ನವದೆಹಲಿ: ಅಮೆರಿಕದ ಟೆಕ್ ಬಿಲಿಯನೇರ್ ಎಲೋನ್ ಮಸ್ಕ್ ಅವರು ತಮ್ಮ ಐತಿಹಾಸಿಕ ಚುನಾವಣಾ ಗೆಲುವಿಗಾಗಿ ಪ್ರಧಾನಿ ನರೇಂದ್ರ ಮೋದಿಯವರಿಗೆ ಅಭಿನಂದನೆ ಸಲ್ಲಿಸಿದ್ದಾರೆ. ಅಲ್ಲದೇ ಭಾರತದಲ್ಲಿ ‘ಉತ್ತೇಜಕ ಕೆಲಸ’ವನ್ನು ಮುನ್ನಡೆಸುವ ಉತ್ಸಾಹವನ್ನು ವ್ಯಕ್ತಪಡಿಸಿದ್ದಾರೆ.
“ವಿಶ್ವದ ಅತಿದೊಡ್ಡ ಪ್ರಜಾಪ್ರಭುತ್ವ ಚುನಾವಣೆಗಳಲ್ಲಿ ನಿಮ್ಮ ವಿಜಯಕ್ಕಾಗಿ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಅಭಿನಂದನೆಗಳು ! ನನ್ನ ಕಂಪನಿಗಳು ಭಾರತದಲ್ಲಿ ಅತ್ಯಾಕರ್ಷಕ ಕೆಲಸ ಮಾಡುವುದನ್ನು ಎದುರು ನೋಡುತ್ತಿದ್ದೇನೆ” ಎಂದಿದ್ದಾರೆ.
ಜೂನ್ 9 ರಂದು ತಮ್ಮ ಮೂರನೇ ಸತತ ಅವಧಿಯನ್ನು ಪ್ರಾರಂಭಿಸಲಿರುವ ಮೋದಿ, ಮಸ್ಕ್ ಅವರ ಶುಭಾಶಯಗಳನ್ನು ಪುರಸ್ಕರಿಸಿದ್ದಾರೆ. ಅಲ್ಲದೇ ಪ್ರತಿಭಾವಂತ ಯುವಕರು, ಸ್ಥಿರವಾದ ರಾಜಕೀಯ ನೀತಿಗಳಿಂದ ರೂಪುಗೊಂಡ ಭಾರತದಲ್ಲಿನ ಅನುಕೂಲಕರ ವ್ಯಾಪಾರ ವಾತಾವರಣವನ್ನು ಎತ್ತಿ ತೋರಿಸಿದ್ದಾರೆ.
ಟೆಸ್ಲಾ ಬದ್ಧತೆಗಳ ಕಾರಣದಿಂದ ಏಪ್ರಿಲ್ ಭೇಟಿಯನ್ನು ಮುಂದೂಡಿದ ಮಸ್ಕ್, ಈ ವರ್ಷದ ಕೊನೆಯಲ್ಲಿ ಭಾರತಕ್ಕೆ ಭೇಟಿ ನೀಡಲು ಯೋಜಿಸಿದ್ದಾರೆ. ಟೆಸ್ಲಾ ಮತ್ತು ಸ್ಟಾರ್ಲಿಂಕ್ ಮೂಲಕ ಗಮನಾರ್ಹ ಹೂಡಿಕೆಗಳನ್ನು ತರಬಹುದು, ಇದು ಭಾರತದ ಅನುಕೂಲಕರ ಎಲೆಕ್ಟ್ರಿಕ್ ವಾಹನ ನೀತಿ ಮತ್ತು ಮಾರುಕಟ್ಟೆಯಿಂದ ಉತ್ತೇಜಿತವಾಗಿದೆ ಎನ್ನಲಾಗಿದೆ.
Appreciate your greetings @elonmusk. The talented Indian youth, our demography, predictable policies and stable democratic polity will continue to provide the business environment for all our partners. https://t.co/NJ6XembkyB
— Narendra Modi (@narendramodi) June 8, 2024
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.