ನವದೆಹಲಿ: ಕೇಂದ್ರ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರು ಬುಧವಾರ ಎಎಪಿಯ ರಾಜಕೀಯದಲ್ಲಿನ ಅನೇಕ ದ್ವಂದ್ವ ನಿಲುವಿನ ಬಗ್ಗೆ ಆಕ್ರೋಶ ವ್ಯಕ್ತಪಡಿಸಿದ್ದಾರೆ, ಸಮಾಜವು ಬೇಗ ಆ ಪಕ್ಷವನ್ನು ತಿರಸ್ಕರಿಸುತ್ತದೆ ಎಂದಿದ್ದಾರೆ. ಅಲ್ಲದೇ ಕಳಂಕಿತ ವಿಶ್ವಾಸಾರ್ಹತೆಯ ಕೊರೆತೆಯ ನಾಯಕತ್ವ ವಿಫಲಗೊಳ್ಳುತ್ತದೆ ಎಂದು ಹೇಳಿದ್ದಾರೆ.
ಮಾಧ್ಯಮದ ಜೊತೆ ಮಾತನಾಡಿದ ರಕ್ಷಣಾ ಸಚಿವ ಸಿಂಗ್, ಅರವಿಂದ್ ಕೇಜ್ರಿವಾಲ್ ಅವರ ಅಧಿಕೃತ ನಿವಾಸದೊಳಗೆ ಮಾಜಿ ಡಿಸಿಡಬ್ಲ್ಯೂ ಮುಖ್ಯಸ್ಥೆ ಸ್ವಾತಿ ಮಲಿವಾಲ್ ಅವರನ್ನು ಥಳಿಸುವ ಪ್ರಯತ್ನ ನಡೆದಿದೆ ಎಂಬುದು ಆಘಾತಕಾರಿ, ದೆಹಲಿ ಸಿಎಂ ಪಿಎ ಬಿಭವ್ ಕುಮಾರ್ ತಪ್ಪಿತಸ್ಥರಾಗಿರುವ ಈ ಪ್ರಕರಣವನ್ನು ಮುಚ್ಚಿಡುವ ಪ್ರಯತ್ನವನ್ನು ಎಎಪಿ ನಡೆಸಿದ್ದು ಇನ್ನಷ್ಟು ಆಘಾತಕಾರಿ ಎಂದಿದ್ದಾರೆ.
“ಎಎಪಿ ವಿಶ್ವಾಸಾರ್ಹತೆಯ ಬಿಕ್ಕಟ್ಟನ್ನು ಸೃಷ್ಟಿಸಿದೆ. ಭಾರತದ ರಾಜಕೀಯದಲ್ಲಿ ಯಾವುದೇ ಪಕ್ಷವು ಅಂತಹ ನಂಬಿಕೆ ಕೊರತೆಯನ್ನು ಸೃಷ್ಟಿಸಿಲ್ಲ” ಎಂದಿದ್ದಾರೆ
2011 ರ ಭ್ರಷ್ಟಾಚಾರ ವಿರೋಧಿ ಆಂದೋಲನದ ಉದಾಹರಣೆಯನ್ನು ಉಲ್ಲೇಖಿಸಿದ ಅವರು, ಸಾಮಾಜಿಕ ಕಾರ್ಯಕರ್ತ ಅಣ್ಣಾ ಹಜಾರೆ ಕೂಡ ಅವರನ್ನು ಕೂಡ ಅರವಿಂದ್ ಕೇಜ್ರಿವಾಲ್ ಸುಳ್ಳಿನ ಜಾಲದಲ್ಲಿ ಸಿಲುಕಿಸುವ ಪ್ರಯತ್ನ ಮಾಡಿದ್ದಾರೆ ಎಂದು ಹೇಳಿದರು.
“ಐತಿಹಾಸಿಕ ಸಾರ್ವಜನಿಕ ಹೋರಾಟವು ರಾಜಕೀಯ ರಚನೆಯಾಗಿ ಬದಲಾಗುವುದನ್ನು ಅಣ್ಣಾ ಹಜಾರೆ ಬಯಸಲಿಲ್ಲ ಮತ್ತು ಅಂತಹ ಪ್ರಯತ್ನಗಳ ಬಗ್ಗೆ ಒಮ್ಮೆ ತಮ್ಮ ಕೋಪವನ್ನು ಕೂಡ ಹೊರಹಾಕಿದರು” ಎಂದು ಅವರು ಹೇಳಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.