ನವದೆಹಲಿ: ಈ ವರ್ಷದ ಹಜ್ ಯಾತ್ರೆ ದುರಂತವಾಗಿ ಪರಿವರ್ತನೆಗೊಂಡಿದೆ. ಮೆಕ್ಕಾದಲ್ಲಿ ತಾಪಮಾನ 50 ಡಿಗ್ರಿ ಮೀರಿರುವ ಹಿನ್ನೆಲೆಯಲ್ಲಿ ಬಿಸಿಲಿನ ಪ್ರತಾಪಕ್ಕೆ ನೂರಾರು ಯಾತ್ರಿಕರು ಸಾವನ್ನಪ್ಪಿದ್ದಾರೆ. ವರದಿಗಳ ಪ್ರಕಾರ ಸಾವನ್ನಪ್ಪಿದವರ ಸಂಖ್ಯೆ 1,000 ಮೀರಿದೆ.
ಸೌದಿ ಅರೇಬಿಯಾದ ತೀವ್ರ ಶಾಖದ ಹೊಡೆತಕ್ಕೆ ಬಲಿಯಾದವರಲ್ಲಿ ಅರ್ಧಕ್ಕಿಂತ ಹೆಚ್ಚು ಮಂದಿ ನೋಂದಾಯಿಸದ ಯಾತ್ರಿಕರು ಎಂದು ವರದಿಗಳು ಹೇಳಿವೆ. ಪ್ರತಿ ವರ್ಷ ಸಾವಿರಾರು ಯಾತ್ರಿಕರು ಅನಿಯಮಿತ ಮಾರ್ಗಗಳ ಮೂಲಕ ಹಜ್ ಮಾಡಲು ಪ್ರಯತ್ನಿಸುತ್ತಾರೆ. ದುಬಾರಿ ಅಧಿಕೃತ ಪರವಾನಗಿಗಳನ್ನು ಪಡೆಯಲು ಸಾಧ್ಯವಿಲ್ಲದ ಕಾರಣ ಅವರು ಈ ರೀತಿ ಮಾಡುತ್ತಾರೆ ಎನ್ನಲಾಗಿದೆ..
ಗುರುವಾರ ವರದಿಯಾದ ಹೊಸ ಸಾವುಗಳಲ್ಲಿ ಈಜಿಪ್ಟ್ನ 58 ಮಂದಿ, ಭಾರತದ 68 ಮಂದಿ ಎಂದು ಹೇಳಲಾಗಿದೆ. ಸುಮಾರು 10 ದೇಶಗಳು ಹಜ್ ಯಾತ್ರೆಯ ಸಮಯದಲ್ಲಿ 1,081 ಸಾವುಗಳನ್ನು ವರದಿ ಮಾಡಿದೆ.
ರಾಷ್ಟ್ರೀಯ ಹವಾಮಾನ ಕೇಂದ್ರವು ಈ ವಾರದ ಆರಂಭದಲ್ಲಿ ಮೆಕ್ಕಾದಲ್ಲಿನ ಮಸೀದಿಯಲ್ಲಿ 51.8 ಡಿಗ್ರಿ ಸೆಲ್ಸಿಯಸ್ ತಾಪಾಮಾನ ಇದೆ ಎಂದು ವರದಿ ಮಾಡಿದೆ.
ಕಳೆದ ತಿಂಗಳು ಪ್ರಕಟವಾದ ಸೌದಿ ಅಧ್ಯಯನದ ಪ್ರಕಾರ, ಈ ಪ್ರದೇಶದಲ್ಲಿ ತಾಪಮಾನವು ಪ್ರತಿ ದಶಕದಲ್ಲಿ 0.4 ಡಿಗ್ರಿ ಸೆಲ್ಸಿಯಸ್ ಏರುತ್ತಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.