ನವದೆಹಲಿ: ಆಪರೇಷನ್ ಬ್ಲೂ ಸ್ಟಾರ್ನ 40 ನೇ ವಾರ್ಷಿಕೋತ್ಸವವನ್ನು ಇಂದು ಗುರುತಿಸಲಾಗುತ್ತಿದೆ. ಈ ಸಂದರ್ಭದಲ್ಲಿ ಅಮೃತಸರದ ಗೋಲ್ಡನ್ ಟೆಂಪಲ್ ಆವರಣದಲ್ಲಿ ಸಿಖ್ ಸಮುದಾಯದ ಹಲವಾರು ಸದಸ್ಯರು ಖಾಲಿಸ್ತಾನ್ ಪರ ಘೋಷಣೆಗಳನ್ನು ಎತ್ತಿದ್ದಾರೆ.
ಪ್ರತಿಭಟನಾಕಾರರು 1980 ರ ದಶಕದಲ್ಲಿ ಪಂಜಾಬ್ನಲ್ಲಿ ಖಲಿಸ್ತಾನ್ ಪರ ಚಳುವಳಿಯ ನೇತೃತ್ವ ವಹಿಸಿದ್ದ ಜರ್ನೈಲ್ ಸಿಂಗ್ ಭಿಂದ್ರನ್ವಾಲೆ ಪೋಸ್ಟರ್ಗಳನ್ನು ಪ್ರದರ್ಶಿಸಿದ್ದಾರೆ ಎಂದೂ ಹೇಳಲಾಗಿದೆ. ಜೂನ್ 1984 ರಲ್ಲಿ ಮಿಲಿಟರಿ ಕಾರ್ಯಾಚರಣೆಯಲ್ಲಿ ಕೊಲ್ಲಲ್ಪಟ್ಟ ಈತ ಖಲಿಸ್ಥಾನಿಗಳ ಪಾಲಿನ ಹೀರೋ ಎಂದೇ ಬಿಂಬಿಸಲ್ಪಟ್ಟಿದ್ದಾನೆ.
ಅಲ್ಲದೆ, ಸುದ್ದಿ ಸಂಸ್ಥೆ ANI ಹಂಚಿಕೊಂಡ ವೀಡಿಯೊದಲ್ಲಿ, ನಿನ್ನೆ ವಿಸರ್ಜಿಸಲ್ಪಟ್ಟ 17 ನೇ ಲೋಕಸಭೆಯ ಸಂಗ್ರೂರ್ನ ಸಂಸದ ಸಿಮ್ರಂಜಿತ್ ಸಿಂಗ್ ಮಾನ್ ಖಲಿಸ್ತಾನ್ ಪರ ಘೋಷಣೆಗಳನ್ನು ಎತ್ತುತ್ತಿರುವ ಜನರ ನಡುವೆ ಇರುವುದು ಕಂಡು ಬಂದಿದೆ.
ಅಕ್ಟೋಬರ್ 31, 1984 ರಂದು, ಆಪರೇಷನ್ ಬ್ಲೂ ಸ್ಟಾರ್ ಅನ್ನು ಕೈಗೊಳ್ಳಲು ಸೈನ್ಯಕ್ಕೆ ಆದೇಶಿಸಿದ ಆಗಿನ ಪ್ರಧಾನಿ ಇಂದಿರಾ ಗಾಂಧಿಯನ್ನು ಅವರ ಇಬ್ಬರು ಸಿಖ್ ಅಂಗರಕ್ಷಕರಾದ ಬಿಯಾಂತ್ ಸಿಂಗ್ ಮತ್ತು ಸತ್ವಂತ್ ಸಿಂಕ್ ಅವರ ನಿವಾಸದಲ್ಲಿ ಹತ್ಯೆ ಮಾಡಿದ್ದರು.
#WATCH | Punjab: On the 40th anniversary of Operation Blue Star, members of the Sikh community raise slogans inside the Golden Temple premises in Amritsar.
Posters of Jarnail Singh Bhindranwale also seen during the demonstration. Pro-Khalistan slogans also raised. pic.twitter.com/QTrrpnekCq
— ANI (@ANI) June 6, 2024
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.