ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರ ಚುನಾವಣಾ ಅಫಿಡವಿಟ್ ಪ್ರಕಾರ ಸುಮಾರು 3 ಕೋಟಿ ರೂಪಾಯಿಗೂ ಹೆಚ್ಚು ಆಸ್ತಿ ಹೊಂದಿದ್ದಾರೆ, ಅದರಲ್ಲಿ ಹೆಚ್ಚಿನವು ಬ್ಯಾಂಕ್ ಸ್ಥಿರ ಠೇವಣಿಗಳಲ್ಲಿವೆ. ಆದರೆ ಅವರ ಬಳಿ ಸ್ವಂತ ಮನೆಯಾಗಲಿ ಅಥವಾ ಕಾರು ಇಲ್ಲ.
ಮೋದಿ ಅವರು ವಾರಣಾಸಿ ಲೋಕಸಭಾ ಕ್ಷೇತ್ರದಿಂದ ಚುನಾವಣಾ ಅಭ್ಯರ್ಥಿಯಾಗಿ ಮಂಗಳವಾರ ನಾಮಪತ್ರ ಸಲ್ಲಿಸುವಾಗ ಅಫಿಡವಿಟ್ ಸಲ್ಲಿಸಿದರು, ಈ ಹಿಂದೆ ಅವರು ಎರಡು ಬಾರಿ ಇಲ್ಲಿಂದ ನಾಮಪತ್ರ ಸಲ್ಲಿಕೆ ಮಾಡಿದ್ದಾರೆ.
ಚುನಾವಣಾ ಆಯೋಗದ ವೆಬ್ಸೈಟ್ನಲ್ಲಿ ಪ್ರದರ್ಶಿಸಲಾದ ಅಫಿಡವಿಟ್ ಪ್ರಕಾರ, ಅವರ ಚರ ಆಸ್ತಿ 3,02,06,889 ರೂ. ಈ ಮೊತ್ತದ ಹೆಚ್ಚಿನ ಮೊತ್ತವು ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದಲ್ಲಿ ಸ್ಥಿರ ಠೇವಣಿಗಳ ರೂಪದಲ್ಲಿದೆ.
ಇತರ ಆಸ್ತಿಗಳಲ್ಲಿ 2.67 ಲಕ್ಷ ರೂಪಾಯಿ ಮೌಲ್ಯದ 45 ಗ್ರಾಂ ತೂಕದ ನಾಲ್ಕು ಚಿನ್ನದ ಉಂಗುರಗಳು, ಕೈಯಲ್ಲಿನ ನಗದು ಒಟ್ಟು 52,920 ರೂಪಾಯಿಗಳು, 9.12 ಲಕ್ಷ ರೂಪಾಯಿ ಮೌಲ್ಯದ ರಾಷ್ಟ್ರೀಯ ಉಳಿತಾಯ ಪ್ರಮಾಣಪತ್ರಗಳು ಮತ್ತು ಕಳೆದ ಆರ್ಥಿಕ ವರ್ಷದಲ್ಲಿ 3.33 ಲಕ್ಷ ರೂಪಾಯಿಗಳ ಆದಾಯ ತೆರಿಗೆ ವಿನಾಯಿತಿ ಸೇರಿವೆ.
ಸ್ಥಿರ ಆಸ್ತಿ “ನಿಲ್” ಎಂದು ಅಫಿಡವಿಟ್ನಲ್ಲಿ ಹೇಳಲಾಗಿದೆ. ಭೂಮಿ ಮತ್ತು ಮನೆಗಳು ಈ ಸ್ಥಿರ ಆಸ್ತಿ ಅಡಿ ಬರುತ್ತವೆ. ಜಶೋದಾಬೆನ್ ಅವರನ್ನು ಮೋದಿ ಅವರ ಸಂಗಾತಿ ಎಂದು ಉಲ್ಲೇಖಿಸಲಾಗಿದೆ. ಆಕೆಯ ಬಳಿ ಇರುವ ಆಸ್ತಿಗಳ ಮೇಲೆ “ತಿಳಿದಿಲ್ಲ” ಎಂದು ಹೇಳಲಾಗಿದೆ.
ದಾಖಲೆಯ ಪ್ರಕಾರ ಮೋದಿ ವಿರುದ್ಧ ಯಾವುದೇ ಕ್ರಿಮಿನಲ್ ಮೊಕದ್ದಮೆ ಬಾಕಿ ಉಳಿದಿಲ್ಲ ಅಥವಾ ಯಾವುದೇ ಅಪರಾಧಕ್ಕೆ ಶಿಕ್ಷೆಯಾಗಿಲ್ಲ.
ಪ್ರಧಾನ ಮಂತ್ರಿಯನ್ನು ಅಹಮದಾಬಾದ್ ನಿವಾಸಿ ಎಂದು ವಿವರಿಸಲಾಗಿದೆ ಮತ್ತು ಅವರ ವೃತ್ತಿಯು ಸಾರ್ವಜನಿಕ ಜೀವನ ಮತ್ತು ರಾಜಕೀಯ ಚಟುವಟಿಕೆ ಎಂದು ಉಲ್ಲೇಖಿಸಲಾಗಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.