ನವದೆಹಲಿ: ದೆಹಲಿಯ ಐತಿಹಾಸಿಕ ಕೆಂಪು ಕೋಟೆಯಲ್ಲಿ ಸ್ವಾತಂತ್ರ್ಯ ದಿನಾಚರಣೆಯ ಸಂದರ್ಭದಲ್ಲಿ ಪ್ರಧಾನಿ ನರೇಂದ್ರ ಮೋದಿ ಧ್ವಜಾರೋಹಣ ನೆರವೇರಿಸಿದ್ದಾರೆ. ಇದು ಅವರ ಸತತ ಹನ್ನೊಂದನೇ ರಾಷ್ಟ್ರಧ್ವಜಾರೋಹಣವಾಗಿದೆ. ಪ್ರತಿ ಬಾರಿಯೂ ಸರ್ಕಾರದ ಕಾರ್ಯಸೂಚಿಯನ್ನು ರೂಪಿಸಲು, ಪ್ರಗತಿ ವರದಿಯನ್ನು ಪ್ರಸ್ತುತಪಡಿಸಲು, ಪ್ರಮುಖ ನೀತಿಗಳು ಮತ್ತು ಕಾರ್ಯಕ್ರಮಗಳನ್ನು ಘೋಷಿಸಲು ಮತ್ತು ಸಮಸ್ಯೆಗಳಿಗೆ ಪರಿಹಾರ ಪ್ರಸ್ತಾಪಿಸಲು ಈ ಸಂದರ್ಭವನ್ನು ಮೋದಿ ಬಳಸಿಕೊಳ್ಳುತ್ತಾರೆ.
ದೇಶವನ್ನುದ್ದೇಶಿಸಿ ಮಾತನಾಡಿದ ಮೋದಿ, “ಕೆಲಸ ಮಾಡುವ ಮಹಿಳೆಯರಿಗೆ, ಹೆರಿಗೆ ರಜೆಯನ್ನು 12 ವಾರಗಳಿಂದ 26 ವಾರಗಳಿಗೆ ಹೆಚ್ಚಿಸಲಾಗಿದೆ. ನಾವು ಮಹಿಳೆಯರನ್ನು ಗೌರವಿಸುವುದು ಮಾತ್ರವಲ್ಲ, ನಾವು ಅವರಿಗಾಗಿ ಸೂಕ್ಷ್ಮವಾಗಿ ನಿರ್ಧಾರಗಳನ್ನು ತೆಗೆದುಕೊಳ್ಳಬೇಕು, ನಾವು ಅಂತಹ ನಿರ್ಧಾರಗಳನ್ನು ತೆಗೆದುಕೊಳ್ಳುತ್ತೇವೆ. ತನ್ನ ಮಗುವನ್ನು ಗುಣಮಟ್ಟದ ನಾಗರಿಕನನ್ನಾಗಿ ಮಾಡಲು ತಾಯಿಯ ಅವಶ್ಯಕತೆಗಳಿಗೆ ಸರ್ಕಾರವು ಅಡ್ಡಿಯಾಗುವುದಿಲ್ಲ” ಎಂದಿದ್ದಾರೆ.
ತಮ್ಮ ಭಾಷಣದಲ್ಲಿ ಏಕರೂಪ ನಾಗರಿಕ ಸಂಹಿತೆಯ ಬಗ್ಗೆ ಬಲವಾಗಿ ಪ್ರತಿಪಾದಿಸಿದ ಮೋದಿ, ದೇಶವನ್ನು ವಿಭಜಿಸುವ ಕಾನೂನುಗಳಿಗೆ ಆಧುನಿಕ ಸಮಾಜದಲ್ಲಿ ಸ್ಥಾನವಿಲ್ಲ ಮತ್ತು ಅದನ್ನು ತೆಗೆದುಹಾಕಬೇಕು ಎಂದು ಹೇಳಿದರು. “ಸುಪ್ರೀಂಕೋರ್ಟ್ ಏಕರೂಪ ನಾಗರಿಕ ಸಂಹಿತೆಯ ಬಗ್ಗೆ ಪದೇ ಪದೇ ಚರ್ಚೆಗಳನ್ನು ನಡೆಸಿದೆ, ಆದೇಶಗಳನ್ನು ನೀಡಿದೆ, ಏಕೆಂದರೆ ದೇಶದ ದೊಡ್ಡ ಭಾಗವು ಪ್ರಸ್ತುತ ನಾಗರಿಕ ಸಂಹಿತೆ ಕೋಮು ನಾಗರಿಕ ಸಂಹಿತೆ, ತಾರತಮ್ಯದ ನಾಗರಿಕ ಸಂಹಿತೆ ಎಂದು ಭಾವಿಸುತ್ತದೆ. ಆದರೆ ಸಂವಿಧಾನವು ನಮಗೆ ಈ ಬಗ್ಗೆ ಹೇಳುತ್ತದೆ, ಸುಪ್ರೀಂ ಕೋರ್ಟ್ ಕೂಡ ಇದರ ಪರವಾಗಿಯೇ ಇದೆ ತ್ತು ಇದು ಸಂವಿಧಾನ ತಯಾರಕರ ಕನಸು ಕೂಡ ಇದಾಗಿತ್ತು,, ಆದ್ದರಿಂದ ಅದನ್ನು ಈಡೇರಿಸುವುದು ನಮ್ಮ ಕರ್ತವ್ಯವಾಗಿದೆ ಎಂದರು.
‘ಒಂದು ರಾಷ್ಟ್ರ, ಒಂದು ಚುನಾವಣೆ’ ಜಾರಿಯ ಬಗ್ಗೆಯೂ ಬಲವಾದ ಪ್ರತಿಪಾದನೆ ಮಾಡಿದ ಮೋದಿ, ಆಗಾಗ ಚುನಾವಣೆಗಳು ರಾಷ್ಟ್ರದ ಪ್ರಗತಿಗೆ ಅಡೆತಡೆಗಳನ್ನು ಸೃಷ್ಟಿಸುತ್ತಿವೆ. ಈ ಕಾರಣದಿಂದ ʼಒಂದು ರಾಷ್ಟ್ರ ಒಂದು ಚುನಾವಣೆʼಯ ಕನಸನ್ನು ನನಸಾಗಿಸಲು ರಾಜಕೀಯ ಪಕ್ಷಗಳನ್ನು ಒತ್ತಾಯಿಸಿದರು. ಅಲ್ಲದೇ ಈ ಬಗ್ಗೆ ದೇಶಾದ್ಯಂತ ವ್ಯಾಪಕ ಸಮಾಲೋಚನೆ ನಡೆಸಲಾಗಿದ್ದು, ಎಲ್ಲ ರಾಜಕೀಯ ಪಕ್ಷಗಳು ತಮ್ಮ ಅಭಿಪ್ರಾಯಗಳನ್ನು ವ್ಯಕ್ತಪಡಿಸಿದ್ದು, ಸಮಿತಿಯು ಅತ್ಯುತ್ತಮ ವರದಿಯನ್ನು ಸಲ್ಲಿಸಿದೆ ಎಂದರು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.