ಕೊಲಂಬೊ: ಗುಜರಾತ್ನ ಅಹಮದಾಬಾದ್ನಲ್ಲಿ ಬಂಧನಕ್ಕೊಳಗಾಗಿದ್ದ ನಾಲ್ವರು ಶ್ರೀಲಂಕಾದ ಐಸಿಸ್ ಭಯೋತ್ಪಾದಕರ ಮೋಸ್ಟ್ ವಾಂಟೆಡ್ ಹ್ಯಾಂಡ್ಲರ್ ಅನ್ನು ಶ್ರೀಲಂಕಾ ಪೊಲೀಸ್ ಗುಪ್ತಚರ ದಳ ಶುಕ್ರವಾರ ಬಂಧಿಸಿದೆ.
46 ವರ್ಷದ ಭಯೋತ್ಪಾದಕ ಶಂಕಿತ ಓಸ್ಮಾನ್ ಪುಷ್ಪರಾಜ ಗೆರಾರ್ಡ್ ಅನ್ನು ಕ್ರಿಮಿನಲ್ ಇನ್ವೆಸ್ಟಿಗೇಶನ್ ಡಿಪಾರ್ಟ್ಮೆಂಟ್ (ಸಿಐಡಿ) ಕೊಲಂಬೊದಲ್ಲಿ ಬಂಧಿಸಿದೆ ಎಂದು ಶ್ರೀಲಂಕಾ ಪೊಲೀಸ್ ಮಾಧ್ಯಮ ವಕ್ತಾರರು ತಿಳಿಸಿದ್ದಾರೆ.
ಭಯೋತ್ಪಾದಕ ಸಂಘಟನೆ ಐಎಸ್ಐಎಸ್ನೊಂದಿಗೆ ಸಂಪರ್ಕ ಹೊಂದಿದ್ದಕ್ಕಾಗಿ ನಾಲ್ವರು ಶಂಕಿತರನ್ನು ಗುಜರಾತ್ ಭಯೋತ್ಪಾದನಾ ನಿಗ್ರಹ ದಳ (ಎಟಿಎಸ್) ಇತ್ತೀಚಿಗೆ ಬಂಧಿಸಿತ್ತು. ನಂತರ ಶ್ರೀಲಂಕಾ ಪೊಲೀಸ್ನ ಎರಡು ಪ್ರಮುಖ ಗುಪ್ತಚರ ಶಾಖೆಗಳಾದ ಸಿಐಡಿ ಮತ್ತು ಭಯೋತ್ಪಾದಕಾ ತನಿಖೆ ವಿಭಾಗ (TID) ಮತ್ತು ಇತರ ಮಿಲಿಟರಿ ಗುಪ್ತಚರ ಸೇವೆಗಳ ಭಾಗವಹಿಸುವಿಕೆಯೊಂದಿಗೆ ಉನ್ನತ ಮಟ್ಟದ ತನಿಖೆಯನ್ನು ಪ್ರಾರಂಭಿಸಿತು. ಒಸ್ಮಾನ್ ಅಥವಾ ನಾಲ್ವರು ಐಸಿಸ್ ಶಂಕಿತರ ಹ್ಯಾಂಡ್ಲರ್ಗಾಗಿ ಹುಡುಕಾಟ ನಡೆಯಿತು. ಶ್ರೀಲಂಕಾ ಪೊಲೀಸರು ಮಾಹಿತಿದಾರರಿಗೆ ಶ್ರೀಲಂಕಾದ ರೂಪಾಯಿ ಎರಡು ಮಿಲಿಯನ್ ನಗದು ಬಹುಮಾನವನ್ನು ಕೂಡ ಘೋಷಿಸಿದ್ದಾರೆ.
ಭಾರತದಲ್ಲಿ ಬಂಧಿತ ನಾಲ್ವರೊಂದಿಗೆ ಸಂಪರ್ಕ ಹೊಂದಿದ್ದ ಹ್ಯಾಂಡ್ಲರ್ ಸೇರಿದಂತೆ ಆರು ಶಂಕಿತರನ್ನು ಶ್ರೀಲಂಕಾ ಪೊಲೀಸರು ಇದುವರೆಗೆ ಬಂಧಿಸಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.