ನವದೆಹಲಿ: ಭಾರತ ಮತ್ತು ಕಾಂಬೋಡಿಯಾದ ನಡುವೆ ನೇರ ವಿಮಾನ ಸೇವೆಗಳು ಜೂನ್ 16ರಿಂದ ಆರಂಭವಾಗುತ್ತಿದೆ.
ಕಾಂಬೋಡಿಯಾದ ರಾಷ್ಟ್ರೀಯ ವಿಮಾನಯಾನ ಕಾಂಬೋಡಿಯಾ ಅಂಕೋರ್ ಏರ್ ಇಂದು ಈ ಬಗ್ಗೆ ಮಾಹಿತಿಯನ್ನು ನೀಡಿದ್ದು, ಎರಡು ರಾಷ್ಟ್ರಗಳ ನಡುವೆ ಮೊದಲ ನೇರ ವಿಮಾನ ಸೇವೆಗಳು ಜೂನ್ 16 ರಿಂದ ನಾಮ್ ಪೆನ್ ಮತ್ತು ನವದೆಹಲಿ ನಡುವೆ ವಾರಕ್ಕೆ ನಾಲ್ಕು ಬಾರಿ ಸೋಮವಾರ, ಬುಧವಾರ, ಶುಕ್ರವಾರ ಮತ್ತು ಭಾನುವಾರದಂದು ಪ್ರಾರಂಭವಾಗಲಿದೆ ಎಂದು ಹೇಳಿದೆ.
ಭಾರತದಲ್ಲಿನ ಕಾಂಬೋಡಿಯಾದ ರಾಯಭಾರಿ ಕೋಯ್ ಕುವಾಂಗ್ ಈ ಬಗ್ಗೆ ಮಾತನಾಡಿ, ಭಾರತದೊಂದಿಗೆ ನೇರ ವಿಮಾನ ಸಂಪರ್ಕ ಮತ್ತು ವೈದ್ಯಕೀಯ ಪ್ರವಾಸೋದ್ಯಮಕ್ಕೆ ಬೇಡಿಕೆ ಬೆಳೆಯುತ್ತಿದೆ. ಹೀಗಾಗಿ ಎರಡು ರಾಷ್ಟ್ರಗಳ ನಡುವಿನ ಪ್ರವಾಸಿಗರ ಹರಿವು ವರ್ಷದಿಂದ ವರ್ಷಕ್ಕೆ ದ್ವಿಗುಣಗೊಳ್ಳಲಿದೆ ಎಂದು ಭರವಸೆ ವ್ಯಕ್ತಪಡಿಸಿದ್ದಾರೆ.
ಕೋವಿಡ್ ಸಾಂಕ್ರಾಮಿಕ ರೋಗದ ಮೊದಲು, ಭಾರತದಿಂದ ಸುಮಾರು 75,000 ಜನರು ಪ್ರತಿ ವರ್ಷ ಕಾಂಬೋಡಿಯಾಕ್ಕೆ ಭೇಟಿ ನೀಡುತ್ತಿದ್ದರು ಮತ್ತು 2021 ರ ಅಂಕಿಅಂಶಗಳ ಪ್ರಕಾರ ಈ ಸಂಖ್ಯೆಯು ವರ್ಷಕ್ಕೆ ಸುಮಾರು 45,000 ಆಗಿದೆ ಎಂದು ರಾಯಭಾರಿ ಕಛೇರಿ ತಿಳಿಸಿದೆ.
ವೈದ್ಯಕೀಯ ಚಿಕಿತ್ಸೆ ಪಡೆಯಲು ಕಾಂಬೋಡಿಯಾದಿಂದ ಹೆಚ್ಚಿನ ಜನರು ಭಾರತಕ್ಕೆ ಬರುತ್ತಾರೆ ಎಂದು ಅವರು ನಿರೀಕ್ಷಿಸಿದ್ದಾರೆ, ಏಕೆಂದರೆ ನೆರೆಯ ದೇಶಗಳಿಗೆ ಹೋಲಿಸಿದರೆ ಚಿಕಿತ್ಸೆಯ ವೆಚ್ಚ ಭಾರತದಲ್ಲಿ ಕಡಿಮೆಯಾಗಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.