ನವದೆಹಲಿ: ಭಾರತದ ಹೆಮ್ಮೆಯ ಯೋಧರು ಮರುಭೂಮಿಗಳು, ಹಿಮಭರಿತ ಪರ್ವತಗಳು ಮತ್ತು ಸಮುದ್ರದಂತಹ ಕಠಿಣ ಭೂಪ್ರದೇಶದಲ್ಲಿ ಯೋಗ ಪ್ರದರ್ಶಿಸುವ ಮೂಲಕ ತಮ್ಮ ಯೋಗ ಬಗೆಗಿನ ಉತ್ಸಾಹವನ್ನು ಪ್ರತಿಬಿಂಬಿಸಿದ್ದಾರೆ. ಯೋಧರ ಜೊತೆಗೆ ಶ್ವಾನಗಳು ಕೂಡ ಯೋಗದಲ್ಲಿ ಭಾಗಿಯಾಗಿದ್ದು ಎಲ್ಲರ ಗಮನ ಸೆಳೆದಿದೆ.
ಸಶಸ್ತ್ರ ಪಡೆಗಳ ಭಾಗವಾಗಿರುವ ಶ್ವಾನಗಳು ಕೂಡ ರಕ್ಷಣಾ ತಂಡಗಳ ಜೊತೆಗೆ 10 ನೇ ಅಂತರರಾಷ್ಟ್ರೀಯ ಯೋಗ ದಿನವನ್ನು ಆಚರಿಸಲು ಯೋಗ ಆಸನಗಳನ್ನು ಪ್ರದರ್ಶಿಸುತ್ತಿರುವ ವಿಡಿಯೋ ಎಲ್ಲೆಡೆ ವೈರಲ್ ಆಗಿದೆ. ಸಾಮಾನ್ಯವಾಗಿ ಗಸ್ತು, ಟ್ರ್ಯಾಕಿಂಗ್, ರಕ್ಷಣಾ ಕಾರ್ಯಾಚರಣೆ ಹಾಗೂ ಸ್ಫೋಟಕಗಳ ಪತ್ತೆಯಂತಹ ಕಾರ್ಯಗಳನ್ನು ನಿರ್ವಹಿಸುವ ಈ ಶ್ವಾನಗಳು ಇಂದು ಯೋಗ ಮ್ಯಾಟ್ನಲ್ಲಿ ತಮ್ಮ ಚಾಣಾಕ್ಷತೆಯನ್ನು ತೋರಿಸುತ್ತಿರುವುದು ಕಂಡುಬಂದಿದೆ.
ಭಾರತೀಯ ಸೇನೆಯು ಹಂಚಿಕೊಂಡ ವೀಡಿಯೊದಲ್ಲಿ, ಎರಡು ಲ್ಯಾಬ್ರಡಾರ್ ನಾಯಿಗಳು ಇಂಡೋ-ಪಾಕ್ ಗಡಿಯ ನಿಯಂತ್ರಣ ರೇಖೆಯ (LOC) ಬಳಿ ಜಮ್ಮುವಿನಲ್ಲಿ ಸೈನಿಕರ ಗುಂಪಿನೊಂದಿಗೆ ಸೇರಿಕೊಂಡು ಯೋಗ ಮಾಡಿವೆ. ಎರಡು ನಾಯಿಗಳು ಸೈನಿಕ ಗುಂಪಿನ ಮುಂಭಾಗದಲ್ಲಿ ಆಸೀನವಾಗಿ ತಮ್ಮ ಕೋಚ್ ನೀಡಿದ ಸೂಚನೆಗಳನ್ನು ಚಾಚು ತಪ್ಪದೆ ಅನುಸರಿಸಿ ವಿವಿಧ ಯೋಗ ಭಂಗಿಗಳನ್ನು ಪ್ರದರ್ಶಿಸಿವೆ.
#YogaDay2024 | Indian Army's dog squad imitates yoga postures done by their trainers on International Yoga Day.
📍 Akhnoor, Jammu pic.twitter.com/ey355tRI8x
— NDTV (@ndtv) June 21, 2024
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.