ನವದೆಹಲಿ: ಭಾರತೀಯ ಸೇನೆ ಅಗ್ನಿವೀರರ ಕಲ್ಯಾಣಕ್ಕೆ ಬದ್ಧವಾಗಿದೆ ಎಂದು ರಕ್ಷಣಾ ಸಚಿವ ರಾಜನಾಥ್ ಸಿಂಗ್ ಹೇಳಿದ್ದಾರೆ.
ಸಾಮಾಜಿಕ ಮಾಧ್ಯಮದ ಪೋಸ್ಟ್ನಲ್ಲಿ ಸಿಂಗ್ ಅವರು, ಅಗ್ನಿವೀರ್ ಅಜಯ್ ಕುಮಾರ್ ಅವರಿಗೆ ಪರಿಹಾರದ ಕುರಿತು ಭಾರತೀಯ ಸೇನೆ ನೀಡಿರುವ ಸ್ಪಷ್ಟೀಕರಣವನ್ನು ಹಂಚಿಕೊಂಡಿದ್ದಾರೆ. ಈ ಮೂಲಕ ಕರ್ತವ್ಯದ ಸಾಲಿನಲ್ಲಿ ಪ್ರಾಣ ಕಳೆದುಕೊಂಡ ಅಗ್ನಿವೀರ್ ಅಜಯ್ ಕುಮಾರ್ ಅವರ ಸಂಬಂಧಿಕರಿಗೆ ಪರಿಹಾರವನ್ನು ನೀಡಲಾಗಿಲ್ಲ ಎಂದು ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿರುವ ಸುದ್ದಿಗಳನ್ನು ಸುಳ್ಳು ಎಂದಿದ್ದಾರೆ.
ಸೇನೆ ತನ್ನ ಸ್ಪಷ್ಟೀಕರಣದಲ್ಲಿ, “ಅಗ್ನಿವೀರ್ ಅಜಯ್ ಕುಮಾರ್ ಮಾಡಿದ ಅತ್ಯುನ್ನತ ತ್ಯಾಗಕ್ಕೆ ಭಾರತೀಯ ಸೇನೆ ವಂದನೆ ಸಲ್ಲಿಸುತ್ತದೆ. ಸಕಲ ಸೇನಾ ಗೌರವಗಳೊಂದಿಗೆ ಅವರ ಅಂತಿಮ ವಿಧಿವಿಧಾನಗಳನ್ನು ನೆರವೇರಿಸಲಾಯಿತು. ಒಟ್ಟು ಮೊತ್ತದಲ್ಲಿ ಅಗ್ನಿವೀರ್ ಅಜಯ್ ಕುಟುಂಬಕ್ಕೆ ಈಗಾಗಲೇ 98 ಲಕ್ಷ 39 ಸಾವಿರ ರೂಪಾಯಿ ಪಾವತಿಸಲಾಗಿದೆ. ಅಗ್ನಿವೀರ್ ಯೋಜನೆಯ ನಿಬಂಧನೆಗಳ ಪ್ರಕಾರ ಅನ್ವಯವಾಗುವಂತೆ ಅಂದಾಜು 67 ಲಕ್ಷ ರೂಪಾಯಿಗಳ ಮೊತ್ತದ ಎಕ್ಸ್-ಗ್ರೇಷಿಯಾ ಮತ್ತು ಇತರ ಪ್ರಯೋಜನಗಳನ್ನು ಶೀಘ್ರದಲ್ಲೇ ಪೊಲೀಸ್ ಪರಿಶೀಲನೆಯ ನಂತರ ಅಂತಿಮ ಖಾತೆಯ ಸೆಟಲ್ಮೆಂಟ್ನಲ್ಲಿ ಪಾವತಿಸಲಾಗುವುದು” ಎಂದು ಹೇಳಿದೆ.
ಅಗ್ನಿವೀರರಿಗೆ ನೀಡುವ ಒಟ್ಟು ಪರಿಹಾರ ಮೊತ್ತವು ಸುಮಾರು 1 ಕೋಟಿ 65 ಲಕ್ಷ ರೂಪಾಯಿಗಳಾಗಿರುತ್ತದೆ. ಭಾರತೀಯ ಸೇನೆಯು ಅಗ್ನಿವೀರರು ಸೇರಿದಂತೆ ಅಗಲಿದ ಸೈನಿಕರ ಬಂಧುಗಳಿಗೆ ನೀಡಬೇಕಾದ ಪರಿಹಾರವನ್ನು ತ್ವರಿತವಾಗಿ ಪಾವತಿಸಲಾಗುತ್ತದೆ ಎಂದು ಮತ್ತೊಮ್ಮೆ ಒತ್ತಿಹೇಳಿದೆ.
*CLARIFICATION ON EMOLUMENTS TO AGNIVEER AJAY KUMAR*
Certain posts on Social Media have brought out that compensation hasn't been paid to the Next of Kin of Agniveer Ajay Kumar who lost his life in the line of duty.
It is emphasised that the Indian Army salutes the supreme… pic.twitter.com/yMl9QhIbGM
— ADG PI – INDIAN ARMY (@adgpi) July 3, 2024
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.