ನವದೆಹಲಿ: ಭಾರತೀಯ ಸೇನೆ ಜಗತ್ತಿನ ಐದನೇ ಅತಿ ಬಲಿಷ್ಠ ಸೇನೆ ಎಂದು ಕ್ರೆಡಿಟ್ ಸುಸ್ಸೆ ವರದಿ ತಿಳಿಸಿದೆ.
ಅಮೆರಿಕಾದ ಸೇನೆ ವಿಶ್ವದಲ್ಲೇ ನಂ.1 ಸ್ಥಾನವನ್ನು ಪಡೆದರೆ, ಎರಡನೇ ಸ್ಥಾನ ರಷ್ಯಾ ಸೇನೆ ಪಾಲಾಗಿದೆ. 3ನೇ ಸ್ಥಾನದಲ್ಲಿ ಚೀನಾದ ಸೇನೆಯಿದ್ದರೆ, ನಾಲ್ಕನೇ ಸ್ಥಾನದಲ್ಲಿ ಜಪಾನ್ ಸೇನೆಯಿದೆ.
ಕ್ರೆಡಿಟ್ ಸುಸ್ಸೆಯ ವರದಿಯ ಪ್ರಕಾರ ಜಾಗತಿಕ ಮಟ್ಟದಲ್ಲಿ ಅಮೆರಿಕಾಗೆ 0.94ಅಂಕ ಸಿಕ್ಕರೆ, ರಷ್ಯಾಗೆ 0.8, ಚೀನಾಗೆ 0.79, ಜಪಾನ್ಗೆ ೦.72 ಮತ್ತು ಭಾರತಕ್ಕೆ 0.69 ಅಂಕ ದೊರೆತಿದೆ. ಫ್ರಾನ್ಸ್ಗೆ 0.61, ದಕ್ಷಿಣ ಕೊರಿಯಾ 0.52, ಇಟಲಿ ೦.52, ಬ್ರಿಟನ್ 0.5, ಟರ್ಕಿ 0.47 ಅಂಕಗಳನ್ನು ಪಡೆದಿದೆ.
ಪಾಕಿಸ್ಥಾನದ ಸೇನೆ ಈ ರ್ಯಾಂಕಿಂಗ್ ಪಟ್ಟಿಯಲ್ಲಿ 0.41 ಅಂಕಗಳನ್ನು ಪಡೆದು 11 ಸ್ಥಾನದಲ್ಲಿದೆ.
ಪಾಕಿಸ್ಥಾನಕ್ಕೆ ಈ ವರದಿ ಎಚ್ಚರಿಕೆಯ ಕರೆಗಂಟೆಯಾಗಿದ್ದು, ಈಗಲಾದರೂ ಪದೇ ಪದೇ ಭಾರತದ ವಿರುದ್ಧ ತೊಡೆತಟ್ಟುತ್ತಿರುವ ಪಾಕಿಸ್ಥಾನ ತನ್ನ ನಿಲುವನ್ನು ಬದಲಾಯಿಸಿಕೊಳ್ಳಬೇಕಾದ ಅಗತ್ಯವಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.