ನವದೆಹಲಿ: ಬಿಜೆಪಿ ವಿರುದ್ಧ ಪ್ರತಿಪಕ್ಷಗಳ ಕೋಮು ರಾಜಕಾರಣದ ಆರೋಪಕ್ಕೆ ತಿರುಗೇಟು ನೀಡಿರುವ ಪ್ರಧಾನಿ ನರೇಂದ್ರ ಮೋದಿ, ಪ್ರತಿಪಕ್ಷಗಳು ಕೇವಲ ಕೋಮುವಾದ ಮಾತ್ರವಲ್ಲ, ಅವರ ರಾಜಕೀಯವೂ ಜಾತಿವಾದಿ ಮತ್ತು ವೋಟ್ ಬ್ಯಾಂಕ್ ವಿಚಾರಗಳಿಂದ ಕೂಡಿದೆ ಎಂದು ಹೇಳಿದ್ದಾರೆ.
ಎನ್ಡಿಟಿವಿಗೆ ಸಂದರ್ಶನ ನೀಡಿದ ಅವರು, “ನಮ್ಮ ಧ್ಯೇಯವಾಕ್ಯ “ಸಬ್ಕಾ ಸಾಥ್ ಸಬ್ಕಾ ವಿಕಾಸ್” ಎಂದು ಹೇಳಿದರು. ಯಾರು ಯಾವ ಸಮುದಾಯದವರು, ಯಾವ ಜಾತಿಯವರು, ಯಾರಿಗೆ ಸಂಬಂಧಿಗಳಿದ್ದಾರೆ ಎಂಬುದನ್ನು ನೋಡಿ ನಾವು ಮೂಲಸೌಕರ್ಯಗಳನ್ನು ಕಲ್ಪಿಸಿಕೊಡುತ್ತಿಲ್ಲ ಎಂದಿದ್ದಾರೆ
“ಆಡಳಿತದಲ್ಲಿ ಯಾವುದೇ ತಾರತಮ್ಯ ಇರಬಾರದು” ಎಂದು ಅವರು ಪುನರುಚ್ಛರಿಸಿದರು.
80 ಕೋಟಿ ಜನರಿಗೆ ಉಚಿತ ಆಹಾರ ವಿತರಿಸುವ ಯೋಜನೆಯನ್ನು ಉಲ್ಲೇಖಿಸಿದ ಅವರು, ಜಾತಿ-ಪಂಥ ನೋಡಿ ಆಹಾರ ವಿತರಣೆ ಮಾಡುತ್ತಿಲ್ಲ ಎಂದಿದ್ದಾರೆ.
“ಅವರು ಮತಕ್ಕಾಗಿ ಎಸ್ಸಿ/ಎಸ್ಟಿ ಒಬಿಸಿ ಮೀಸಲಾತಿ ವಿಷಯದ ಮೇಲೆ ದಾಳಿ ನಡೆಸಿದರು. ಅವರು ಮತ ಜಿಹಾದ್ ಅನ್ನು ಬೆಂಬಲಿಸುತ್ತಾರೆ. ಎಲ್ಲವೂ ಜಾತ್ಯತೀತತೆಯ ವೇಷದಲ್ಲಿ ಅವರು ಮಾಡುತ್ತಾರೆ. ಆ ಮುಖವಾಡವನ್ನು ತೆಗೆದುಹಾಕಲು ನಾನು ಬಯಸುತ್ತೇನೆ ಅವರು ಹೇಗೆ ಅತ್ಯಂತ ಕೋಮುವಾದಿಗಳು ಎಂಬುದನ್ನು ತೋರಿಸಲು ಬಯಸುತ್ತೇನೆ” ಎಂದು ಪ್ರಧಾನಿ ಮೋದಿ ಹೇಳಿದರು.
ಅಲ್ಲದೇ ದೇಶದಲ್ಲಿ ನಿರುದ್ಯೋಗ ಹೆಚ್ಚಾಗಿದೆ ಎಂಬ ಪ್ರತಿಪಕ್ಷಗಳ ಆರೋಪವನ್ನು ತಳ್ಳಿ ಹಾಕಿದ ಅವರು, ಕಳೆದ 6-7 ವರ್ಷಗಳಲ್ಲಿ ಸುಮಾರು 6 ಕೋಟಿ ಉದ್ಯೋಗಗಳನ್ನು ಸೃಷ್ಟಿಸಲಾಗಿದೆ ಎಂದಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.