ನವದೆಹಲಿ: ಮಾನವೀಯ ನೆರವಿಗಾಗಿ ಭಾರತವು ಸುಮಾರು 1400 ಕೆಜಿ ಕ್ಯಾನ್ಸರ್ ವಿರೋಧಿ ಔಷಧಿಗಳನ್ನು ಸಿರಿಯಾಕ್ಕೆ ರವಾನಿಸಿದೆ ಎಂದು ವಿದೇಶಾಂಗ ವ್ಯವಹಾರಗಳ ಸಚಿವಾಲಯ ತಿಳಿಸಿದೆ.
ಸಿರಿಯಾದ ಕಲ್ಯಾಣಕ್ಕೆ ದೇಶದ ಬದ್ಧತೆಯನ್ನು ಗಮನದಲ್ಲಿಟ್ಟುಕೊಂಡು ಭಾರತದಿಂದ ಔಷಧಿಗಳನ್ನು ಅಲ್ಲಿಗೆ ರವಾನಿಸಲಾಗುತ್ತದೆ ಎಂದು ಮೂಲಗಳು ತಿಳಿಸಿವೆ.
“ಭಾರತವು ಸಿರಿಯಾಕ್ಕೆ ಮಾನವೀಯ ನೆರವು ಕಳುಹಿಸಿಕೊಟ್ಟಿದೆ. ಮಾನವೀಯ ಬದ್ಧತೆಗಳಿಗೆ ಅನುಗುಣವಾಗಿ, ಭಾರತವು ಸಿರಿಯಾಕ್ಕೆ ಕ್ಯಾನ್ಸರ್ ವಿರೋಧಿ ಔಷಧಗಳನ್ನು ರವಾನಿಸಿದೆ” ಎಂದು ವಿದೇಶಾಂಗ ವ್ಯವಹಾರಗಳ ಸಚಿವಾಲಯದ ಅಧಿಕೃತ ವಕ್ತಾರ ರಣಧೀರ್ ಜೈಸ್ವಾಲ್ ಹೇಳಿದ್ದಾರೆ.
“ಅಂದಾಜು 1400 ಕೆಜಿಗಳ ರವಾನೆಯು ಸಿರಿಯನ್ ಸರ್ಕಾರದ ನೆರವಿಗೆ ಬರಲಿದೆ ಮತ್ತು ಜನರಿಗೆ ಕ್ಯಾನ್ಸರ್ ಎದುರಿಸಲು ಸಹಾಯ ಮಾಡುತ್ತದೆ” ಎಂದು ಪೋಸ್ಟ್ ಹೇಳಿದೆ.
ಸಿರಿಯಾ ಮತ್ತು ಭಾರತ ಐತಿಹಾಸಿಕವಾಗಿ ಆಳವಾಗಿ ಬೇರೂರಿರುವ ಜನರಿಂದ ಜನರ ಸಂಬಂಧಗಳ ಮೇಲೆ ಸೌಹಾರ್ದಯುತ ಸಂಬಂಧಗಳನ್ನು ಹಂಚಿಕೊಂಡಿವೆ.
ಸಿರಿಯಾದಲ್ಲಿನ ಭಾರತೀಯ ರಾಯಭಾರ ಕಚೇರಿಯು ಸಂಘರ್ಷದ ನಡೆವೆಯೂ ತೆರದಿದೆ. ಅಲ್ಲಿನ ಅನೇಕರು ಪ್ರವಾಸಿಗರಾಗಿ, ಉದ್ಯಮಿಗಳಾಗಿ ಮತ್ತು ರೋಗಿಗಳಾಗಿ ಭಾರತಕ್ಕೆ ಭೇಟಿ ನೀಡುತ್ತಾ ಇರುತ್ತಾರೆ.
🇮🇳 sends humanitarian assistance to Syria.
In keeping with its humanitarian commitments, India has despatched anti-cancer drugs to Syria.
The consignment of approx 1400 kgs will support the Syrian government and its people combat the disease. pic.twitter.com/wHpZCEvhcZ
— Randhir Jaiswal (@MEAIndia) August 16, 2024
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.