ನವದೆಹಲಿ: ಈಗಾಗಲೇ ಐದು ಹಂತದ ಲೋಕಸಭಾ ಚುನಾವಣೆಯನ್ನು ಯಶಸ್ವಿಯಾಗಿ ಪೂರೈಸಿರುವ ಭಾರತ ಆರು ಮತ್ತು ಏಳನೇ ಹಂತಕ್ಕೆ ಬೇಕಾದ ಸಿದ್ಧತೆ ಮಾಡಿಕೊಳ್ಳುತ್ತಿದೆ. ಆರನೇ ಹಂತದ ಚುನಾವಣೆ ಮೇ.25ರಂದು ನಡೆಯಲಿದ್ದು, ಪ್ರಚಾರ ನಡೆಸಲು ಇನ್ನು ಎರಡು ದಿನಗಳ ಅವಕಾಶ ಮಾತ್ರ ಇದೆ.
ಏಳನೇ ಹಂತದ ಲೋಕಸಭೆ ಚುನಾವಣೆಯಲ್ಲಿ ಎಂಟು ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಂದ ಒಟ್ಟು 904 ಅಭ್ಯರ್ಥಿಗಳು ಸ್ಪರ್ಧಿಸಲಿದ್ದಾರೆ. ಜೂನ್ 1 ರಂದು ಚುನಾವಣೆ ನಡೆಯಲಿರುವ 57 ಸಂಸದೀಯ ಕ್ಷೇತ್ರಗಳಿಗೆ ಒಟ್ಟು 2105 ನಾಮಪತ್ರಗಳು ಸಲ್ಲಿಕೆಯಾಗಿವೆ ಎಂದು ಚುನಾವಣಾ ಆಯೋಗ ತಿಳಿಸಿದೆ. ಸಲ್ಲಿಕೆಯಾದ ಎಲ್ಲಾ ನಾಮಪತ್ರಗಳ ಪರಿಶೀಲನೆ ನಂತರ 954 ನಾಮಪತ್ರಗಳು ಕ್ರಮಬದ್ಧವಾಗಿವೆ ಎಂದು ತಿಳಿದುಬಂದಿದೆ. 13 ಸಂಸದೀಯ ಕ್ಷೇತ್ರಗಳಿಂದ 598 ಅಭ್ಯರ್ಥಿಗಳು ನಾಮಪತ್ರ ಸಲ್ಲಿಸುವುದರೊಂದಿಗೆ ಪಂಜಾಬ್ ಅತಿ ಹೆಚ್ಚು ನಾಮಪತ್ರಗಳನ್ನು ಸ್ವೀಕರಿಸಿದೆ. ಇದರ ನಂತರ ಉತ್ತರ ಪ್ರದೇಶವು 13 ಸಂಸದೀಯ ಕ್ಷೇತ್ರಗಳಿಂದ 495 ನಾಮಪತ್ರ ಪಡೆದುಕೊಂಡಿದೆ.
ಈ ಕೊನೆಯ ಹಂತದ ಚುನಾವಣೆಯಲ್ಲಿ ಉತ್ತರ ಪ್ರದೇಶ ಮತ್ತು ಪಂಜಾಬ್ನಲ್ಲಿ ತಲಾ ಹದಿಮೂರು ಸ್ಥಾನಗಳು, ಪಶ್ಚಿಮ ಬಂಗಾಳದ ಒಂಬತ್ತು ಸ್ಥಾನಗಳು, ಬಿಹಾರದ ಎಂಟು ಸ್ಥಾನಗಳು, ಒಡಿಶಾದ ಆರು ಸ್ಥಾನಗಳು, ಹಿಮಾಚಲ ಪ್ರದೇಶದ ನಾಲ್ಕು ಸ್ಥಾನಗಳು, ಜಾರ್ಖಂಡ್ನ ಮೂರು ಸ್ಥಾನಗಳು ಮತ್ತು ಚಂಡೀಗಢದ ಕೇಂದ್ರಾಡಳಿತ ಪ್ರದೇಶದಲ್ಲಿ ಒಂದು ಸ್ಥಾನ ಚುನಾವಣೆಗೆ ಹೋಗುತ್ತದೆ. ಎಲ್ಲಾ ಹಂತಗಳ ಮತ ಎಣಿಕೆ ಜೂನ್ 4 ರಂದು ನಡೆಯಲಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.