ನವದೆಹಲಿ: ಭಾರತದ ಒಲಿಂಪಿಕ್ ಮತ್ತು ವಿಶ್ವ ಚಾಂಪಿಯನ್ ಜಾವೆಲಿನ್ ಥ್ರೋ ತಾರೆ ನೀರಜ್ ಚೋಪ್ರಾ ಮಂಗಳವಾರ ನಡೆದ ಪಾವೊ ನೂರ್ಮಿ ಗೇಮ್ಸ್ನಲ್ಲಿ ತಮ್ಮ ಚೊಚ್ಚಲ ಚಿನ್ನದ ಪದಕವನ್ನು ಜಯಿಸಿದ್ದಾರೆ, ಒಂದು ತಿಂಗಳ ವಿರಾಮದ ನಂತರ ಸ್ಪರ್ಧಾತ್ಮಕ ಕ್ರಮಕ್ಕೆ ಮರಳಿರುವ ಅವರು ತಮ್ಮ ಪ್ರಾಬಲ್ಯ ಮತ್ತೆ ಸಾಧಿಸಿದ್ದಾರೆ.
2022 ರಲ್ಲಿ ಈ ಗೇಮ್ಸ್ನಲ್ಲಿ ಬೆಳ್ಳಿ ಗೆದ್ದುಕೊಂಡ ಚೋಪ್ರಾ, ಸ್ಪಈ ಬಾರಿ ತನ್ನ ಮೂರನೇ ಪ್ರಯತ್ನದಲ್ಲಿ 85.97 ಮೀ ಜಾವೆಲಿನ್ ಎಸೆಯುವ ಮೂಲಕ ಬಂಗಾರದವನ್ನು ಜಯಿಸಿದರು.
ಪಾವೊ ನೂರ್ಮಿ ಗೇಮ್ಸ್ ನಂತರ, ಚೋಪ್ರಾ ಮುಂದಿನ ಜುಲೈ 7 ರಂದು ಪ್ಯಾರಿಸ್ ಡೈಮಂಡ್ ಲೀಗ್ನಲ್ಲಿ ಕಾಣಿಸಿಕೊಳ್ಳಲಿದ್ದಾರೆ.
ಅವರು ಜೂನ್ 27 ರಿಂದ ಪಂಚಕುಲದಲ್ಲಿ ನಡೆಯಲಿರುವ ರಾಷ್ಟ್ರೀಯ ಅಂತರ-ರಾಜ್ಯ ಅಥ್ಲೆಟಿಕ್ಸ್ನಿಂದ ಒಲಂಪಿಕ್ಸ್ಗೆ ಮುಂಚಿತವಾಗಿ ಒತ್ತಡವನ್ನು ತಗ್ಗಿಸಲು ಹಲವು ಕ್ರೀಡಾಕೂಟಗಳಿಂದ ಹೊರಗುಳಿಯಲಿದ್ದಾರೆ.
Golden boy @Neeraj_chopra1 does it again, wins Gold Medal for the country. Proud of you my boy 🙌🤗🥰 pic.twitter.com/qL0SMXHyBz
— Pramod Kumar Singh (@SinghPramod2784) June 18, 2024
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.