ತಿರುವನಂತಪುರಂ: ಕೇರಳ ರಾಜ್ಯಪಾಲ ಆರಿಫ್ ಮೊಹಮ್ಮದ್ ಖಾನ್ ಬುಧವಾರ ಅಯೋಧ್ಯೆಯ ರಾಮ ಮಂದಿರಕ್ಕೆ ಭೇಟಿ ನೀಡಿ ದೇವರಿಗೆ ನಮಿಸಿದರು.
ಕೇರಳ ರಾಜಭವನದ ಎಕ್ಸ್ ಪೋಸ್ಟ್ನಲ್ಲಿ, ರಾಜ್ಯಪಾಲರು ರಾಮ ಮಂದಿರಕ್ಕೆ ಭೇಟಿ ನೀಡಿದ ಮತ್ತು ದರ್ಶನ ಪಡೆದ ವಿಡಿಯೋ ಹಂಚಿಕೊಳ್ಳಲಾಗಿದೆ.
“ಜನವರಿಯಲ್ಲಿ ಎರಡು ಬಾರಿ ಅಯೋಧ್ಯೆಗೆ ಬಂದಿದ್ದೆ. ಅಂದಿನ ಭಾವನೆ ಇಂದಿಗೂ ಹಾಗೆಯೇ ಇದೆ. ನಾನು ಅಯೋಧ್ಯೆಗೆ ಹಲವು ಬಾರಿ ಬಂದಿದ್ದೇನೆ. ಇದು ನಮಗೆ ಸಂತೋಷದ ವಿಷಯವಲ್ಲ, ಬದಲಾಗಿ ಹೆಮ್ಮೆಯ ವಿಷಯವಾಗಿದೆ. ಅಯೋಧ್ಯೆ ಮತ್ತು ಶ್ರೀರಾಮನನ್ನು ಪೂಜಿಸುತ್ತಿದ್ದೇನೆ” ಎಂದು ರಾಜ್ಯಪಾಲರು ಸುದ್ದಿಗಾರರಿಗೆ ತಿಳಿಸಿದರು.
ಕೇರಳ ರಾಜ್ಯಪಾಲರ ಅಧಿಕೃತ ಎಕ್ಸ್ ಹ್ಯಾಂಡಲ್ನಲ್ಲಿ ಪೋಸ್ಟ್ ಮಾಡಲಾದ ವೀಡಿಯೋದಲ್ಲಿ ಖಾನ್ ಅವರು ರಾಮ್ ಲಲಾ ವಿಗ್ರಹದ ಮುಂದೆ ನಮಸ್ಕರಿಸುತ್ತಿರುವುದನ್ನು ಕಾಣಬಹುದು ಮತ್ತು ‘ಜೈ ಶ್ರೀ ರಾಮ್’ ಎಂಬ ಘೋಷಣೆಯನ್ನು ಕೇಳಬಹುದು.
Hon'ble Governor Shri Arif Mohammed Khan at Prabhu Shri Ram Temple Ayodhya: PRO KeralaRajBhavan pic.twitter.com/wCzZCSirLt
— Kerala Governor (@KeralaGovernor) May 8, 2024
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.