×
Home About Us Advertise With s Contact Us

ಎಪ್ರಿಲ್1ರಿಂದ ಕೇಂದ್ರ ಸರ್ಕಾರಿ ನೌಕರರಿಗೆ ಯೋಗ ತರಗತಿ

yogaನವದೆಹಲಿ: ಎಪ್ರಿಲ್ 1ರಿಂದ ದೇಶದಾದ್ಯಂತ ಇರುವ ಕೇಂದ್ರ ಸರ್ಕಾರಿ ನೌಕರರಿಗೆ ಯೋಗ ತರಗತಿಗಳನ್ನು ನಡೆಸಲು ನಿರ್ಧರಿಸಲಾಗಿದೆ.

‘ಡಿಪಾರ್ಟ್‌ಮೆಂಟ್ ಆಫ್ ಪರ್ಸನಲ್ ಆಂಡ್ ಟ್ರೈನಿಂಗ್ ಎಪ್ರಿಲ್ 1ರಿಂದ ನಿರಂತರ ಯೋಗ ತರಗತಿಗಳನ್ನು ನಡೆಸಲಿದೆ, ಇದರಿಂದ ಕೇಂದ್ರ ಸರ್ಕಾರಿ ನೌಕರರಿಗೆ ಮತ್ತು ಅವರ ಅವಲಂಭಿತರಿಗೆ ಸಾಕಷ್ಟು ಪ್ರಯೋಜನವಾಗಲಿದೆ’ ಎಂದು ಅಧಿಕೃತವಾಗಿ ಪ್ರಕಟನೆಯಲ್ಲಿ ತಿಳಿಸಲಾಗಿದೆ.

ಭಾನುವಾರ ಮತ್ತು ಇತರ ರಜೆ ದಿನಗಳನ್ನು ಹೊರತುಪಡಿಸಿ ಉಳಿದೆಲ್ಲಾ ದಿನವೂ ಯೋಗ ತರಗತಿಗಳು ನಡೆಯಲಿದೆ. ದೇಶದಲ್ಲಿ ಒಟ್ಟು 31 ಲಕ್ಷ ಕೇಂದ್ರ ಸರ್ಕಾರಿ ನೌಕರರಿದ್ದಾರೆ.

ಯೋಗ ತರಗತಿಗೆ ಯಾವುದೇ ಶುಲ್ಕ ಅಥವಾ ರಿಜಿಸ್ಟ್ರೇಶನ್ನಿನ ಅಗತ್ಯವಿರುವುದಿಲ್ಲ.
ಸಾಂಪ್ರದಾಯಿಕ ಔಷಧಿಯ ಪದ್ಧತಿ ಮತ್ತು ಯೋಗವನ್ನು ಪ್ರಚುರಪಡಿಸುವ ಮಹತ್ವದ ಉದ್ದೇಶದಿಂದ ಕೇಂದ್ರ ಈ ನಿರ್ಧಾರ ಕೈಗೊಂಡಿದೆ.

 

Recent News

Back To Top
error: Content is protected !!