ಕಠ್ಮಂಡು: ನೇಪಾಳದ ಸುನ್ಸಾರಿ ಜಿಲ್ಲೆಯಲ್ಲಿ “ನೇಪಾಳ-ಭಾರತ ಅಭಿವೃದ್ಧಿ ಸಹಕಾರ” ಹೈ ಇಂಪ್ಯಾಕ್ಟ್ ಸಮುದಾಯ ಅಭಿವೃದ್ಧಿ ಯೋಜನೆಯಡಿ ನಿರ್ಮಿಸಲಾದ ಎರಡು ಶಾಲಾ ಕಟ್ಟಡಗಳನ್ನು ಉದ್ಘಾಟಿಸಲಾಗಿದೆ ಎಂದು ಕಠ್ಮಂಡುವಿನ ಭಾರತೀಯ ರಾಯಭಾರ ಕಚೇರಿ ತಿಳಿಸಿದೆ.
ರಾಮಧುನಿ ಪುರಸಭೆಯಲ್ಲಿ ಶ್ರೀ ಭಡಗೌನ್ ಸಿನುವಾರಿ ಮಾಧ್ಯಮಿಕ ಶಾಲೆ ಮತ್ತು ಸುನ್ಸಾರಿ ಜಿಲ್ಲೆಯ ಇನಾರುವಾ ಪುರಸಭೆಯಲ್ಲಿ ಶ್ರೀ ಭಗವತಿ ಮಾಧ್ಯಮಿಕ ಶಾಲೆಯ ಶಾಲಾ ಕಟ್ಟಡವನ್ನು ಬುಧವಾರ ಉದ್ಘಾಟಿಸಲಾಗಿದೆ. ಈ ಎರಡು ಶಾಲಾ ಕಟ್ಟಡಗಳನ್ನು ಭಾರತದ ನೆರವಿನೊಂದಿಗೆ ನಿರ್ಮಾಣ ಮಾಡಲಾಗಿದೆ.
ಪ್ರಕಟನೆಯ ಪ್ರಕಾರ, ಕಟ್ಟಡವನ್ನು NR.26.30 ಮಿಲಿಯನ್ ಆರ್ಥಿಕ ನೆರವಿನ ಅಡಿಯಲ್ಲಿ ನಿರ್ಮಿಸಲಾಗಿದೆ. ಜಿಲ್ಲಾ ಸಮನ್ವಯ ಸಮಿತಿಯ ಮುಖ್ಯಸ್ಥ ರಾಜನ್ ಮೆಹತಾ, ರಾಮಧುನಿ ಪುರಸಭೆಯ ಮೇಯರ್ ಶಂಕರ್ ಲಾಲ್ ಚೌಧರಿ ಮತ್ತು ಕಠ್ಮಂಡುವಿನ ಭಾರತೀಯ ರಾಯಭಾರ ಕಚೇರಿಯ ಪ್ರಥಮ ಕಾರ್ಯದರ್ಶಿ ಸುಮನ್ ಶೇಖರ್ ಜಂಟಿಯಾಗಿ ಕಟ್ಟಡವನ್ನು ಉದ್ಘಾಟಿಸಿದರು.
ಇದಲ್ಲದೆ, ಇನಾರುವಾ ಪುರಸಭೆಯಲ್ಲಿ ಶ್ರೀ ಭಗವತಿ ಮಾಧ್ಯಮಿಕ ಶಾಲೆಯ ಶಾಲಾ ಕಟ್ಟಡವನ್ನು ಭಾರತದ 30.50 ಕೋಟಿ ರೂಪಾಯಿ ಆರ್ಥಿಕ ನೆರವಿನಿಂದ ಕಟ್ಟಲಾಗಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.