ನವದೆಹಲಿ: ಒಂದು ಕಡೆ ಭಾರತದ ಅವಿಭಾಜ್ಯ ಅಂಗವಾದ ಜಮ್ಮು ಮತ್ತು ಕಾಶ್ಮೀರದ ಶ್ರೀನಗರವು 1996 ರ ನಂತರ 2024 ರ ಲೋಕಸಭೆಗೆ 37.98% ಅತ್ಯಧಿಕ ಮತದಾನವನ್ನು ದಾಖಲಿಸಿದರೆ, ಇನ್ನೊಂದು ಕಡೆ ಪಾಕಿಸ್ಥಾನದಆಕ್ರಮಿತ ಕಾಶ್ಮೀರದಲ್ಲಿರುವ ಕಾಶ್ಮೀರಿಗಳು ಮೇ 9 ರಿಂದ ಪಾಕ್ ಸರ್ಕಾರದ ಮಲತಾಯಿ ಧೋರಣೆಯ ವಿರುದ್ಧ ಉಗ್ರ ಹೋರಾಟವನ್ನೇ ನಡೆಸುತ್ತಿದ್ದಾರೆ.
ಪ್ರತಿಭಟನೆಗಳನ್ನು ಹತ್ತಿಕ್ಕಲು ಪಾಕಿಸ್ಥಾನ ಬಲಪ್ರಯೋಗ ಮಾಡಿದೆ ಮತ್ತು ನೂರಾರು ಮಂದಿಯನ್ನು ಬಂಧನ ಮಾಡಿದೆ. ಆದರೂ ಜಗ್ಗದೆ ಅಲ್ಲಿನ ಜನರು ಇನ್ನಷ್ಟು ಕೆರಳಿದ್ದಾರೆ.
ಪಾಕಿಸ್ತಾನದ ಪ್ರಧಾನಿ ಶೆಹಬಾಜ್ ಷರೀಫ್ ಸೋಮವಾರ 23 ಶತಕೋಟಿ ಪಾಕಿಸ್ತಾನ ರೂಪಾಯಿಗಳ ಪ್ಯಾಕೇಜ್ ಅನ್ನು ಘೋಷಿಸಿದ ನಂತರ ಹಿಂಸಾತ್ಮಕ ಪ್ರತಿಭಟನೆಯನ್ನು ಹಿಂತೆಗೆದುಕೊಳ್ಳಲಾಗಿದೆಯಾದರೂ, ಶ್ರೀನಗರ ಕಣಿವೆಯಲ್ಲಿ ಆರ್ಥಿಕ ಅಸಮಾನತೆಗಳು ಮತ್ತು ಆಕ್ರಮಿತ ಕಾಶ್ಮೀರಿಗಳಲ್ಲಿ ಸಾರ್ವಜನಿಕರನ್ನು ಶೋಷಿಸಲಾಗುತ್ತಿರುವ ರೀತಿ ಪಾಕಿಸ್ಥಾನ ಸರ್ಕಾರಕ್ಕೆ ಎಚ್ಚರಿಕೆಯ ಕರೆಗಂಟೆಯಾಗಿದೆ.
ಪಾಕಿಸ್ತಾನ ಮತ್ತು ಪಾಶ್ಚಿಮಾತ್ಯ ಮಾಧ್ಯಮಗಳು ಪಿಒಕೆ ಹಿಂಸಾಚಾರವನ್ನು ಕಡಿಮೆ ವರದಿ ಮಾಡಲು ಪ್ರಯತ್ನಿಸಿದರೂ, ಸಮಾಹ್ಮಿ, ಸೆಹನ್ಸಾ, ಮೀರ್ಪುರ್, ದಾಡಿಯಾಲ್, ರಾವಲ್ಕೋಟ್, ಖುರಾಟ್ಟಾ, ತಟ್ಟಪಾನಿ ಮತ್ತು ಹಟ್ಟಿಯಾನ್ ಬಾಲಾದಲ್ಲಿ ಪ್ರತಿಭಟನೆಗಳು ನಡೆದರ ರೀತಿ ಇಡಿಯ ಉಪಖಂಡವನ್ನು ಬೆರಗುಗೊಳಿಸಿದೆ. ಕನಿಷ್ಠ 70 ಜೆಎಎಸಿ ಕಾರ್ಯಕರ್ತರನ್ನು ಬಂಧಿಸಲಾಯಿತು, ಇದು ಪೊಲೀಸರು ಮತ್ತು ಪ್ರತಿಭಟನಾಕಾರರ ನಡುವೆ ಘರ್ಷಣೆಗೆ ಕಾರಣವಾಯಿತು, ಇದರ ಪರಿಣಾಮವಾಗಿ ಕನಿಷ್ಠ ಒಬ್ಬ ಪೊಲೀಸ್ ಸಿಬ್ಬಂದಿ ಮತ್ತು ಮೂವರು ನಾಗರಿಕರು ಸಾವನ್ನಪ್ಪಿದರು ಮತ್ತು 100 ಕ್ಕಿಂತ ಹೆಚ್ಚು ಜನರು ಗಂಭೀರವಾಗಿ ಗಾಯಗೊಂಡರು.
