ಬೆಳ್ತಂಗಡಿ : ಸೂಕ್ತ ತನಿಖೆಯಾಗುವ ಮೊದಲೆ ಸನಾತನ ಸಂಸ್ಥೆಯನ್ನು ಆರೋಪಿಸುವುದು ಷಡ್ಯಂತ್ರವಾಗಿದೆ ಮತ್ತು ಇದನ್ನು ಉಗ್ರವಾಗಿ ಖಂಡಿಸುತ್ತೇವೆ. ಈ ಬಗ್ಗೆ ಅ.13 ರಂದು ಬೆಳ್ತಂಗಡಿಯಲ್ಲಿ ಪ್ರತಿಭಟನೆ ನಡೆಸಲಿದ್ದೇವೆ ಎಂದು ವಿವಿಧ ಹಿಂದೂ ಸಂಘಟನೆಗಳ ಪ್ರಮುಖರು ತಿಳಿಸಿದ್ದಾರೆ.
ಸನಾತನ ಸಂಸ್ಥೆಯು ಹಿಂದೂ ಧರ್ಮದ ಆಚಾರ ವಿಚಾರಗಳ ಬಗ್ಗೆ ಶಾಸ್ತ್ರೀಯ ಮಾಹಿತಿಯನ್ನು ನೀಡಿ ಸಮಾಜವನ್ನು ಧರ್ಮದ ಆಚರಣೆಯ ಕಡೆಗೆ ಕೊಂಡೊಯ್ಯುತ್ತಿದೆ. ಇಂತಹ ಮಹಾನ್ ಕಾರ್ಯವನ್ನು ಮಾಡುವ ಸನಾತನ ಸಂಸ್ಥೆಯನ್ನು ಹತ್ಯೆಯಂತಹ ಸುಳ್ಳು ಆರೋಪದಲ್ಲಿ ಸಿಲುಕಿಸಿ, ಸಂಸ್ಥೆಯ ಮಾನ ಹಾನಿ ಮಾಡಲಾಗುತ್ತಿದೆ ಮತ್ತು ಸನಾತನ ಸಂಸ್ಥೆಯನ್ನು ನಿಬಂಧಿಸಲು ಒತ್ತಡವನ್ನು ಹಾಕುವ ಷಡ್ಯಂತ್ರವನ್ನು ರೂಪಿಸಲಾಗುತ್ತಿದೆ. ಇತಿಹಾಸದಿಂದಲೂ ಹಿಂದೂಗಳ ಮೇಲೆ ಶೋಷಣೆ ಆಗುತ್ತಿದೆ. ಗಾಂಧೀಜಿಯವರನ್ನು ಗೋಡ್ಸೆ ಹತ್ಯೆ ಮಾಡಿದರು ಎಂಬ ಕಾರಣ ನೀಡಿ ಹಿಂದೂ ಮಹಾಸಭಾವನ್ನು ನಾಲ್ಕು ದಶಕಗಳ ಕಾಲ ನಿಷೇಧ ಹೇರಿತ್ತು.
ಇಂದಿರಾ ಗಾಂಧಿಯವರು ತುರ್ತು ಪರಿಸ್ಥಿತಿ ಹೇರಿ ರಾಷ್ಟ್ರೀಯ ಸ್ವಯಂಸೇವಕ ಸಂಘವನ್ನು ನಿಷೇಧಿಸಿತ್ತು. ಈಗ ಸಾಹಿತಿ ಕಲ್ಬುರ್ಗಿಯವರ ಹತ್ಯೆಯ ಹೆಸರಿನಲ್ಲಿ ಸನಾತನ ಸಂಸ್ಥೆಯನ್ನು ನಿಷೇಧಿಸಲು ಹೊರಟಿದ್ದಾರೆ. ಸಾಧ್ವಿ ಪ್ರಜ್ಞಾಸಿಂಗ್ರವರ ಮೇಲೆ ಯಾವುದೇ ಮೊಕದ್ದಮೆ ಇಲ್ಲದಿದ್ದರೂ ಅವರನ್ನು ಇನ್ನೂ ಬಿಡುಗಡೆಗೊಳಿಸಲಿಲ್ಲ. ಆದರೆ ಉಗ್ರಗಾಮಿ ಅಜ್ಮಲ್ ಕಸಾಬ್ನಿಗೆ ರಾಜ ಮರ್ಯಾದೆ ನೀಡಲಾಗಿತ್ತು.
ಮೂಲಭೂತವಾದಿಗಳು ಪಾಕಿಸ್ತಾನದ ಧ್ವಜವನ್ನು ಹಾರಿಸುವಾಗ ಮತ್ತು ಬಹಿರಂಗವಾಗಿ ಘೋಷಣೆಯನ್ನು ಕೂಗುವಾಗ ಯಾವುದೇ ಕ್ರಮ ಕೈಗೊಳ್ಳದ ಸರಕಾರ ಹಿಂದೂ ಕಾರ್ಯಕರ್ತರು ಧರ್ಮರಕ್ಷಣೆಯಲ್ಲಿ ತೊಡಗಿ ಗೋವುಗಳ ಹತ್ಯೆಯನ್ನು ತಡೆದರೆ ಅವರ ಮೇಲೆ ತಕ್ಷಣ ಕ್ರಮ ಕೈಗೊಳ್ಳುತ್ತಾರೆ. ಈ ರೀತಿಯಲ್ಲಿ ಆಧ್ಯಾತ್ಮ ಪ್ರಸಾರ ಮಾಡುವ ಸನಾತನ ಸಂಸ್ಥೆಯು ಧರ್ಮರಕ್ಷಣೆಯ ಕಾರ್ಯದಲ್ಲಿ ಆಧಾರವಾಗಿ ನಿಂತಿದೆ. ಈ ಬಗ್ಗೆ ಅಪಪ್ರಚಾರ ಮಾಡುವುದು ಮತ್ತು ನಿರ್ಭಂಧಿಸುವ ವಿಚಾರವನ್ನು ನಾವೆಲ್ಲಾ ಹಿಂದೂ ಪರ ಸಂಘಟನೆಗಳು ಖಡಾಖಂಡಿತವಾಗಿ ವಿರೋಧೀಸುತ್ತೇವೆ ಎಂದರು.
ಗೋಷ್ಠಿಯಲ್ಲಿ ವಿಶ್ವ ಹಿಂದು ಪರಿಷತ್ ತಾಲೂಕಾಧ್ಯಕ್ಷ ತಾರಾನಾಥ್, ಜಿಲ್ಲಾ ಉಪಾಧ್ಯಕ್ಷ ತಿಮ್ಮಪ್ಪ ಗೌಡ ಬೆಳಾಲು, ಬಜರಂಗ ದಳ ಜಿಲ್ಲಾ ಸಂಯೋಜಕ ಭಾಸ್ಕರ ಧರ್ಮಸ್ಥಳ, ಉದಯ ಬಂದಾರು, ಉಮೇಶ್ ಕುಲಾಲ್, ಜಯರಾಜ್ ಸಾಲಿಯಾನ್ ಉಪಸ್ಥಿತರಿದ್ದರು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.