ಬ್ರಾಟಿಸ್ಲಾವಾ: ಸ್ಲೋವಾಕಿಯಾದ ಪ್ರಧಾನಿ ರಾಬರ್ಟ್ ಫಿಕೊ ಅವರ ಮೇಲೆ ದುಷ್ಕರ್ಮಿಗಳು ಗುಂಡಿನ ದಾಳಿ ನಡೆಸಿದ್ದಾರೆ. ತೀವ್ರವಾಗಿ ಗಾಐಗೊಂಡಿರುವ ಅವರನ್ನು ಆಸ್ಪತ್ರೆಗೆ ದಾಖಲಿಸಿ ಶಸ್ತ್ರಚಿಕಿತ್ಸೆ ನಡೆಸಲಾಗಿದೆ.
ಈ ಘಟನೆಗೆ ಪ್ರಧಾನಿ ನರೇಂದ್ರ ಮೋದಿ ಆಘಾತ ವ್ಯಕ್ತಪಡಿಸಿದ್ದಾರೆ. ಸದ್ಯ ಫಿಕೋ ಆಸ್ಪತ್ರೆಯಲ್ಲಿ ಜೀವನ್ಮರಣ ಹೋರಾಟ ನಡೆಸುತ್ತಿರುವ ಫಿಕೊ ಅವರ ಚೇತರಿಕೆಗೆ ಹಾರೈಸಿದ್ದಾರೆ.
“ಸ್ಲೋವಾಕಿಯಾದ ಪ್ರಧಾನ ಮಂತ್ರಿ ಎಚ್.ಇ. ರಾಬರ್ಟ್ ಫಿಕೋ ಅವರ ಮೇಲೆ ಗುಂಡಿನ ದಾಳಿಯ ಸುದ್ದಿಯಿಂದ ತೀವ್ರ ಆಘಾತವಾಗಿದೆ. ನಾನು ಈ ಹೇಡಿತನದ ಕೃತ್ಯವನ್ನು ಬಲವಾಗಿ ಖಂಡಿಸುತ್ತೇನೆ ಮತ್ತು ಪಿಎಂ ಫಿಕೋ ಶೀಘ್ರವಾಗಿ ಚೇತರಿಸಿಕೊಳ್ಳಲಿ ಎಂದು ಹಾರೈಸುತ್ತೇನೆ. ಭಾರತವು ಸ್ಲೋವಾಕ್ ಗಣರಾಜ್ಯದ ಜನರೊಂದಿಗೆ ಒಗ್ಗಟ್ಟಿನಲ್ಲಿ ನಿಂತಿದೆ” ಎಂದು ಪ್ರಧಾನಿ ಮೋದಿ ಹೇಳಿದ್ದಾರೆ.
ಬ್ರಾಟಿಸ್ಲಾವಾದ ಸಣ್ಣ ಪಟ್ಟಣದಲ್ಲಿ ಫಿಕೋ ಅವರ ಮೇಲೆ ಅನೇಕ ಗುಂಡುಗಳನ್ನು ಹಾರಿಸಲಾಗಿದೆ. ಸ್ಲೋವಾಕಿಯಾದ ರಕ್ಷಣಾ ಸಚಿವ ರಾಬರ್ಟ್ ಕಲಿನಾಕ್ ಅವರು ಈ ಬಗ್ಗೆ ಮಾಹಿತಿ ನೀಡಿದ್ದು, ಶಸ್ತ್ರಚಿಕಿತ್ಸೆಗೆ ಮೂರು ಗಂಟೆಗಳಿಗೂ ಹೆಚ್ಚು ಸಮಯ ತೆಗೆದುಕೊಂಡರು ಮತ್ತು ಪ್ರಧಾನಿಯ ಸ್ಥಿತಿ ಇನ್ನೂ ಗಂಭೀರವಾಗಿದೆ ಎಂದು ಹೇಳಿದ್ದಾರೆ.
ಪಿಎಂ ಫಿಕೊ ಅವರು ಸರ್ಕಾರಿ ಸಭೆಯ ನಂತರ ಸಾಂಸ್ಕೃತಿಕ ಸಮುದಾಯ ಕೇಂದ್ರದ ಮುಂದೆ ಜನರನ್ನು ಸ್ವಾಗತಿಸುತ್ತಿದ್ದಾಗ ದಾಳಿ ನಡೆದಿದೆ. ವರದಿಗಳು ಮತ್ತು ವೀಡಿಯೋ ದೃಶ್ಯಗಳ ಪ್ರಕಾರ, ಮುಂದಿನ ಸಾಲಿನಲ್ಲಿ ನಿಂತಿದ್ದ ವ್ಯಕ್ತಿಯೊಬ್ಬ ಫಿಕೋ ಅಂಗರಕ್ಷಕರಿಂದ ಗನ್ ಕಸಿದು ಐದು ಬಾರಿ ಗುಂಡು ಹಾರಿಸಿದ್ದಾನೆ. ತಕ್ಷಣವೇ ಭದ್ರತಾ ಅಧಿಕಾರಿಗಳು ಫಿಕೊ ಅವರನ್ನು ಅವರ ಕಾರಿನಲ್ಲಿ ಕರೆದೊಯ್ದರು ಮತ್ತು ನಂತರ ಅವರನ್ನು ಹೆಲಿಕಾಪ್ಟರ್ ಮೂಲಕ ಹತ್ತಿರದ ಆಸ್ಪತ್ರೆಗೆ ಕರೆದೊಯ್ಯಲಾಯಿತು.
Deeply shocked at the news of the shooting at Slovakia’s Prime Minister, H.E. Mr. Robert Fico. I strongly condemn this cowardly and dastardly act and wish PM Fico a speedy recovery. India stands in solidarity with the people of the Slovak Republic.
— Narendra Modi (@narendramodi) May 16, 2024
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.