ವ್ಯಾಪಾರಸ್ಥರು, ಸಾಗಣೆದಾರರು ಮತ್ತು ವಕೀಲರನ್ನು ಒಳಗೊಂಡ ಸಾಮಾಜಿಕ-ರಾಜಕೀಯ ಸಂಘಟನೆಯಾದ JAAC ಪಾಕ್ ಆಕ್ರಮಿತ ಕಾಶ್ಮೀರದಲ್ಲಿ ಗೋಧಿ, ಇಂಧನ ಮತ್ತು ವಿದ್ಯುತ್ ಬಿಲ್ಗಳ ಹೆಚ್ಚುತ್ತಿರುವ ವೆಚ್ಚಗಳಿಂದಾಗಿ ಮುಂಚೂಣಿಯಲ್ಲಿ ನಿಂತು ಪ್ರತಿಭಟನೆಯನ್ನು ನಡೆಸುತ್ತಿದೆ. ಮೇ 11 ರಂದು ಮುಜಫರಾಬಾದ್ಗೆ ‘ಲಾಂಗ್ ಮಾರ್ಚ್’ ಗೆ ಜೆಎಸಿ ಕರೆ ನೀಡಿತ್ತು, ಮೇ 8-9 ರಂದು ಅದರ ಕಾರ್ಯಕರ್ತರ ಮೇಲೆ ದಾಳಿ ಮತ್ತು ಬಂಧನ ನಡೆಯಿತು. ಹಿಂಸಾತ್ಮಕ ಪ್ರತಿಭಟನೆಯ ಸಮಯದಲ್ಲಿ ಪಾಕಿಸ್ತಾನದ ರೇಂಜರ್ಗಳ ಮೂರು ವಾಹನಗಳನ್ನು ಪ್ರತಿಭಟನಾಕಾರರು ಸುಟ್ಟು ಹಾಕಿ ಪಾಕಿಸ್ತಾನ ವಿರೋಧಿ ಮತ್ತು ಸ್ವಾತಂತ್ರ್ಯ ಪರ ಘೋಷಣೆಗಳನ್ನು ಕೂಗಿದರು. ಅಲ್ಲಿ ಕಳೆದ ವಾರದಿಂದ ಶಾಲೆಗಳು ಮತ್ತು ವ್ಯಾಪಾರ ಸಂಸ್ಥೆಗಳು ಇಂಟರ್ನೆಟ್ ಅನ್ನು ಸ್ಥಗಿತಗೊಳಿಸಲಾಗಿದೆ.
ಪಾಕಿಸ್ತಾನ ಪೋಲೀಸರು ಪ್ರತಿಭಟನೆಗಳು ತೀವ್ರಗೊಳ್ಳಲು ಭಾರತವನ್ನು ದೂಷಿಸುತ್ತಿದ್ದರೂ ಸಹ, ಪ್ರಾಂತೀಯ ಮತ್ತು ಫೆಡರಲ್ ಅಧಿಕಾರಿಗಳ ವಿರುದ್ಧ ಅಲ್ಲಿನ ಜನರು ಶಸ್ತ್ರಗಳನ್ನು ಎತ್ತಿ ಹಿಡಿದು ಪ್ರತಿಭಟನೆ ನಡೆಸುತ್ತಿದ್ದಾಋಎ. ಮೇ 2023 ರಿಂದ ಆಕ್ರಮಿತ ಕಾಶ್ಮೀರದ ರಾವಲ್ಕೋಟ್ನಲ್ಲಿ ವಿದ್ಯುತ್ ಮತ್ತು ಗೋಧಿ ಹಿಟ್ಟಿನ ಬೆಲೆಯಲ್ಲಿ ಏರಿಕೆಗೆ ಸಂಬಂಧಿಸಿದಂತೆ ಆಕ್ರೋಶ ಭುಗಿಲೇಳುತ್ತಿದೆ. ಸರ್ಕಾರ ಏರಿಕೆಯಾಗಿದೆ. ಇದರ ಬೆನ್ನಲ್ಲೇ ವಿದ್ಯುತ್ ಬಿಲ್ ಪಾವತಿ ಮಾಡದೆ ಬಹಿಷ್ಕಾರ ಕೂಡ ಹಾಕಲಾಗಿದೆ. ಪಿಒಕೆಯಲ್ಲಿನ ವಿದ್ಯುತ್ ಶುಲ್ಕಗಳು ಉತ್ಪಾದನಾ ವೆಚ್ಚಕ್ಕಿಂತ ಐದು ಪಟ್ಟು ಹೆಚ್ಚು ಮತ್ತು ಇದರ ಬಗ್ಗೆ ಸ್ಥಳೀಯರಲ್ಲಿ ತೀವ್ರ ಅಸಮಾಧಾನವಿದೆ ಎಂದು ಪ್ರತಿಭಟನಾಕಾರರು ಹೇಳಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.