ನವದೆಹಲಿ: ಭಾರತ ವಿಭಜನೆಯ ಕರಾಳತೆಯನ್ನು ನೆನಪಿಸುವ ಸಲುವಾಗಿ ಪ್ರತಿ ವರ್ಷ ಆಗಸ್ಟ್ 14 ಅನ್ನು ʼದೇಶ ವಿಭಜನೆಯ ಕರಾಳತೆ ಸಂಸ್ಮರಣಾ ದಿನʼವನ್ನು ಆಚರಿಸಲಾಗುತ್ತದೆ. ವಿಭಜನೆಯ ಸಂದರ್ಭದಲ್ಲಿ ಸಂಕಷ್ಟಕ್ಕೆ ಸಿಲುಕಿದವರ, ಹುತಾತ್ಮರಾದವರ ಸ್ಮರಣಾರ್ಥ ಈ ದಿನವನ್ನು ಆಚರಿಸಲಾಗುತ್ತಿದೆ.
ಈ ಬಗ್ಗೆ ಎಕ್ಸ್ ಪೋಸ್ಟ್ ಮಾಡಿರುವ ಮೋದಿ, “ದೇಶ ವಿಭನೆಯ ಕರಾಳತೆ ಸಂಸ್ಮರಣಾ ದಿನʼದಂದು ವಿಭಜನೆಯ ಭೀಕರತೆಯಿಂದ ಬಾಧಿತರಾದ ಮತ್ತು ಬಹಳವಾಗಿ ನೊಂದ ಅಸಂಖ್ಯಾತ ಜನರನ್ನು ನಾವು ಸ್ಮರಿಸಿಕೊಳ್ಳುತ್ತೇವೆ. ಇದು ಅವರ ಧೈರ್ಯಕ್ಕೆ ಗೌರವ ಸಲ್ಲಿಸುವ ದಿನವೂ ಆಗಿದೆ, ಇದು ಮಾನವನ ದೃಢತ್ವದ ಶಕ್ತಿಯನ್ನು ವಿವರಿಸುತ್ತದೆ. ವಿಭಜನೆಯಿಂದ ಪ್ರಭಾವಿತರಾದ ಬಹಳಷ್ಟು ಜನರು ತಮ್ಮ ಜೀವನವನ್ನು ಪುನರ್ನಿರ್ಮಿಸಲು ಮತ್ತು ಅಪಾರ ಯಶಸ್ಸನ್ನು ಗಳಿಸಿದರು. ನಮ್ಮ ರಾಷ್ಟ್ರದಲ್ಲಿ ಏಕತೆ ಮತ್ತು ಸಹೋದರತ್ವದ ಬಂಧಗಳನ್ನು ಸದಾ ರಕ್ಷಿಸುವ ನಮ್ಮ ಬದ್ಧತೆಯನ್ನು ನಾವು ಇಂದು ಪುನರುಚ್ಚರಿಸುತ್ತೇವೆ” ಎಂದಿದ್ದಾರೆ.
ವಿಭಜನೆಯ ಭೀಕರತೆಯನ್ನು ಸ್ಮರಿಸಿಕೊಂಡ ಕೇಂದ್ರ ಗೃಹ ಸಚಿವ ಅಮಿತ್ ಶಾ, ನಮ್ಮ ಇತಿಹಾಸದ ಅತ್ಯಂತ ಭೀಕರ ಸನ್ನಿವೇಶಗಳಲ್ಲಿ ಅಮಾನವೀಯ ನೋವುಗಳನ್ನು ಅನುಭವಿಸಿದ, ಜೀವ ಕಳೆದುಕೊಂಡ, ನಿರಾಶ್ರಿತರಾದ ಲಕ್ಷಾಂತರ ಜನರಿಗೆ ಗೌರವ ಸಲ್ಲಿಕೆಗಳು ಎಂದಿದ್ದಾರೆ.
On #PartitionHorrorsRemembranceDay, we recall the countless people who were impacted and greatly suffered due to the horrors of Partition. It is also a day to pay tributes to their courage, which illustrates the power of human resilience. A lot of those impacted by Partition went…
— Narendra Modi (@narendramodi) August 14, 2024
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.