ರಾಯ್ಪುರ: ಛತ್ತೀಸ್ಗಢದ ಬಿಜಾಪುರದಲ್ಲಿ ಶುಕ್ರವಾರ ನಡೆದ ಎನ್ಕೌಂಟರ್ನಲ್ಲಿ 12 ನಕ್ಸಲರು ಸಾವಿಗೀಡಾಗಿದ್ದಾರೆ. ಈ ಸಾವುಗಳ ಬಳಿಕ ಅಲ್ಲಿನ ಉಪ ಮುಖ್ಯಮಂತ್ರಿ ವಿಜಯ್ ಶರ್ಮಾ ಅವರು ಹಿಂಸೆ ತೊರೆದು ಸಮಾಜದ ಮುಖ್ಯ ವಾಹಿನಿಗೆ ಬರುವಂತೆ ನಕ್ಸಲರಿಗೆ ಮನವಿ ಮಾಡಿಕೊಂಡಿದ್ದಾರೆ.
“ನಾನು ನಕ್ಸಲರಿಗೆ ಮುಖ್ಯವಾಹಿನಿಗೆ ಸೇರಲು ಮತ್ತು ನಮ್ಮ ಸರ್ಕಾರದೊಂದಿಗೆ ಚರ್ಚಿಸಲು ಮನವಿ ಮಾಡುತ್ತೇನೆ, ನಾವು ಉತ್ತಮ ಸೌಲಭ್ಯಗಳನ್ನು ಒದಗಿಸಲು ಸಿದ್ಧವಾಗಿದ್ದೇವೆ, ಭವಿಷ್ಯದಲ್ಲಿ ಹೆಚ್ಚಿನ ಸೌಕರ್ಯ ಘೋಷಿಸಲಾಗುವುದು” ಎಂದು ಶರ್ಮಾ ತಿಳಿಸಿದರು. “ಸಮಸ್ಯೆಗಳಿಗೆ ಮಾತುಕತೆಯ ಮೂಲಕ ಪರಿಹಾರ ಕಂಡುಕೊಳ್ಳಬೇಕು. ಅಭಿವೃದ್ಧಿ ಪ್ರತಿ ಹಳ್ಳಿಗೂ ತಲುಪಬೇಕು. ಬಸ್ತಾರ್ನ ಜನರನ್ನು ಏಕೆ ಒತ್ತೆಯಾಳಾಗಿ ಇಡಬೇಕು?” ಎಂದು ಅವರು ನಕ್ಸಲರನ್ನು ಪ್ರಶ್ನಿಸಿದ್ದಾರೆ.
ಭದ್ರತಾ ಪಡೆಗಳ ಕಾರ್ಯಾಚರಣೆ ಕುರಿತು ಮಾತನಾಡಿದ ಅವರು, ಬಿಜಾಪುರ ಮತ್ತು ದಾಂತೇವಾಡದ ಡಿಆರ್ಜಿ, ಎಸ್ಟಿಎಫ್ ಮತ್ತು ಕೋಬ್ರಾ ಬೆಟಾಲಿಯನ್ಗಳ ಸುಮಾರು ಒಂದು ಸಾವಿರ ಯೋಧರು ಜಂಟಿ ಕಾರ್ಯಾಚರಣೆಗೆ ಹೊರಟಿದ್ದರು, ಅದೃಷ್ಟವಶಾತ್ ಕಾರ್ಯಾಚರಣೆಯಲ್ಲಿ ನಮ್ಮ ಯಾವುದೇ ಸೈನಿಕರಿಗೆ ಗಾಯವಾಗಿಲ್ಲ ಎಂದಿದ್ದಾರೆ.
ಛತ್ತೀಸ್ಗಢ ಮುಖ್ಯಮಂತ್ರಿ ವಿಷ್ಣು ದೇವ್ ಸಾಯಿ ಅವರು ಕಾರ್ಯಾಚರಣೆಯ ನಂತರ ಭದ್ರತಾ ಪಡೆಗಳನ್ನು ಅಭಿನಂದಿಸಿದರು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.