ಭುವನೇಶ್ವರ: ಪುರಿ ಜಗನ್ನಾಥ ದೇಗುಲಕ್ಕೆ ಸಂಬಂಧಿಸಿದ ರತ್ನ ಭಂಡಾರ (ಖಜಾನೆ) ವಿಚಾರದಲ್ಲಿ ನವೀನ್ ಪಟ್ನಾಯಕ್ ನೇತೃತ್ವದ ಬಿಜೆಡಿ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿರುವ ಪ್ರಧಾನಿ ನರೇಂದ್ರ ಮೋದಿ ಅವರು, ಸೋಮವಾರ ದೇಗುಲದಲ್ಲಿ ಪ್ರಾರ್ಥನೆ ಸಲ್ಲಿಸುವ ವೇಳೆ ವಿವಾದಾತ್ಮಕ ವಿಷಯದ ಬಗ್ಗೆ ದೇಗುಲದ ಸೇವಕರಲ್ಲಿ ಈ ಬಗ್ಗೆ ವಿಚಾರಿಸಿದ್ದಾರೆ ಎಂದು ಹೇಳಲಾಗಿದೆ.
ಒಡಿಶಾದಲ್ಲಿ ಬಿಜೆಪಿ ಸರ್ಕಾರ ರಚಿಸಿದರೆ ಅದರ ಕಳೆದು ಹೋದ ಕೀಗಳ ಸುತ್ತಲಿನ ರಹಸ್ಯವನ್ನು ಬಿಚ್ಚಿಡಲಾಗುವುದು ಎಂದು ಪ್ರಧಾನಿ ಮೋದಿ ಸೇವಕರಿಗೆ ಭರವಸೆ ನೀಡಿದ್ದಾರೆ ಎನ್ನಲಾಗಿದೆ.
“ಮೋದಿ ರತ್ನ ಭಂಡಾರದ ಬಗ್ಗೆ ನಮ್ಮನ್ನು ಕೇಳಿದರು ಮತ್ತು ಕೀಗಳ ನಿಗೂಢ ಕಣ್ಮರೆ ಬಗ್ಗೆ ಆಶ್ಚರ್ಯ ವ್ಯಕ್ತಪಡಿಸಿದರು. ಒಡಿಶಾದಲ್ಲಿ ಬಿಜೆಪಿ ಸರ್ಕಾರ ರಚಿಸಿದರೆ, ಕೀಲಿಗಳು ನಾಪತ್ತೆಯಾಗಲು ಕಾರಣವಾದ ಸಂದರ್ಭಗಳು ಮತ್ತು ರಘುಬೀರ್ ದಾಸ್ ನ್ಯಾಯಾಂಗ ಆಯೋಗದ ವರದಿಯ ತನಿಖಾ ವರದಿಯನ್ನು ಸಾರ್ವಜನಿಕವಾಗಿ ಬಹಿರಂಗಪಡಿಸಲಾಗುವುದು” ಎಂದು ಮೋದಿ ಅವರು ಭರವಸೆ ನೀಡಿದ್ದಾರೆ ಎಂದು ಜಗನ್ನಾಥ ದೇವಾಲಯದ ಸೇವಕ ಮಧು ಸಿಂಘಾರಿ ಹೇಳಿದ್ದಾರೆ.
ದೇವಾಲಯದಲ್ಲಿ ಸುಮಾರು 40 ನಿಮಿಷಗಳ ಕಾಲ ಕಳೆದ ಪ್ರಧಾನಿ ಮೋದಿ ಅವರು ಅಲ್ಲಿನ ಸೇವಕರ ಕುಂದುಕೊರತೆಗಳನ್ನು ತಾಳ್ಮೆಯಿಂದ ಆಲಿಸಿದರು.
ಏಪ್ರಿಲ್ 4, 2018 ರಂದು, ರಚನೆಯ ಪರೀಕ್ಷೆಗಾಗಿ ರತ್ನ ಭಂಡಾರವನ್ನು ಪುನಃ ತೆರೆಯಲು ಸರ್ಕಾರ ವಿಫಲ ಪ್ರಯತ್ನವನ್ನು ಮಾಡಿತ್ತು. ಆದರೆ, ರತ್ನ ಭಂಡಾರದ ಒಳಗಿನ ಕೊಠಡಿಯ ಕೀಗಳು ಲಭ್ಯವಿಲ್ಲದ ಕಾರಣ ಖಜಾನೆ ತೆರೆಯಲು ಅಧಿಕಾರಿಗಳು ವಿಫಲವಾದರು. ಈ ಕಾರಣ ಪರೀಕ್ಷೆಯನ್ನು ಪೂರ್ಣಗೊಳಿಸಲು ಸಾಧ್ಯವಾಗಲಿಲ್ಲ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.