ಮುಂಬಯಿ: ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ (ಐಐಟಿ) ಬಾಂಬೆಯು ನಾಟಕದಲ್ಲಿ ರಾಮಾಯಣವನ್ನು ಅವಹೇಳನಕಾರಿಯಾಗಿ ಚಿತ್ರಿಸಿದ ವಿದ್ಯಾರ್ಥಿಗಳಿಗೆ ಬರೋಬ್ಬರಿ 1.2 ಲಕ್ಷ ರೂಪಾಯಿಗಳ ದಂಡ ವಿಧಿಸಿದೆ.
ಈ ವರ್ಷದ ಮಾರ್ಚ್ನಲ್ಲಿ ನಡೆದ ಇನ್ಸ್ಟಿಟ್ಯೂಟ್ನ ಪರ್ಫಾರ್ಮಿಂಗ್ ಆರ್ಟ್ಸ್ ಫೆಸ್ಟಿವಲ್ನಲ್ಲಿ “ರಾಹೋವನ್” ಶೀರ್ಷಿಕೆಯ ನಾಟಕವನ್ನು ಪ್ರದರ್ಶಿಸಲಾಗಿದ್ದು, ಇದರಲ್ಲಿ ಹಿಂದೂ ಧರ್ಮವನ್ನು ಮತ್ತು ಸೀತಾರಾಮರನ್ನು ಅವಹೇಳನಕಾರಿಯಾಗಿ ಬಿಂಬಿಸಲಾಗಿತ್ತು. ಈ ಬಗ್ಗೆ ವಿದ್ಯಾರ್ಥಿಗಳ ಒಂದು ವಿಭಾಗ ಪ್ರತಿಭಟನೆ ನಡೆಸಿದ ತರುವಾಯ ಸಂಸ್ಥೆಯು ನಾಟಕ ಪ್ರದರ್ಶಿಸಿದ ವಿದ್ಯಾರ್ಥಿಗಳಿಗೆ ಸುಮಾರು ಒಂದು ಸೆಮಿಸ್ಟರ್ ಶುಲ್ಕಕ್ಕೆ ಸಮಾನವಾದ ರೂ 1.2 ಲಕ್ಷ ದಂಡವನ್ನು ವಿಧಿಸಿದೆ.
ಕನಿಷ್ಠ ಏಳು ಇತರ ವಿದ್ಯಾರ್ಥಿಗಳಿಗೆ ದಂಡ ವಿಧಿಸಲಾಗಿದೆ. ಅದಕ್ಕೂ ಮುನ್ನ ನಾಟಕಕ್ಕೆ ಸಂಬಂಧಿಸಿದ ದೂರುಗಳ ಪರಿಹಾರಕ್ಕೆ ಮೇ 8ರಂದು ಶಿಸ್ತು ಸಮಿತಿ ಸಭೆ ಕರೆಯಲಾಗಿತ್ತು. ಪ್ರಶ್ನೆಯಲ್ಲಿರುವ ವಿದ್ಯಾರ್ಥಿಯು ಸಭೆಯಲ್ಲಿ ಭಾಗವಹಿಸಿದ್ದರು ಮತ್ತು ಚರ್ಚೆಗಳ ಆಧಾರದ ಮೇಲೆ ಸಮಿತಿಯು ಶಿಕ್ಷಾರ್ಹ ಕ್ರಮಗಳನ್ನು ಶಿಫಾರಸು ಮಾಡಿದೆ ಎನ್ನಲಾಗಿದೆ.
2025 ರಲ್ಲಿ ಜಾಗತಿಕ ಕ್ಯೂಎಸ್ ಶ್ರೇಯಾಂಕದಲ್ಲಿ ಐಐಟಿ ಬಾಂಬೆ ಭಾರತೀಯ ಸಂಸ್ಥೆಗಳಲ್ಲಿ ಅತ್ಯುನ್ನತ ಶ್ರೇಣಿಯಲ್ಲಿದೆ.
We welcome disciplinary action taken by the @iitbombay administration against those involved in the play 'Raahovan,' which depicted the Ramayana in a derogatory manner.
These students abused their academic freedom to mock Lord Ram, Mata Sita, and Lord Laxman.
We urge the… https://t.co/tVxzi0gplp pic.twitter.com/iVuGv4nDk9
— IIT B for Bharat (@IITBforBharat) June 19, 2024
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.