
ಥಿಂಪು: ಪ್ರಸ್ತುತ ಭೂತಾನ್ ಪ್ರವಾಸದಲ್ಲಿರುವ ವಿದೇಶಾಂಗ ಕಾರ್ಯದರ್ಶಿ ವಿಕ್ರಮ್ ಮಿಸ್ರಿ ಅವರು ಇಂದು ಥಿಂಪುವಿನಲ್ಲಿ ಭೂತಾನ್ ವಿದೇಶಾಂ ಸಚಿವ ಓಮ್ ಪೆಮಾ ಚೋಡೆನ್ ಅವರೊಂದಿಗೆ 3 ನೇ ಭಾರತ-ಭೂತಾನ್ ಅಭಿವೃದ್ಧಿ ಸಹಕಾರ ಮಾತುಕತೆಯ ಸಹ-ಅಧ್ಯಕ್ಷತೆ ವಹಿಸಿದ್ದರು.
ಇಬ್ಬರೂ ನಾಯಕರು 13 ನೇ ಪಂಚವಾರ್ಷಿಕ ಯೋಜನಾ ಅವಧಿಯ ಅಡಿಯಲ್ಲಿ ಅಭಿವೃದ್ಧಿ ಪಾಲುದಾರಿಕೆಯ ವಿವಿಧ ಕ್ಷೇತ್ರಗಳಲ್ಲಿನ ಅನುಷ್ಠಾನ ವಿಧಾನಗಳು ಮತ್ತು ಸಹಕಾರವನ್ನು ಶನಿವಾರ ಪರಿಶೀಲಿಸಿದರು.
ವಿಕ್ರಮ್ ಮಿಸ್ರಿ ಅವರು ನಿನ್ನೆ ಭೂತಾನ್ ಪ್ರಧಾನಿ ತ್ಶೆರಿಂಗ್ ತೊಬ್ಗೇ ಅವರನ್ನು ಭೇಟಿ ಮಾಡಿದರು. ಭೂತಾನ್ನೊಂದಿಗೆ ಭಾರತ ಹಂಚಿಕೊಂಡಿರುವ ಸ್ನೇಹದ ನಿಕಟ ಬಂಧಗಳನ್ನು ಮತ್ತು ಭಾರತ-ಭೂತಾನ್ ಸಂಬಂಧಗಳನ್ನು ಮತ್ತಷ್ಟು ಬಲಪಡಿಸಲು ಭಾರತದ ದೃಢವಾದ ಬದ್ಧತೆಯನ್ನು ಪುನರುಚ್ಚರಿಸಿದರು.
ವಿದೇಶಾಂಗ ಕಾರ್ಯದರ್ಶಿಯವರ ಈ ಭೇಟಿಯು ಭಾರತ ಸರ್ಕಾರವು ತನ್ನ ‘ನೆರೆಹೊರೆ ಮೊದಲು’ ನೀತಿಗೆ ನೀಡುತ್ತಿರುವ ಆದ್ಯತೆಯನ್ನು ಒತ್ತಿಹೇಳುತ್ತದೆ ಎಂದು ವಿದೇಶಾಂಗ ಸಚಿವಾಲಯ ಹೇಳಿದೆ.
“ಈ ಭೇಟಿಯು ಭಾರತ ಮತ್ತು ಭೂತಾನ್ ನಡುವಿನ ನಿಯಮಿತ ಉನ್ನತ ಮಟ್ಟದ ವಿನಿಮಯದ ಸಂಪ್ರದಾಯಕ್ಕೆ ಅನುಗುಣವಾಗಿದೆ ಮತ್ತು ಭಾರತ ಸರ್ಕಾರವು ತನ್ನ ‘ನೆರೆಹೊರೆಯ ಮೊದಲ’ ನೀತಿಗೆ ನೀಡುತ್ತಿರುಬ ಅತ್ಯುನ್ನತ ಆದ್ಯತೆಯನ್ನು ಒತ್ತಿಹೇಳುತ್ತದೆ” ಎಂದು ಹೇಳಿಕೆಯಲ್ಲಿ ತಿಳಿಸಿದೆ.
The two Foreign Secretaries virtually inaugurated 19 schools in Bhutan, which were constructed during the 12th FYP period. pic.twitter.com/zNZzFknd1J
— India in Bhutan (@Indiainbhutan) July 20, 2024
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.


