜಮ್ಮು ಮತ್ತು ಕಾಶ್ಮೀರದ ಉರಿ ಸೆಕ್ಟರ್ನ ಗಡಿ ನಿಯಂತ್ರಣ ರೇಖೆಯ (ಎಲ್ಒಸಿ) ಸೋನಿ ಗ್ರಾಮದಲ್ಲಿ ಇಂದು ಮಹಿಳೆಯರು ರಕ್ಷಾ ಬಂಧನ ಹಬ್ಬವನ್ನು ಆಚರಿಸಿ ಭಾರತೀಯ ಸೇನಾ ಸಿಬ್ಬಂದಿಗೆ ರಾಖಿ ಕಟ್ಟಿದರು. ಈ ಮೂಲಕ ಗಡಿಗಳನ್ನು ರಕ್ಷಿಸಿದ್ದಕ್ಕಾಗಿ ಯೋಧರಿಗೆ ಕೃತಜ್ಞತೆಯನ್ನು ತೋರಿಸಿದರು. ಪ್ರತಿಯಾಗಿ, ಸೈನಿಕರು ಯಾವುದೇ ಹಾನಿಯಾಗದಂತೆ ನಿವಾಸಿಗಳನ್ನು ರಕ್ಷಿಸುವ ಪ್ರತಿಜ್ಞೆ ಮಾಡಿದರು.
“ನಾವು ಸಹೋದರಿಯರು ಗಡಿಯುದ್ದಕ್ಕೂ ನಮ್ಮನ್ನು ರಕ್ಷಿಸಿದ್ದಕ್ಕಾಗಿ ನಮ್ಮ ಸಹೋದರನಿಗೆ ರಾಖಿ ಕಟ್ಟಿದ್ದೇವೆ” ಎಂದು ರಾಖಿ ಕಟ್ಟಿದ ಬಳಿಕ ಮಹಿಳೆಯೊಬ್ಬರು ಹೇಳಿಕೊಂಡಿದ್ದಾರೆ.
ರಕ್ಷಾ ಬಂಧನವು ಸಾಂಪ್ರದಾಯಿಕ ಹಿಂದೂ ಹಬ್ಬವಾಗಿದ್ದು, ಸಹೋದರ ಸಹೋದರಿಯರ ನಡುವಿನ ಪ್ರೀತಿ ಮತ್ತು ಬಾಂಧವ್ಯದ ದ್ಯೋತಕವಾಗಿದೆ. ಈ ದಿನ, ಸಹೋದರಿಯರು ತಮ್ಮ ಸಹೋದರನ ಕೈಗೆ ರಾಖಿ ಕಟ್ಟಿ ಆತನಿಂದ ರಕ್ಷಣೆಯನ್ನು ಬಯಸುತ್ತಾರೆ. ಪ್ರೀತಿ ಮತ್ತು ಕಾಳಜಿಯ ಸಂಕೇತವಾಗಿ ಸಹೋದರರು ಉಡುಗೊರೆಗಳನ್ನು ನೀಡುತ್ತಾರೆ.
#WATCH | On the festival of 'Raksha Bandhan', locals tie 'Rakhi' and offer sweets to Army personnel in Soni village along LoC in the Uri sector of Jammu & Kashmir pic.twitter.com/FH6MO8Lj2E
— ANI (@ANI) August 19, 2024
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.