ಮುಂಬಯಿ: ಮುಂಬಯಿ ಮಹಾ ನಗರದಲ್ಲಿ ಅಕ್ರಮವಾಗಿ ನೆಲೆಸಿಕೊಂಡು ನಕಲಿ ದಾಖಲೆಗಳನ್ನು ಸಲ್ಲಿಸಿ ಆಧಾರ್ ಕಾರ್ಡ್ ಪಡೆದಿದ್ದಕ್ಕಾಗಿ 26 ವರ್ಷದ ಬಾಂಗ್ಲಾದೇಶದ ಮಹಿಳೆಯನ್ನು ಪೊಲೀಸರು ಬಂಧಿಸಿದ್ದಾರೆ.
ಡಿಬಿ ಮಾರ್ಗ್ ಪೊಲೀಸರ ಪ್ರಕಾರ, ಮಹಿಳೆ ಜೂಲಿ ನಜ್ರುಲ್ ಇಸ್ಲಾಂ ಮಂಡಲ್ ಅಲಿಯಾಸ್ ಪ್ರಿಯಾಂಕಾ ಜಕಾರಿಯಾ ಮುಲ್ಲಾ ಬಾಂಗ್ಲಾದೇಶದ ಖುಲ್ನಾದ ಚಾಂದ್ಪುರ ಗ್ರಾಮದ ನಿವಾಸಿ. ಈಕೆ ಅಕ್ರಮವಾಗಿ ಭಾರತ ಪ್ರವೇಶಿಸಿದ್ದಾಳೆ ಎನ್ನಲಾಗಿದೆ.
“ಬಾಂಗ್ಲಾದೇಶದ ಮಹಿಳೆಯ ಸಹಾಯದಿಂದ ಅವಳು ಭಾರತಕ್ಕೆ ಬಂದಳು, ಆ ಮಹಿಳೆಯೇ ಇವಳಿಗೆ ಗಡಿ ದಾಟಲು ಸಹಾಯ ಮಾಡಿದಳು. ಮಹಿಳೆ ತನ್ನನ್ನು ಪಶ್ಚಿಮ ಬಂಗಾಳದಲ್ಲಿ ದೋಣಿಯಲ್ಲಿ ಕುಳ್ಳಿಸಿ ಕಳುಹಿಸಿದರು ಎಂದು ಮಂಡಲ್ ಹೇಳಿಕೊಂಡಿದ್ದಾಳೆ. ಪಶ್ಚಿಮ ಬಂಗಾಳದಲ್ಲಿ ಕೆಲವು ದಿನ ತಂಗಿದ್ದ ಅವಳು ಬಳಿಕ ರೈಲಿನಲ್ಲಿ ಮುಂಬೈಗೆ ಪ್ರಯಾಣಿಸಿದಳು. ಮನೆಯ ಸಹಾಯಕಿಯಾಗಿಯೂ ಈಗ ಕೆಲಸ ಮಾಡಿದ್ದಾಳೆ” ಎಂದು ಅಧಿಕಾರಿಯೊಬ್ಬರು ಹೇಳಿದ್ದಾರೆ.
ಬಾಂಗ್ಲಾದೇಶದ ಹಲವಾರು ಸಂಖ್ಯೆಗಳು ಮತ್ತು ಆಧಾರ್ ಕಾರ್ಡ್ನ ವಿವರಗಳನ್ನು ಒಳಗೊಂಡ ಫೋನ್ ಅನ್ನು ಪೊಲೀಸರು ಆಕೆಯಿಂದ ವಶಪಡಿಸಿಕೊಂಡಿದ್ದಾರೆ. ಯಾವುದೇ ಮಾನ್ಯ ಪ್ರಯಾಣ ದಾಖಲೆಗಳಿಲ್ಲದೆ ಮತ್ತು ಭಾರತ-ಬಾಂಗ್ಲಾದೇಶ ಗಡಿಯಲ್ಲಿ ಅಧಿಕಾರಿಗಳಿಂದ ಲಿಖಿತ ಅನುಮತಿಯಿಲ್ಲದೆ ಮಂಡಲ್ ಅಕ್ರಮವಾಗಿ ಒಳನುಸುಳುವಿಕೆಯಿಂದ ಭಾರತವನ್ನು ಪ್ರವೇಶಿಸಿದ್ದಾಳೆ ಎಂದು ಪೊಲೀಸರು ತಿಳಿಸಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.