ನವದೆಹಲಿ: ಭಾರತೀಯ ರಿಸರ್ವ್ ಬ್ಯಾಂಕ್ ಮತ್ತೊಮ್ಮೆ ತನ್ನ ರೆಪೊ ದರವನ್ನು ಶೇ.6.5ಕ್ಕೆ ಉಳಿಸಿಕೊಂಡಿದ್ದು, ಯಥಾಸ್ಥಿತಿಯನ್ನು ಮುಂದುವರೆಸಿದೆ. ಕೇಂದ್ರ ಬ್ಯಾಂಕ್ ಸತತ ಎಂಟನೇ ಬಾರಿಗೆ ಅದೇ ದರವನ್ನು ಉಳಿಸಿಕೊಂಡಿರುವುದು ಗಮನಾರ್ಹ. ಜೂನ್ 7 ರಂದು ಮೂರು ದಿನಗಳ ಹಣಕಾಸು ನೀತಿ ಸಮಿತಿ ಸಭೆಯ ನಂತರ ಈ ಘೋಷಣೆಯನ್ನು ಮಾಡಿದೆ.
ಆರ್ಬಿಐ ಗವರ್ನರ್ ಶಕ್ತಿಕಾಂತ್ ದಾಸ್ ತಮ್ಮ ಭಾಷಣದಲ್ಲಿ, ಅನಿಶ್ಚಿತ ಜಾಗತಿಕ ಪರಿಸರದಲ್ಲಿ ಜಾಗರೂಕರಾಗಿರಲು ಆರ್ಥಿಕ ಮಾದರಿಗಳ ಅಗತ್ಯವನ್ನು ತಿಳಿಸಿದರು ಮತ್ತು ಆಹಾರ ಹಣದುಬ್ಬರಕ್ಕೂ ಅವರು ಒತ್ತು ನೀಡಿದರು
ಸಮಿತಿಯ 4-2 ಬಹುಮತದೊಂದಿಗೆ ಹಣಕಾಸು ನೀತಿ ಸಮಿತಿ ಸಭೆ ಈ ನಿರ್ಧಾರಕ್ಕೆ ಬಂದಿದೆ. ಫೆಬ್ರವರಿ 2023 ರಿಂದ ಈ ದರವು ಶೇಕಡಾ 6.50 ರಷ್ಟಿದೆ.
ಹಣಕಾಸು ನೀತಿ ಸಮಿತಿ ಸಭೆಯು ಜೂನ್ 5 ರಂದು ಪ್ರಾರಂಭವಾಯಿತು ಮತ್ತು ಜೂನ್ 7 ರಂದು ಮುಕ್ತಾಯಗೊಂಡಿದೆ. ಆರ್ಬಿಐ ಗವರ್ನರ್ ನೇತೃತ್ವದಲ್ಲಿ ಈ ಸಭೆಗಳು ಪ್ರತಿ ಎರಡು ತಿಂಗಳಿಗೊಮ್ಮೆ ದೇಶದ ವಿತ್ತೀಯ ನೀತಿಗಳನ್ನು ಮೆಲುಕು ಹಾಕುತ್ತವೆ ಮತ್ತು ನಿರ್ಧರಿಸುತ್ತವೆ. ಮುಂದಿನ ಸಭೆ ಆಗಸ್ಟ್ 6 ಮತ್ತು 8, 2024 ರ ನಡುವೆ ಆಗಸ್ಟ್ನಲ್ಲಿ ನಡೆಯಲಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.