ನವದೆಹಲಿ: ಚುನಾವಣಾ ತಜ್ಞ ಎಂದೇ ಹೆಸರುವಾಸಿಯಾಗಿರುವ ಪ್ರಶಾಂತ್ ಕಿಶೋರ್ ಅವರು 2024 ರ ಲೋಕಸಭೆ ಚುನಾವಣೆಯನ್ನು ವಿಶ್ಲೇಷಿಸಿದ್ದಾರೆ ಮತ್ತು ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಬಿಜೆಪಿ ಮತ್ತೆ ಅಧಿಕಾರಕ್ಕೆ ಬರಲಿದೆ ಎಂದು ದಿಟ್ಟ ಭವಿಷ್ಯ ನುಡಿದಿದ್ದಾರೆ.
ಎನ್ಡಿಟಿವಿಗೆ ಸಂದರ್ಶನ ನೀಡಿದ ಅವರು, ಬಿಜೆಪಿ ಮತ್ತು ಎನ್ಡಿಎ ಸಮಾನ ಅಥವಾ ಉತ್ತಮ ಸಂಖ್ಯೆಗಳೊಂದಿಗೆ ಮತ್ತೆ ಅಧಿಕಾರಕ್ಕೆ ಬರಲಿವೆ ಎಂದಿದ್ದಾರೆ.
ಬಿಜೆಪಿ ಆಡಳಿತದಿಂದ ಜನರು ನಿರಾಶೆಗೊಂಡಿರಬಹುದು. ಆದರೆ ಪ್ರಧಾನಿ ಮೋದಿ ವಿರುದ್ಧ ವ್ಯಾಪಕ ಆಕ್ರೋಶವಂತು ಇಲ್ಲ.
ಬಿಜೆಪಿಗೆ ಸವಾಲು ಹಾಕುವವರ ಗೋಳೂ ಇಲ್ಲ ಎಂದಿದ್ದಾರೆ.
ಶ್ಚಿಮ ಮತ್ತು ಉತ್ತರದಲ್ಲಿ ಬಿಜೆಪಿಗೆ ಯಾವುದೇ ಹಾನಿಯುಂಟಾದ ಸನ್ನಿವೇಶ ಇಲ್ಲ ಎಂದಿದ್ದಾರೆ.
2014 ಮತ್ತು 2019ರ ಲೋಕಸಭಾ ಚುನಾವಣೆಯ ಫಲಿತಾಂಶ ನೋಡಿದರೆ ಬಿಜೆಪಿ 272ಕ್ಕಿಂತ ಹೆಚ್ಚು ಸ್ಥಾನಗಳನ್ನು ಪಡೆಯುವುದಿಲ್ಲ. ಆದರೆ ಅಧಿಕಾರಕ್ಕೆ ಬರುವುದು ಖಚಿತ ಎಂದಿದ್ದಾರೆ.
“ನಮ್ಮಲ್ಲಿ ಪ್ರಬಲ ಪ್ರತಿಪಕ್ಷ ಇರುವುದು ಒಳ್ಳೆಯದು. ಯಾರೇ ಸರ್ಕಾರ ರಚಿಸಿದರೂ ಪಕ್ಷಕ್ಕೆ ಪ್ರಬಲ ಪ್ರತಿಪಕ್ಷ ಎದುರಾಗಲಿದೆ. ಗೆಲ್ಲುವ ಪಕ್ಷವು ಸಾರ್ವಜನಿಕ ಭಿನ್ನಾಭಿಪ್ರಾಯವನ್ನು ದುರ್ಬಲಗೊಳಿಸದಂತೆ ಎಚ್ಚರಿಕೆ ವಹಿಸಬೇಕು. ಇಂಡಿ ಮೈತ್ರಿ ಕಾರ್ಯರೂಪಕ್ಕೆ ಬರುವ ಹೊತ್ತಿಗೆ ತುಂಬಾ ತಡವಾಗಿತ್ತು. ಬಿಜೆಪಿ ಅದಾಗಲೇ ತನ್ನ ನೆಲೆಯನ್ನು ಆವರಿಸಿಕೊಂಡಿತ್ತು” ಎಂದಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.